ಮುಂಬೈ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ನಡೆಯುತ್ತಿರುವ ಪಂದ್ಯಾಟದಲ್ಲಿ ಮುಂಬೈ ಹಿರಿಯರ ತಂಡದಲ್ಲಿ ಬ್ಯಾಟಿಂಗ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಕಣಕ್ಕಿಳಿದಿದ್ದಾರೆ.
Advertisement
21 ವರ್ಷದ ಅರ್ಜುನ್ ತೆಂಡೂಲ್ಕರ್ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ 3 ಓವರ್ ಎಸೆದು 1 ವಿಕೆಟ್ ಕಿತ್ತಿದ್ದಾರೆ.
Advertisement
ಅಲ್‍ರೌಂಡರ್ ಆಗಿರುವ ಅರ್ಜುನ್ ತೆಂಡೂಲ್ಕರ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಒಂದು ವಿಕೆಟ್ ಕಿತ್ತು ಭರವಸೆ ಮೂಡಿಸಿದ್ದಾರೆ. ಆದರೂ ಈ ಪಂದ್ಯದಲ್ಲಿ ಮುಂಬೈ ಸೋಲನ್ನು ಅನುಭವಿಸಿದೆ.
Advertisement
Advertisement
ಮುಂಬೈನ ಬಾಂದ್ರ ಕುರ್ಲಾ ಕಾಂಪ್ಲೆಕ್ಸ್ ಶರದ್ ಪವಾರ್ ಕ್ರಿಕೆಟ್ ಮೈದಾನದಲ್ಲಿ ನಡದ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 143 ರನ್ ಗಳಿಸಿತು. ಈ ಸಾಧಾರಣ ಮೊತ್ತವನ್ನು ಚೇಸ್ ಮಾಡಲು ಹೊರಟ ಹರಿಯಾಣ ತಂಡದ ಪರ ಹಿಮಾಂಶು ರಾಣಾ 75 ರನ್(53 ಎಸೆತ)ರನ್ ಹೊಡೆದು 17.4 ಓವರ್ ಗಳಲ್ಲಿ ಪಂದ್ಯ ಗೆಲ್ಲಿಸಿಕೊಟ್ಟರು.
Here's the exclusive video of Arjun Tendulkar getting his first wicket!!
Wicket on debut ❤️????????#SyedMushtaqAliT20 #SyedMushtaqAliTrophy pic.twitter.com/fyB6rP16qq
— Vinesh Prabhu (@vlp1994) January 15, 2021
ಅರ್ಜುನ್ ತೆಂಡೂಲ್ಕರ್ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ 3 ಓವರ್ ಮಾಡಿ 34ರನ್ ಬಿಟ್ಟುಕೊಟ್ಟರು. ಇವರ ಮೊದಲ ವಿಕೆಟ್ ಸಂಭ್ರಮಕ್ಕೆ ವಿಕೆಟ್ ಒಪ್ಪಿಸಿದವರು ಹರಿಯಾಣ ತಂಡದ ಆರಂಭಿಕ ಆಟಗಾರ ಚೈತ್ಯ ಬಿಷ್ಣೋಯ್. ಇವರ ವಿಕೆಟ್ ಪಡೆಯುವ ಮೂಲಕ ಮೊದಲ ವಿಕೆಟ್ ಪಡೆದು ಆರಂಭಿಕ ಯಶಸ್ಸು ತಂದು ಕೊಟ್ಟಿದ್ದರು. ಈ ಮೂಲಕ ಮುಂಬೈ ತಂಡಕ್ಕೆ ಮುಂದಿನ ಪಂದ್ಯಗಳಲ್ಲಿ ಭರವಸೆ ಮೂಡಿಸಿದ್ದಾರೆ.