– ಸ್ಲಂನಲ್ಲಿ ಯಾವುದೇ ಸಂಪರ್ಕ ಇಲ್ಲದೇ ಕೊರೊನಾ ಪತ್ತೆ
ಬೆಂಗಳೂರ: ಮುಂಬೈ ಮಹಾನಗರಕ್ಕೆ ಭಾರೀ ಸಂಕಷ್ಟ ತಂದಿದ್ದು ಧಾರಾವಿ ಸ್ಲಂ ಪ್ರದೇಶ. ಅದೇ ಸಮಸ್ಯೆ ಬೆಂಗಳೂರಿಗೂ ಎದುರಾಗುತ್ತಾ ಎನ್ನುವ ಅನುಮಾನ ಶುರುವಾಗಿದೆ.
ಪುಲಿಕೇಶಿ ನಗರ ಕ್ಷೇತ್ರದ ಎಸ್.ಕೆ. ಗಾರ್ಡನ್ ಸ್ಲಂ ಪ್ರದೇಶದ 38 ವರ್ಷದ ಮಹಿಳೆಗೆ ಕೊರೊನಾ ತಗುಲಿದೆ. ಅವರನ್ನು ರೋಗಿ-2180 ಎಂದು ಗುರುತಿಸಲಾಗಿದೆ. ಅವರು ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದಾಗಿ ಕೊರೊನಾ ಟೆಸ್ಟ್ ಮಾಡಲಾಗಿದ್ದು, ರಿಪೋರ್ಟ್ ಪಾಸಿಟಿವ್ ಬಂದಿದೆ.
Advertisement
Advertisement
ಮಹಿಳೆ ಪ್ರಾಥಮಿಕ ಸಂಪರ್ಕಿದಲ್ಲಿ 35 ಜನರಿದ್ದರು. ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಉಳಿದಂತೆ ದ್ವಿತೀಯ ಸಂಪರ್ಕಿತರ ಮಾಹಿತಿ ಕಲೆ ಹಾಕಲಾಗುತ್ತಿದೆ. ಆದರೆ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ನಿಗೂಢವಾಗಿದೆ. ಹೀಗಾಗಿ ಎಸ್.ಕೆ. ಗಾರ್ಡನ್ ಸ್ಲಂನಿಂದ ಬೆಂಗಳೂರಿಗೆ ಕಂಟಕ ಹೆಚ್ಚಾಗುತ್ತೆ ಎಂಬ ಮಾತುಗಳು ಕೇಳಿ ಬರುತ್ತಿವೆ.