ಕೋಲ್ಕತ್ತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಕೇಂದ್ರದ ನಡುವಿನ ಸಂಘರ್ಷ ಮುಂದುವರಿದಿದೆ. ಇದೀಗ ಮಮತಾ ಬ್ಯಾನರ್ಜಿ ಅವರ ಒಂಬತ್ತು ಪ್ರಶ್ನೆಗಳಿಗೆ ಕೇಂದ್ರ ಉತ್ತರ ನೀಡಿದೆ.
ಯಾಸ್ ಸೈಕ್ಲೋನ್ ಗೆ ಸಂಬಂಧಿಸಿದ ಪ್ರಧಾನಿಗಳ ನೇತೃತ್ವದ ಸಭೆಗೆ ಮಮತಾ ಬ್ಯಾನರ್ಜಿ 30 ನಿಮಿಷ ತಡವಾಗಿ ಬಂದಿದ್ದರು. ಈ ವಿಷಯವಾಗಿ ಬಿಜೆಪಿ ಮತ್ತು ಟಿಎಂಸಿ ನಾಯಕರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದರು. ಈ ಕುರಿತು ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿ, ಕೇಂದ್ರದ ಮುಂದೆ ಹಲವು ಪ್ರಶ್ನೆಗಳನ್ನಿರಿಸಿದ್ದರು. ಈಗ ಕೇಂದ್ರ ಪ್ರತಿ ಪ್ರಶ್ನೆಗೆ ಉತ್ತರ ನೀಡುವ ಮೂಲಕ ತಿರುಗೇಟು ನೀಡಿದೆ.
Advertisement
Advertisement
1. ಮಮತಾ ಬ್ಯಾನರ್ಜಿ: ಪ್ರಧಾನಮಂತ್ರಿಗಳ ಕಾರ್ಯಕ್ರಮದ ಬಗ್ಗೆ ನನಗೆ ತಡವಾಗಿ ಮಾಹಿತಿ ಲಭ್ಯವಾಯ್ತು. ಹಾಗಾಗಿ ಪ್ರಧಾನಿಗಳ ಕಾರ್ಯಕ್ರಮಕ್ಕನುಗುಣವಾಗಿ ನನ್ನ ಶೆಡ್ಯೂಲ್ ಅವಧಿಯನ್ನ ಕಡಿತ ಮಾಡಿಕೊಂಡೆ.
ಕೇಂದ್ರದ ಉತ್ತರ: ಪ್ರಧಾನಿಗಳ ಪ್ರವಾಸ ಚಂಡಮಾರುತದ ಹಾನಿಯ ಕುರಿತಾಗಿತ್ತು. ಸೈಕ್ಲೋನ್ ಕುರಿತ ಸಭೆಗಳ ಸಮಯ ಮೊದಲೇ ಹೇಗೆ ನಿಗದಿ ಮಾಡಲಾಗುತ್ತೆ. ಅಂಫಾನ್ ವೇಳೆಯೂ ಇದೇ ರೀತಿ ಟೈಮ್ ಲೈನ್ ಫಾಲೋ ಮಾಡಲಾಗಿತ್ತು. ಓಡಿಶಾ ಮತ್ತು ಬಂಗಾಲಕ್ಕೆ ಸಮಯದ ಮಾಹಿತಿ ನೀಡಲಾಗಿತ್ತು. ಓಡಿಶಾ ಅಚ್ಚುಕಟ್ಟಾಗಿ ತಯಾರಿ ನಡೆಸಿತ್ತು. ಅಲ್ಲಿ ಮೊದಲೇ ಸೈಕ್ಲೋನ್ ಅಪ್ಪಳಿಸಿತ್ತು.
Advertisement
2. ಮಮತಾ ಬ್ಯಾನರ್ಜಿ: ನಾನು ಪ್ರಧಾನಿಗಳಿಗಾಗಿ ವೇಟ್ ಮಾಡಿದ್ದೇನೆ.
ಕೇಂದ್ರದ ಉತ್ತರ: ಕುಲೈಕೂಂಡಾಗೆ ಪ್ರಧಾನಿಗಳು ಮಧ್ಯಾಹ್ನ 1.59 ನಿಮಿಷಕ್ಕೆ ಆಗಮಿಸಿದರು. ಆದ್ರೆ ಮಮತಾ ಬ್ಯಾನರ್ಜಿ ತಲುಪಿದ್ದು 2 ಗಂಟೆ 10 ನಿಮಿಷಕ್ಕೆ. ಇಲ್ಲಿ ಯಾರು, ಯಾರಿಗೆ ಕಾದಿದ್ದಾರೆ ಅನ್ನೋದು ತಿಳಿಯುತ್ತೆ. ಲ್ಯಾಂಡಿಂಗ್ ಬಳಿಕ 25 ನಿಮಿಷ ಬಳಿಕ ಪ್ರಧಾನಿಗಳನ್ನ ಭೇಟಿ, ಸಭೆಯಲ್ಲಿದ್ದು ಹೊರಟರು.
Advertisement
3. ಮಮತಾ ಬ್ಯಾನರ್ಜಿ: ನನ್ನ ಕಾರ್ಯಕ್ರಮಗಳು ಮೊದಲೇ ನಿಗದಿಯಾಗಿದ್ದವು. ಪ್ರತಿಬಾರಿಗೂ ಮುಖ್ಯಮಂತ್ರಿಗಳೇ ಪ್ರಧಾನಿಗಳನ್ನ ಸ್ವಾಗತ ಮಾಡಬೇಕು ಅಂತೇನಿಲ್ಲ. ನಮಗೂ ನಮ್ಮದೇ ಕಾರ್ಯಕ್ರಮಗಳಿರುತ್ತವೆ.
ಕೇಂದ್ರದ ಉತ್ತರ: ಸಭೆಯಲ್ಲಿ ಭಾಗಿಯಾಗೋದರ ಬಗ್ಗೆ ಮಮತಾ ಬ್ಯಾನರ್ಜಿ ಹೇಳಿದ್ದರು. ಆದ್ರೆ ಸಭೆಯಲ್ಲಿ ವಿಪಕ್ಷ ನಾಯಕ ಭಾಗಿಯಾಗಿದ್ದಕ್ಕೆ ಹಿಂದಿರುಗಿದರು. ಕಾರ್ಯಕ್ರಮದಿಂದ ಹೊರ ಬರಲು ಇದೇ ಪ್ರಮುಖ ಕಾರಣ.
4. ಮಮತಾ ಬ್ಯಾನರ್ಜಿ: ಸಾಗರದಲ್ಲಿ ಪಿಎಂ ಹೆಲಿಕಾಪ್ಟರ್ ಲ್ಯಾಂಡ್ ಮುನ್ನ 20 ನಿಮಿಷ ಕಾಯಬೇಕಾಗಿ ಬಂತು
ಕೇಂದ್ರದ ಉತ್ತರ: ಪ್ರಧಾನಿಗಳು ಆಗಮನ ವೇಳೆ ಈ ರೀತಿಯ ಭದ್ರತಾ ವ್ಯವಸ್ಥೆ ಇರುತ್ತೆ. ಪಿಎಂ ಭದ್ರತೆ ಎಸ್‍ಪಿಜಿ ನಿಯಂತ್ರಣದಲ್ಲಿದ್ದು, ಅದು ಅವರ ವೃತ್ತಿ.
5. ಮಮತಾ ಬ್ಯಾನರ್ಜಿ: ಮುಖ್ಯ ಕಾರ್ಯದರ್ಶಿ ಕುರಿತ ಆದೇಶ ಆಶ್ಚರ್ಯವನ್ನುಂಟು ಮಾಡಿತು. ಇಲ್ಲಿ ರಾಜ್ಯ ಸರ್ಕಾರದ ಸಲಹೆ ಪಡೆಯಲಿಲ್ಲ. ಇದು ಸಂವಿಧಾನದ ಉಲ್ಲಂಘನೆ
ಕೇಂದ್ರದ ಉತ್ತರ: ಆದೇಶ ಸರಿಯಾಗಿ ಮತ್ತು ಕಾನೂನುಬದ್ಧವಾಗಿದೆ. ಚೀಫ್ ಸೆಕ್ರೆಟರಿ ಆಲ್ ಇಂಡಿಯಾ ಕೆಡರ್ ಆಫಿಸರ್. ಅವರು ತಮ್ಮ ಸಂವಿಧಾನಿಕ ಕರ್ತವ್ಯದ ಪಾಲನೆ ಮಾಡಿಲ್ಲ. ಪ್ರಧಾನಿಗಳಿಗೆ ಸಭೆಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಸಭೆಯಲ್ಲಿ ಬಂಗಾಳ ಸರ್ಕಾರದ ಯಾವುದೇ ಪ್ರತಿನಿಧಿಗಳು ಭಾಗಿಯಾಗಿರಲಿಲ್ಲ. ಚೀಫ್ ಸೆಕ್ರಟರಿ ಅವರ ನಿವೃತ್ತಿ ಮಮತಾ ಬ್ಯಾನರ್ಜಿ ಹಿಡಿತದಲ್ಲಿದ್ದರು ಎಂಬುವುದು ತಿಳಿಯುತ್ತೆ.
6. ಮಮತಾ ಬ್ಯಾನರ್ಜಿ: ಚೀಫ್ ಸೆಕ್ರೆಟರಿ ಅವರ ಸೇವಾವಧಿಯನ್ನ ವಿಸ್ತರಿಸಲಾಗಿತ್ತು. ಆದ್ರೆ ರಾಜತಾಂತ್ರಿಕ ಒಪ್ಪಿಗೆ ಪಡೆಯಲಾಗಿತ್ತು. ಈ ಅನುಮತಿ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೇಂದ್ರದ ಉತ್ತರ: ಕೇಂದ್ರ ರಾಜ್ಯ ಸರ್ಕಾರದ ಜೊತೆಯಲ್ಲಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
7. ಮಮತಾ ಬ್ಯಾನರ್ಜಿ: ಪಿಎಂ-ಸಿಎಂ ಸಭೆಗೆ ಓರ್ವ ಸ್ಥಳೀಯ ಶಾಸಕ ಭಾಗಿಯಾಗಿದ್ದರು. ಆದ್ರೆ ಕೇಂದ್ರ ಸಚಿವರು ಅಥವಾ ರಾಜ್ಯಪಾಲರ ಭಾಗಿಯಾಗಲು ಆಕ್ಷೇಪ ವ್ಯಕ್ತವಾಗಿತ್ತು.
ಕೇಂದ್ರದ ಉತ್ತರ: ಸಭೆಯಲ್ಲಿ ಭಾಗಿಯಾದ್ದು ವಿರೋಧ ಪಕ್ಷದ ನಾಯಕ. ಜೊತೆಗೆ ಅವರ ಕ್ಷೇತ್ರವೂ ಯಾಸ್ ನಿಂದ ಹಾನಿಗೆ ಒಳಗಾಗಿತ್ತು. ಈ ರೀತಿ ಹಲವು ಸಂದರ್ಭಗಳಲ್ಲಿ ನಡೆದಿದ್ದು, ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಅನೇಕ ಪಕ್ಷದ ನಾಯಕರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಮುಂದೊಂದಿನ ಭಾರತಕ್ಕೂ ಮೋದಿ ಹೆಸರಿಡಬಹುದು: ಮಮತಾ ಬ್ಯಾನರ್ಜಿ
8. ಮಮತಾ ಬ್ಯಾನರ್ಜಿ: ಮೀಟಿಂಗ್ ಮೊದಲೇ ಚೀಫ್ ಸೆಕ್ರಟರಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಆದ್ರೆ ಆ ಕಡೆಯಿಂದ ನಮಗೆ ಯಾವುದೇ ಉತ್ತರ ಸಿಗಲಿಲ್ಲ.
ಕೇಂದ್ರದ ಉತ್ತರ: ವಿಪಕ್ಷ ನಾಯಕ ಭಾಗಿಯಾದ ಕಾರಣಕ್ಕೆ ಮಮತಾ ಬ್ಯಾನರ್ಜಿ ಸಭೆಯನ್ನ ಬಹಿಷ್ಕರಿಸಿದ್ರು. ಆದ್ರೆ ಕೇಂದ್ರ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಪರಿಶೀಲನೆ ಬಳಿಕ ಪ್ರಧಾನಿಗಳು ಮುಖ್ಯಮಂತ್ರಿಗಳನ್ನ ಭೇಟಿಯಾಗಬೇಕಿತ್ತು. ಇದನ್ನೂ ಓದಿ: ಮುಖ್ಯ ಕಾರ್ಯದರ್ಶಿಗಾಗಿ ದೀದಿ V/s ಮೋದಿ – ಮತ್ತೆ ಕೇಂದ್ರದ ವಿರುದ್ಧ ಸಿಡಿದ ಮಮತಾ ಬ್ಯಾನರ್ಜಿ
9. ಮಮತಾ ಬ್ಯಾನರ್ಜಿ: ಚೀಫ್ ಸೆಕ್ರಟರಿ ಜೊತೆಯಲ್ಲಿ ಸಭೆಗೆ ಬಂದೆ. ವರದಿಯನ್ನ ನೀಡಿ ಪ್ರಧಾನಿಗಳ ಬಳಿಯೇ ಅನುಮತಿ ಪಡೆದು ದೀಧಾನತ್ತ ಪ್ರಯಾಣ ಬೆಳೆಸಿದೆ.
ಕೇಂದ್ರದ ಉತ್ತರ: ಪ್ರಧಾನಮಂತ್ರಿಗಳು ಮಮತಾ ಬ್ಯಾನರ್ಜಿ ಅವರಿಗೆ ಸಭೆಯಿಂದ ಹೊರ ಬರಲು ಅನುಮತಿ ನೀಡಿರಲಿಲ್ಲ. ಇದನ್ನೂ ಓದಿ: ಮೂರನೇ ಬಾರಿ ಬಂಗಾಳದ ಗದ್ದುಗೆ ಏರಿದ ಮಮತಾ ಬ್ಯಾನರ್ಜಿ