– ಬೆಂಗಳೂರಿನಲ್ಲಿ 19,353 ಕೇಸ್ – 162 ಸಾವು
ಬೆಂಗಳೂರು: ಇಂದು ಕೂಡ ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ ಒಟ್ಟು 40,990 ಮಂದಿಗೆ ಕೊರೊನಾ ಬಂದಿದ್ದು, ರಾಜ್ಯಾದ್ಯಂತ ಒಟ್ಟು 271 ಜನ ಕೊರೊನಾಗೆ ಬಲಿಯಾಗಿದ್ದಾರೆ.
Advertisement
ಬೆಂಗಳೂರಿನಲ್ಲಿ ನಿನ್ನೆಗಿಂತ ಕಡಿಮೆ ಕೇಸ್ ಬಂದಿದ್ದು, 19,353 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಗರದ 21 ವರ್ಷದ ಯುವಕ ಸೇರಿ ಒಟ್ಟು 162 ಜನ ಬಲಿಯಾಗಿದ್ದಾರೆ. ಬೆಂಗಳೂರಿನ ಬಳಿಕ ಮೈಸೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚಳ ಕಂಡಿದ್ದು, ಇಂದು 3,529 ಪ್ರಕರಣ ದಾಖಲಾಗಿದೆ.
Advertisement
Advertisement
ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,05,068ಕ್ಕೆ ಏರಿಕೆ ಕಂಡಿದೆ. ಇಂದು ರಾಜ್ಯದಲ್ಲಿ ಒಟ್ಟು 98,402 ಮಂದಿಗೆ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15,64,131ಕ್ಕೆ ಏರಿಕೆ ಕಂಡಿದೆ. ಈ ಪೈಕಿ 11,43,250 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Advertisement
ಒಟ್ಟು ಇಲ್ಲಿಯವರೆಗೆ 15,794 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಂದು 13,279 ಆಂಟಿಜನ್ ಟೆಸ್ಟ್, 1,64,703 ಆರ್ ಟಿ ಪಿಸಿಆರ್ ಸೇರಿದಂತೆ ಒಟ್ಟು 1,77,982 ಕೊರೊನಾ ಪರೀಕ್ಷೆ ಮಾಡಲಾಗಿದೆ.
ತುಮಕೂರು 2,308, ಕಲಬುರಗಿ 1,407, ಮಂಡ್ಯ 1,235, ಬಳ್ಳಾರಿ 1,163, ಕೊಪ್ಪಳ 1019 ದಕ್ಷಿಣ ಕನ್ನಡ 933, ಚಿಕ್ಕಬಳ್ಳಾಪುರದ 820, ಹಾಸನ 790, ಉತ್ತರ ಕನ್ನಡ 687 ಮತ್ತು ಉಡುಪಿಯ 670 ಮಂದಿಗೆ ಸೋಂಕು ಬಂದಿದೆ.