ಮುಂದಿನ 5 ದಿನ ರಾಜ್ಯಾದ್ಯಂತ ಮಳೆ

Public TV
1 Min Read
bdr rain

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಜುಲೈ 11 ರಂದು ವಾಯುಭಾರ ಕುಸಿತವಾಗಿದ್ದು,  ಮುಂದಿನ 5 ದಿನ ರಾಜ್ಯಾದ್ಯಂತ ಮಳೆಯಾಗಲಿದೆ.

ಪಬ್ಲಿಕ್ ಟಿವಿಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಗವಾಸ್ಕರ್ ಮಳೆಯಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ.

rain 5 1 medium

ವಾಯುಭಾರ ಕುಸಿತದಿಂದ ಮುಂದಿನ 5 ದಿನ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಇರಲಿದೆ. 5 ದಿನ ಬಿಸಿಲು ಕಡಿಮೆ ಇರಲಿದೆ ಎಂದು ತಿಳಿಸಿದರು. ಇದನ್ನೂ ಓದಿ : ಈ ಕೇಸಿಗೆ ಮಂಗಳ ಹಾಡಿದ್ದೇವೆ, ಇದನ್ನು ಬಿಟ್ಟುಬಿಡಿ – ದರ್ಶನ್

ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ತುಂತುರು ಮಳೆ ಮಳೆಯಾಗಿದೆ. ಸಣ್ಣ ಚಳಿಯ ವಾತಾವರಣವಿದೆ. ಕೆ.ಆರ್.ಸರ್ಕಲ್, ಆನಂದರಾವ್ ಸರ್ಕಲ್, ಫ್ರೀಡಂ ಪಾರ್ಕ್, ಅವೆನ್ಯೂ ರೋಡ್ ಸುತ್ತಮುತ್ತ ಜಿಟಿ ಜಿಟಿ ಮಳೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *