ಬೆಂಗಳೂರು: ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಿ ಬೆಂಗಳೂರಿನ ಅಭಿವೃದ್ಧಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರು ಮಿಷನ್ 2022 ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ಅಭಿವೃದ್ಧಿಗೆ ಒತ್ತು ಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ಕೊಟ್ಟಿದ್ದಾರೆ. ಸದಾ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲಿ ಎಂದು ಸಲಹೆ ಕೊಟ್ಟಿದ್ದರು. ಪ್ರಧಾನಿ ಅವರ ಉತ್ತೇಜನದಿಂದ ಪ್ರಭಾವಿತನಾಗಿ ಬೆಂಗಳೂರು ಅಭಿವೃದ್ಧಿಗೆ ಮುಂದಾಗಿದ್ದೇನೆ ಎಂದು ಸಿಎಂ ಹೇಳಿದರು.
Advertisement
Advertisement
ಹಸಿರು ಬೆಂಗಳೂರು ನಿರ್ಮಾಣ ಗುರಿ ಹೊಂದಿದ್ದೇವೆ. ಸುಗಮ ಸಂಚಾರಕ್ಕೆ ಆದ್ಯತೆ ನೀಡಲಾಗುತ್ತಿದೆ. ಮೂಲಸೌಕರ್ಯಗಳ ಪೂರೈಕೆಗೆ ಗಮನ ಹರಿಸಲಾಗುತ್ತದೆ. ನಗರದ ಸಮಸ್ಯೆಗಳ ಕೂಲಂಕುಷ ಅಧ್ಯಯನ ಮಾಡಲಾಗಿದೆ. ಬೆಂಗಳೂರನ್ನು ವಿಶ್ವದರ್ಜೆಗೆ ಏರಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ. ಬೆಂಗಳೂರಿನಲ್ಲಿ ಅತ್ಯುತ್ತಮ ರಸ್ತೆಗಳ ನಿರ್ನಾಣ ಗುರಿ ಹೊಂದಲಾಗಿದೆ. ಮೆಟ್ರೋ ಜಾಲದ ವಿಸ್ತರಣೆ, 2022 ರೊಳಗೆ ಮೆಟ್ರೋದಲ್ಲಿ ನಿತ್ಯ ಹತ್ತು ಲಕ್ಷ ಪ್ರಯಾಣಿಕರ ಪ್ರಯಾಣದ ಗುರಿ ಹೊಂದಲಾಗಿದೆ. ಎಲಿವೇಟೆಡ್ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ ಎಂದರು.
Advertisement
Advertisement
ಸ್ವಚ್ಛ ಬೆಂಗಳೂರು ನಿರ್ಮಾಣ, ವೈಜ್ಞಾನಿಕ ಕಸ ವಿಲೇವಾರಿ, ಜನಸಮುದಾಯದ ಸಹಭಾಗಿತ್ವದಲ್ಲಿ ತ್ಯಾಜ್ಯ ವಿಲೇವಾರಿ, ಹಸಿರು ಬೆಂಗಳೂರು ನಿರ್ಮಾಣ, ಪ್ರಮುಖ ರಸ್ತೆಗಳ ಎರಡೂ ಬದಿ ಗಿಡ, ಮರಗಳು, ಕಳೆದು ಹೋದ ಬೆಂಗಳೂರು ಸೌಂದರ್ಯ ಮತ್ತೆ ತರಲು ಯೋಜನೆ, ಹಸಿರು ನಿರ್ಮಾಣದ ಜೊತೆಗೆ ರಾಜಾಕಾಲುವೆಗಳ ನಿರ್ಮಾಣ ಮಾಡಲಾಗುವುದು. ನಗರ ಸೌಂದರ್ಯಕ್ಕೆ ಪೂರಕವಾದ ರಾಜಾಕಾಲುವೆಗಳ ನಿರ್ಮಾಣ ಮಾಡಲಾಗುವುದು. 2022 ರ ವರೆಗೆ ಸಂಪೂರ್ಣ ತ್ಯಾಜ್ಯ ಸಂಸ್ಕರಣಾ ನೀರು ಘಟಕ ಸ್ಥಾಪನೆ ಗುರಿ ಹೊಂದಲಾಗಿದೆ ಎಂದರು.
ಶುದ್ಧ ಗಾಳಿ, ನೀರು, ಹಸಿರು ಇರುವ ಬೆಂಗಳೂರು ನಿರ್ಮಾಣ, ನಾಗರಿಕರ ಜತೆ ಸ್ಥಳೀಯಾಡಳಿತ ಸಂಸ್ಥೆಗಳ ಸಂಬಂಧ ವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಖಾತೆ, ತೆರಿಗೆ ಪಾವತಿ, ವ್ಯಾಪಾರ ಪರವಾನಗಿ, ಡಿವೈ ಮರಣ ಪ್ರಮಾಣಪತ್ರಗಳನ್ನು ಸುಲಭವಾಗಿ ಪಡೆಯುವ ವ್ಯವಸ್ಥೆ ತರುತ್ತೇವೆ. ಜನರಿಗೆ ಸೇವಾ ಸೌಲಭ್ಯ ಸುಲಭವಾಗಿ ಸಿಗುವಂತೆ ಮಾಡುತ್ತೇವೆ. ನಗರದ ಸಂಸ್ಕೃತಿ, ಇತಿಹಾಸದ ಹಿರಿಮೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. ತಂತ್ರಜ್ಞಾನ ಕ್ಷೇತ್ರ, ಜೈವಿಕ ತಂತ್ರಜ್ಞಾನಗಳಿಗೆ ಇನ್ನೋವೇಷನ್ ಸೆಂಟರ್, ಬೆಂಗಳೂರು ಒನ್ ಸೇವಾ ಕೇಂದ್ರಗಳ ವ್ಯಾಪ್ತಿ ವಿಸ್ತರಣೆ, ಬೆಂಗಳೂರು ಕೇಂದ್ರೀಕರಿಸಿ ಈ ಮಿಷನ್ ಜಾರಿ ತರಲಾಗುತ್ತದೆ ಎಂದು ತಿಳಿಸಿದರು.
ನನ್ನ ಕಸ ನನ್ನ ಜವಾಬ್ದಾರಿ ಎಂಬ ಕಾರ್ಯಕ್ರಮ, ಉದ್ಯಾನ ನಗರಿ ಎಂಬ ಹೆಸರು, ಕೆರೆಗಳು ಕಳೆದು ಹೋಗಿದ್ದು, ಇದನ್ನು ಮರು ನಿರ್ಮಾಣ ಮಾಡಬೇಕಿದೆ. ರಾಜಕಾಲುವೆ ಮರು ನಿರ್ಮಾಣ ಮಾಡುವುದಕ್ಕೆ ಸರ್ಕಾರ ಬದ್ಧವಾಗಿದೆ. ನಗರದ ಹೊರ ಹೊಲಯದಲ್ಲಿ ಕಿರು ಅರಣ್ಯ ಅಭಿವೃದ್ಧಿ ಮಾಡುವುದು ಎರಡು ವರ್ಷದಲ್ಲಿ ಎಲ್ಲ ಯೋಜನೆಗಳೂ ಪೂರ್ಣಗೊಳಿಸಲಾಗುವುದು. ಸದ್ಯದಲ್ಲೇ ಬೆಂಗಳೂರು ಮಿಷನ್ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.
ಕೆರೆಗಳ ಅಭಿವೃದ್ಧಿ, ರಾಜಕಾಲುವೆಗಳ ಅಭಿವೃದ್ಧಿ, ಕೃತಕ ನೆರೆ ತಪ್ಪಿಸಲು ರಾಜಕಾಲುವೆ ಅಭಿವೃದ್ಧಿ, ತ್ಯಾಜ್ಯ ನೀರು ಸಂಸ್ಕರಣೆಗೆ ಅಗತ್ಯ ಯೋಜನೆ ರೂಪಿಸಲಾಗುವುದು. ಎರಡು ಬೃಹತ್ ವೃಕ್ಷೋಧ್ಯಾನಗಳ ನಿರ್ಮಾಣ, ಹಸಿರು ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುದು. ಶುದ್ಧ ನೀರು, ಗಾಳಿ ಇದ್ದು ವಾಸಕ್ಕೆ ಯೋಗ್ಯ ಮಾಡಬೇಕು. ಬಿಬಿಎಂಪಿ ಸೇರಿ ಇತರ ಇಲಾಖೆಗಳು ಜನರ ಸಮಸ್ಯೆ ತ್ವರಿತವಾಗಿ ಬಗೆಹರಿಸಬೇಕು. ಸಹಾಯ ತಂತ್ರಾಂಶಗಳನ್ನ ಬಳಸಿಕೊಳ್ಳೋದು, ಈಗಾಗಲೇ ಆಸ್ತಿ ನೋಂದಣಿಗೆ ಆನ್ ಲೈನ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ವಲಸಿಗರೇ ಹೆಚ್ಚಾಗಿರುವ ಹಿನ್ನೆಲೆ ನಮ್ಮ ಸಂಸ್ಕೃತಿ ಪರಿಚಯಿಸಲು ಕೆಲಸ ಮಾಡಲಾಗುವುದು. ಬೆಂಗಳೂರು ಒನ್ ಕೇಂದ್ರಗಳ ವ್ಯಾಪ್ತಿ ವಿಸ್ತರಣೆ, ಈ ಕಾರ್ಯಕ್ರಮಳೆಲ್ಲ ಎರಡು ವರ್ಷಗಳಲ್ಲಿ ಪೂರ್ತಿ ಆಗಬೇಕು. ಯಾವುದೇ ಕಾರಣಕ್ಕೂ ಹಣಕಾಸಿನ ತೊಂದರೆ ಆಗಬಾರದು ಎಂದರು.