ಬೆಂಗಳೂರು: ಮುಂದಿನ ತಿಂಗಳು ಹಸೆಮಣೆ ಏರಬೇಕಿದ್ದ ಯುವಕನೊಬ್ಬ ಕೊರೊನಾಗೆ ಬಲಿಯಾದ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಸಾಗರ್ ಎ.ಜಿ (28) ಎಂದು ಗುರುತಿಸಲಾಗಿದೆ. ಬಾಳಿ ಬದುಕಬೇಕಾದ ಯುವಕನನ್ನು ಕ್ರೂರಿ ಕೊರೊನಾ ಬಲಿ ಪಡೆದಿದ್ದು, ಸಂಭ್ರಮದಿಂದಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.
Advertisement
ಕಳೆದ 2 ತಿಂಗಳ ಹಿಂದೆ ಸಾಗರ್ ಗೆ ಮದುವೆ ಮಾತುಕತೆ ನಡೆದಿತ್ತು. ಆದರೆ ಎಂಗೇಜ್ಮೆಂಟ್ ಮಾಡದೆ, ಕೇವಲ ಸರಳ ಮದುವೆಗೆ ಕುಟುಂಬಸ್ಥರು ಪ್ಲಾನ್ ಮಾಡಿದ್ದರು. ಇದೀಗ ಮಹಾಮಾರಿ ಕೊರೊನಾ ವರನನ್ನೇ ಬಲಿ ಪಡೆದುಕೊಂಡಿದೆ.
Advertisement
Advertisement
ಸಾಗರ್, ಟೆಸ್ಕೊ ಖಾಸಗಿ ಕಂಪನಿಯಲ್ಲಿ ಐಸಿ ರೋಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಐಸಿಯು ಬೆಡ್, ಆಕ್ಸಿಜನ್ ಸಿಗದೆ ನರಳಾಡಿ ಪ್ರಾಣಬಿಟ್ಟಿದ್ದಾನೆ. ಸದ್ಯ ಮೃತನ ಕುಟುಂಬಸ್ಥರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Advertisement
78 ವರ್ಷದ ಯಡಿಯೂರಪ್ಪ ಕೊರೊನಾದಿಂದ ಚಿಕಿತ್ಸೆ ಪಡೆದು ಗುಣಮುಖರಾಗ್ತಾರೆ. 28 ವರ್ಷದ ನನ್ನ ಸ್ನೇಹಿತನಿಗೆ ಚಿಕಿತ್ಸೆ ಇಲ್ಲ. ಕನಿಷ್ಠ ಪಕ್ಷ ಬೆಡ್ ಕೂಡ ಸಿಗ್ತಿಲ್ಲ. ಸಿಎಂ, ಮಿನಿಸ್ಟರ್, ಎಂಎಲ್ ಎ ಗಳಿಗೆ ಮಣಿಪಾಲ್, ನಮ್ಮಂತರವರು ಮಣ್ಣುಪಾಲು ಅಂತ ಕಿಡಿ ಸಾಗರ್ ಸ್ನೇಹಿತರು ಕೂಡ ಕಿಡಿಕಾರಿದ್ದಾರೆ.
ಏ.12 ರಂದು ನಾಗರಬಾವಿಯ ಮೆಕ್ಲೂ ಲ್ಯಾಬ್ ಟೆಸ್ಟ್ ಮಾಡಿಸಿದಾಗ ವರದಿ ನೆಗೆಟಿವ್ ಬಂದಿತ್ತು. ಆ ನಂತರ ಯುಗಾದಿ ಹಬ್ಬದ ಬಳಿಕ ಚಳಿ, ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಮತ್ತೆ ವೈದ್ಯರರನ್ನ ಭೇಟಿ ಮಾಡಿ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಬಿಬಿಎಂಪಿ ಮಾಹಿತಿ ಮೇರೆಗೆ ಸಾಗರ್ ಹೋಂ ಐಸೋಲೇಟ್ ಆಗಿದ್ದನು.
ಹಬ್ಬ ಕಳೆದ ಒಂದು ವಾರದ ಬಳಿಕ ಮಧ್ಯರಾತ್ರಿ ಸುಸ್ತು, ಬೇಧಿ ಆರಂಭವಾಗಿದೆ. ಕೂಡಲೇ ಗ್ಲೂಕೋಸ್ ಹಾಕಿಸಿಕೊಳ್ಳೋಕೆ ಆಸ್ಪತ್ರೆಗೆ ತೆರಳಿದ್ದಾರೆ. ಸಿಟಿ ಸ್ಕ್ಯಾನಿಂಗ್ ಮಾಡಿಸಿದಾಗ ನ್ಯುಮೋನಿಯಾ ಇದೆ ಅಂದ್ರು. ತುಂಬಾ ಸೀರಿಯಸ್ ಆಗಿದೆ ಅಂದ್ರು, ಅಲ್ಲೆಲ್ಲೂ ಐಸಿಯು ಬೆಡ್ ಸಿಕ್ಕಿಲ್ಲ. ಆದರೆ ವಿಧಿಯಾಟ ಯುವಕ ಕೊರೊನಾಗೆ ಬಲಿಯಾಗಿದ್ದಾನೆ. ನಮಗಾದ ರೀತಿ ಯಾರಿಗೂ ಆಗದಿರಲಿ ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಸಣ್ಣ ವಯಸ್ಸಿನ ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.