ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಮುಂಗಾರು ಮಳೆ-2’ ಚಿತ್ರದ ನಟಿ ನೇಹಾ ಶೆಟ್ಟಿ ತಂದೆ ಹರಿರಾಜ್ ಶೆಟ್ಟಿಯನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬೆಂಗಳೂರು ನಗರದಲ್ಲಿ ಜೂಜು ಅಡ್ಡೆ ನಿರ್ಮಿಸಿ ಕಾನೂನು ಬಾಹಿರ ಕೃತ್ಯ ಆರೋಪದಡಿಯಲ್ಲಿ ಬಂಧನವಾಗಿದೆ.
ಬೆಂಗಳೂರಿನಲ್ಲಿ ಪೂಲ್ ಎನ್, ರಿ ಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಹತ್ತಾರು ಕಡೆ ನಡೆಸ್ತಿದ್ದ, ಗೇಮ್ ಗಳು ಬ್ಯಾನ್ ಇರುವ ಸ್ಕಿಲ್ ಗೇಮ್, ವೀಡಿಯೋ ಗೇಮ್ ಪಾರ್ಲರ್ ನಡೆಸುತ್ತಿದ್ದ ಆರೋಪ ಇದೆ. ಅನೇಕ ಬಾರಿ ಸಿಸಿಬಿ ರೇಡ್ ಮಾಡಿದ್ರೂ ಕ್ಯಾರೇ ಅನ್ನದೇ ಕೃತ್ಯ, ನಗರದ ಪ್ರಮುಖ ಜೂಜುಕೋರ ಅಂತಾ ಗೂಂಡಾ ಕಾಯ್ದೆಯಡಿ ಬಂಧನ ಮಾಡಲಾಗಿದೆ. ಹರಿರಾಜ ಶೆಟ್ಟಿ ವಿರುದ್ಧ ಇಲ್ಲಿತನಕ 13 ಕೇಸ್‍ಗಳು ಪತ್ತೆಯಾಗಿದೆ. ಪದೇ ಪದೇ ಕೃತ್ಯವೆಸಗುವ ಹವ್ಯಾಸ ಹೊಂದಿದ ಆರೋಪ ಎದುರಿಸ್ತಾ ಇದ್ದಾರೆ.
Advertisement
Advertisement
ಕಬ್ಬನ್ ಪಾರ್ಕ್, ಹೈಗ್ರೌಂಡ್ಸ್, ವೈಯಾಲಿ ಕಾವಲ್, ಕೋರಮಂಗಲ, ಅಶೋಕನಗರಣ ಬಸವೇಶ್ವರ ನಗರ, ಕೆ.ಪಿ ಅಗ್ರಹಾರ, ಇಂದಿರಾನಗರ ಠಾಣೆಗೆ ಬೇಕಾದ ಆರೋಪ ಹೊಂದಿರೋ ಹರಿರಾಜ್ ಶೆಟ್ಟಿ ಕಳೆದ 2014 ರಿಂದಲೂ ಈ ಅಕ್ರಮ ದಂಧೆ ನಡೆಸುತ್ತಿದ್ದ ಎಂಬ ಮಾಹಿತಿ ಇದೆ.
Advertisement
ಪೊಲೀಸರಿಗೆ ಟಾರ್ಚರ್ ಕೊಡ್ತಿದ್ದ ಆರೋಪಿ:
ತನ್ನ ಅಕ್ರಮ ಕ್ಲಬ್ ಮೇಲೆ ದಾಳಿ ಮಾಡಿದ ಪೊಲೀಸರ ಟಾರ್ಗೆಟ್ ಮಾಡ್ತಿದ್ದ, ಅಧಿಕಾರಿಯ ವಿರುದ್ಧ ಎಸಿಬಿ ದೂರು ನೀಡ್ತಿದ್ದ. ಹಣ ಪಡೆದ ಗಂಭೀರ ಆರೋಪ ಮಾಡಿ ತೇಜೋವಧೆ ಮಾಡ್ತಿದ್ದ ಎಂದು ತನ್ನ ಸೋಷಿಯಲ್ ಮೀಡಿಯಾ ಮೂಲಕ ಅಪಪ್ರಚಾರ ಮಾಡ್ತಿದ್ದ ಆರೋಪ ಕೂಡ ಈತನ ಮೇಲೆ ಇದೆ.
Advertisement
ಬಳಿಕ ವಿವಿಧ ಠಾಣೆ ಪೊಲೀಸರಿಂದ ಸಿಸಿಬಿ ಆಯುಕ್ತರಿಗೆ ದೂರು ನೀಡಿದ್ರು. ಬಳಿಕ ಆರೋಪಿಯ ವಿರುದ್ಧ ಗೂಂಡಾ ಆಕ್ಟ್ ಅಡಿ ಕೇಸ್ ದಾಖಲಾಗಿದೆ. ಹೈಕೋರ್ಟ್ ರಜಾ ದಿನದ ಪೀಠದಲ್ಲಿ ಚಾಲೆಂಜ್ ಮಾಡಿ ಸ್ಟೇ ಪಡೆದಿದ್ದ ಹರಿರಾಜ್, ತನ್ನನ್ನ ಪೊಲೀಸ್ರು ಹಣಕ್ಕಾಗಿ ಟಾರ್ಗೆಟ್ ಮಾಡ್ತಿದ್ದರು ಎಂದು ಆರೋಪಿಸಿದ್ದ. ಅದರಂತೆ ಹೈಕೋರ್ಟ್ ನಲ್ಲಿ ಸ್ಟೇ ಪಡೆದು ಹೊರಗೆ ಓಡಾಡಿಕೊಂಡಿದ್ದ. ಇದನ್ನ ಪ್ರಶ್ನಿಸಿ ಹೈಕೋರ್ಟ್‍ಗೆ ಸಿಸಿಬಿಯಿಂದ ಮಧ್ಯಂತರ ಅರ್ಜಿ ಹಾಕಾಲಗಿತ್ತು. ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ. ಆರೋಪಿಯ ಪೂರ್ವಾಪರ ತಿಳಿದು ಸ್ಟೇ ತೀರ್ಪುನ್ನ ಅಸಿಂಧುಗೊಳಿಸಿದೆ.