ಉಡುಪಿ: ಮೀಸಲಾತಿ ಕೇಳುವುದರಲ್ಲಿ ತಪ್ಪೇನಿಲ್ಲ. ಸಂವಿಧಾನಾತ್ಮಕವಾಗಿ ಅರ್ಹತೆ ಇರುವವರಿಗೆ ಮೀಸಲಾತಿ ಕೊಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಾತಿ ಹೋರಾಟಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Advertisement
ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಪರಿಶೀಲಿಸಿ ಶಿಫಾರಸು ಮಾಡಬೇಕು. ಹೊಸ ಸೇರ್ಪಡೆ ಮತ್ತು ಮೀಸಲಾತಿ ಕೈ ಬಿಡುವ ಬಗ್ಗೆ ಆಯೋಗ ಶಿಫಾರಸು ಮಾಡಬೇಕು. ರಾಜ್ಯದಲ್ಲಿ ಪ್ರತಿನಿತ್ಯ ಹೋರಾಟಗಳು ನಡೆಯುತ್ತಿದೆ. ಸರಕಾರ ಸಂವಿಧಾನಾತ್ಮಕವಾಗಿ ಶೀಘ್ರ ತೀರ್ಮಾನ ಕೈಗೊಳ್ಳಲಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
Advertisement
ಐದು ಪೈಸೆ ಬಂದಿಲ್ಲ: ಐಎಂಎ ವಂಚಕ ಮನ್ಸೂರ್‍ಗೂ ನನಗೂ ಯಾವುದೇ ಸಂಬಂಧ ಇಲ್ಲ. ಯಾರಿಗೋ ದುಡ್ಡು ಕೊಟ್ಟು ನನಗೆ ಕೊಟ್ಟಿದ್ದಾನೆ ಎಂದರೆ ಏನು ಪ್ರಯೋಜನ? ಅವನು ಯಾರಿಗೆ ಕೊಟ್ಟಿದ್ದಾನೆ ಅವರಿಂದ ವಸೂಲಿ ಮಾಡಿ, ಅವನನ್ನು ವಿಚಾರಿಸಿ, ಐ ಡುನಾಟ್ ನೋ. ನಾನು ಯಾರಿಂದಲೂ 5 ಪೈಸೆ ಪಡೆದಿಲ್ಲ. ನನಗೆ ಮನ್ಸೂರ್ ನಿಂದ ಹಣ ಪಡೆಯುವ ಯಾವ ಅಗತ್ಯವೂ ಇಲ್ಲ ಎಂದು ಹೇಳಿದು
Advertisement
Advertisement
ಅಯೋಧ್ಯೆ ನಿಧಿ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಮಮಂದಿರ ಬಗ್ಗೆ ನಾನೇನು ತಪ್ಪು ಹೇಳಿದ್ದೇನೆ. ಅಯೋಧ್ಯೆಗೆ ನಾನು ನಿಧಿ ಕೊಡುವುದಿಲ್ಲ. ನನ್ನ ಊರಿನ ರಾಮಮಂದಿರಕ್ಕೆ ಕೊಡುತ್ತೇನೆ. ನಾನು ಹೇಳಿದ್ದು ತಪ್ಪಾ? ನಮ್ಮೂರಿನಲ್ಲಿ ಆಗುತ್ತಿರುವುದು ರಾಮಮಂದಿರ ಅಲ್ವಾ? ನನ್ನ ಊರಿನಲ್ಲಿ ಕಟ್ಟುವುದು ದಶರಥ ಪುತ್ರ ರಾಮ ಮಂದಿರ ಅಲ್ವಾ? ನನ್ನ ಮಾತಿನಲ್ಲಿ ವಿವಾದ ಆಗುವಂಥದ್ದು ಏನಿದೆ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದರು.
ಬಿಜೆಪಿಯಲ್ಲಿ ಒಬ್ಬರಿಗೂ ದೇಶ ನಿಷ್ಠೆ ಇಲ್ಲ, ಬಿಜೆಪಿಯಿಂದ ಯಾರು ದೇಶಕ್ಕಾಗಿ ಸತ್ತಿಲ್ಲ. ನಾನು ಯಾವ ಸ್ವಾಮಿಗಳ ಬಗ್ಗೆ ಕೂಡ ಮಾತನಾಡುವುದಿಲ್ಲ ಎಂದರು.