ಮೀನು ಖಾಲಿ ಮಾಡುವ ವಿಚಾರದಲ್ಲಿ ತಗಾದೆ – ಪೊಲೀಸರಿಂದ ಲಾಠಿಚಾರ್ಜ್

Public TV
1 Min Read
UDP

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಕೊಡೇರಿ ಬಂದರಿನಲ್ಲಿ ಮೀನುಗಾರರ ನಡುವೆ ಜಟಾಪಟಿ ನಡೆದಿದೆ. ಕೊನೆಗೆ ಪೊಲೀಸರು ಲಾಠಿಚಾರ್ಜ್ ಮಾಡಿ ಮೀನುಗಾರರನ್ನು ಚದುರಿಸಿದ್ದಾರೆ.

UDP 3 1

ಕಾಮಗಾರಿ ಪೂರ್ಣಗೊಳಿಸಿ ನಂತರ ಮೀನು ಹರಾಜು ಮಾಡಲು ಆಗ್ರಹಿಸಿ, ಸದ್ಯ ಬಂದರಿನಲ್ಲಿ ಮೀನು ಹರಾಜು ಬೇಡ ಅನ್ನೋದು ಒಂದು ತಂಡದ ವಾದ. ಆದರೆ ಮತ್ತೊಂದು ತಂಡ ಮೀನು ಹರಾಜಿಗೆ ಮುಂದಾಗಿದೆ. ಈ ವೇಳೆ ಸ್ಥಳೀಯ ಮತ್ತು ಆಸುಪಾಸಿನ ಮೀನುಗಾರರ ನಡುವೆ ಗದ್ದಲ ಏರ್ಪಟ್ಟಿದೆ.

UDP 1 1

ಇತ್ತಂಡಗಳ ನಡುವೆ ಮಾತಿನ ಸಮರ ನಡೆಯುತ್ತಿದ್ದರಿಂದ ಹಿನ್ನೀರಿನಲ್ಲೇ ಬೋಟುಗಳು ಲಂಗರು ಹಾಕಿದವು. ಕೊನೆಗೆ ನಡುವಲ್ಲಿ ನಿಂತು ಪೊಲೀಸರು ಸಂಧಾನ ಮಾಡಲು ಯತ್ನಿಸಿದ್ದಾರೆ. ಆದರೆ ಎರಡೂ ತಂಡಗಳ ನಡುವೆ ವಾದ-ವಿವಾದ ಮುಂದುವರಿದಿದ್ದರಿಂದ ಕೆಲಕಾಲ ಬಂದರು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

UDP 2 1

Share This Article
Leave a Comment

Leave a Reply

Your email address will not be published. Required fields are marked *