ಮಿಸ್ ಯು ಮೈ ಬಾಯ್, ವಿಧಿ ತುಂಬಾ ಕ್ರೂರಿ- ಅಳಿಯನ ನೆನೆದ ಅರ್ಜುನ್ ಸರ್ಜಾ

Public TV
2 Min Read
arjun sarja dhruva sarja 2

ಬೆಂಗಳೂರು: ನಟ ಅರ್ಜುನ್ ಸರ್ಜಾ ತಮ್ಮ ಪ್ರೀತಿಯ ಅಳಿಯ ಚಿರಂಜೀವಿ ಸರ್ಜಾ ನೆನಪಿನಲ್ಲೇ ಇದ್ದು, ವಿಧಿ ತುಂಬಾ ಕ್ರೂರಿ ಎಂದು ಹೇಳುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಈ ಹಿಂದೆ ಫೇಸ್‍ಬುಕ್ ಪ್ರೊಫೈಲ್‍ಗೆ ಕಪ್ಪು ಬಣ್ಣ ಹಾಕುವ ಮೂಲಕ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಫೈಟಿಂಗ್‍ಗೆ ಸಿದ್ಧವಾಗಿರುವ ಫೋಟೋವನ್ನು ಪ್ರೊಫೈಲ್‍ಗೆ ಹಾಕಿದ್ದಾರೆ. ಅಲ್ಲದೆ ಚಿರು ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿ ಮನ ಮಿಡಿಯುವ ಸಾಲುಗಳನ್ನು ಬರೆದಿದ್ದಾರೆ. ಐ ಮಿಸ್ ಯು ಮೈ ಬಾಯ್, ವಿಧಿ ತುಂಬಾ ಕ್ರೂರಿ ಎಂದು ಆಕ್ರೋಶವನ್ನು ಹೊರ ಹಾಕಿದ್ದಾರೆ.

I miss you my boy, Fate has been so cruel.

Posted by Arjun Sarja on Tuesday, June 9, 2020

ಅರ್ಜುನ್ ಸರ್ಜಾ ಪೋಸ್ಟ್‍ಗೆ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಧೈರ್ಯ ಹೇಳುತ್ತಿದ್ದಾರೆ. ಚಿರು ಸಾವು ತುಂಬಾ ಬೇಸರ ತಂದಿದೆ. ಈ ಸಂದರ್ಭವನ್ನು ನಿಭಾಯಿಸುವ ಶಕ್ತಿಯನ್ನು ಹನುಮಂತ ನಿಮಗೆ ಕರುಣಿಸಲಿ. ಚಿರು ಅದ್ಭುತ ನಟನಾಗಿದ್ದ ಅವನನ್ನು ಕಳೆದುಕೊಂಡ ಚಿತ್ರರಂಗ ಒಬ್ಬ ಉತ್ತಮ ನಟನನ್ನು ಕಳೆದುಕೊಂಡಂತಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ChiranjeeviSarja

ಯುವ ನಟ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇಂದು ಚಿರು ಸರ್ಜಾ ಅವರ ಮೂರನೇ ದಿನದ ಹಾಲು ತುಪ್ಪ ಕಾರ್ಯ ಸಹ ನಡೆದಿದೆ. ಕನಕಪುರ ನೆಲಗುಳಿ ಗ್ರಾಮದಲ್ಲಿರುವ ಧ್ರುವ ಸರ್ಜಾ ಫಾರ್ಮ್ ಹೌಸ್‍ನಲ್ಲಿರುವ ಚಿರು ಸಮಾಧಿ ಬಳಿ ಪುರೋಹಿತರಿಂದ ಹಾಲು ತುಪ್ಪ ಕಾರ್ಯ ನಡೆಯಿತು. ಸೋಮವಾರ ಸಂಜೆ 6 ಗಂಟೆ ಹೊತ್ತಿಗೆ ಹಿಂದೂ ಸಂಪ್ರದಾಯದಂತೆ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ನೆರವೇರಿತ್ತು. ಇಂದು ಬೆಳಗ್ಗೆಯೇ ಸರ್ಜಾ ಕುಟುಂಬ ಮತ್ತು ಮೇಘನಾ ರಾಜ್ ಕುಟುಂಬದವರು ಕೆ.ಆರ್ ರಸ್ತೆಯಲ್ಲಿರುವ ನಿವಾಸದಿಂದ ಬೃಂದಾವನ ಫಾರ್ಮ್ ಹೌಸ್‍ಗೆ ಹೋಗಿದ್ದರು. ಚಿರು ಹಾಲು ತುಪ್ಪ ಕಾರ್ಯದಲ್ಲಿ ಕುಟುಂಬ ಸದಸ್ಯರು ಮತ್ತು ಕೆಲ ಆಪ್ತರು ಮಾತ್ರ ಪಾಲ್ಗೊಂಡಿದ್ದರು.

CHIRU 2 1

ಭಾನುವಾರ ಮಧ್ಯಾಹ್ನದ ವೇಳೆ ಚೆನ್ನಾಗಿದ್ದ ನಟ ಚಿರಂಜೀವಿ ಸರ್ಜಾ, ತಮ್ಮ ನಿವಾಸದ ರಸ್ತೆಯಲ್ಲಿರುವ ನಿವಾಸಿಗಳ ಜೊತೆ ಮಾತನಾಡಿದ್ದರು. ಇದಾದ ನಂತರ ಚಿರು ದೇಹ ದಿಢೀರ್ ಬೆವರಲು ಆರಂಭಿಸಿತ್ತು. ಈ ವೇಳೆ ಉಸಿರಾಡಲು ತೊಂದರೆ ಆಗುತ್ತಿದೆ ಎಂದು ಸರ್ಜಾ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದರು. ನಂತರ ಅವರನ್ನು ಕುಟುಂಬದವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಚಿರು ಕೊನೆಯುಸಿರೆಳೆದಿದ್ದರು.

chiranjeevi sarja 7 1

`ಅಣ್ಣ ಸದಾ ನನ್ನ ಜೊತೆಗಿರಬೇಕು, ನನ್ನ ಫಾರ್ಮ್ ಹೌಸ್‍ನಲ್ಲೇ ಅಣ್ಣನ ಅಂತ್ಯಕ್ರಿಯೆಯಾಗಲಿ’ ಎಂದು ಸಹೋದರ ಧ್ರುವ ಸರ್ಜಾ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಫಾರ್ಮ್ ಹೌಸ್‍ನಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ಸೋಮವಾರ ಅಂತ್ಯಕ್ರಿಯೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *