ಹೈದರಾಬಾದ್: ಫೆಮಿನಾ ಮಿಸ್ ಇಂಡಿಯಾ 2020 ಆಗಿ ಹೈದರಾಬಾದ್ ಮೂಲದ ಮಾನಸ ವಾರಾಣಸಿ ಆಯ್ಕೆಯಾಗುವ ಮೂಲಕವಾಗಿ ಕೀರಿಟವನ್ನು ಮುಡಿಗೇರಿಸಿಕೊಂಡಿದ್ದಾರೆ.
Advertisement
ಮಿಸ್ ಇಂಡಿಯಾ 2020ರ ಪಟ್ಟಕ್ಕಾಗಿ ಹಲವು ಸುಂದರಿಯರು ಪೈಪೋಟಿ ನಡೆಸಿದ್ದರು. ಮಾನಸ(23) ವಾರಾಣಸಿ ಅವರಿಗೆ ಮಿಸ್ ಇಂಡಿಯಾ ಕಿರೀಟ ಸಿಕ್ಕಿದೆ. 2021ರ ಡಿಸೆಂಬರ್‍ನಲ್ಲಿ ನಡೆಯಲಿರುವ ಮಿಸ್ ವಲ್ರ್ಡ್ ಸ್ಪರ್ಧೆಯಲ್ಲಿ ಮಾನಸ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
Advertisement
Advertisement
ಮಾನಸ ಮೂಲತಃ ತೆಲಂಗಾಣದವರಾಗಿದ್ದಾರೆ. ಫ್ಯಾಷನ್ ಜಗತ್ತಿನಲ್ಲಿ ಎಲ್ಲರ ಗಮನ ಸೆಳೆದಿರುವ ಈ ಸುಂದರಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‍ನಲ್ಲಿ ಪದವಿಯನ್ನು ಪಡೆದಿದ್ದಾರೆ. ಪುಸ್ತಕಗಳನ್ನು ಓದುವ ಹವ್ಯಾಸ ಹೊಂದಿದ್ದಾರೆ. ಸಂಗೀತ ಮತ್ತು ನೃತ್ಯದಲ್ಲಿ ಮಾನಸ ಅವರಿಗೆ ಅಪಾರ ಆಸಕ್ತಿ ಇದೆ. ಯೋಗಪಟು, ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ. ಮಾನಸ ಬಿಡುವಿನ ಸಮಯದಲ್ಲಿ ಬಟ್ಟೆಯ ಮೇಲೆ ಕಸೂತಿಹಾಕುತ್ತಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚೆಂದುಳ್ಳಿ ಚೆಲುವಿಗೆ ಟ್ರಾವೆಲಿಂಗ್ ಎಂದರೆ ಬಲು ಇಷ್ಟವಾಗಿದೆ. ಕರ್ನಾಟಕದ ಹಲವು ಭಾಗಗಳನ್ನು ಸುತ್ತಾಡಿದ್ದಾರೆ.
Advertisement
ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಅವರನ್ನು ಮಾಸನ ಸ್ಫೂರ್ತಿಯಾಗಿ ಇಟ್ಟುಕೊಂಡಿದ್ದಾರೆ. ಹೀಗೆಂದು ಮನಸ ಈ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 2000ನೇ ಇಸವಿಯಲ್ಲಿ ಪ್ರಿಯಾಂಕಾ ಕೂಡ ಇದೇ ರೀತಿ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದರು. ಸದ್ಯ ಮಿಸ್ ಇಂಡಿಯಾ ಆಗಿರುವ ಮಾನಸ ವಾರಾಣಸಿ ಮುಂದಿನ ದಿನಗಳಲ್ಲಿ ಬಣ್ಣದ ಲೋಕಕ್ಕೆ ಕಾಲಿಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.