– ಸುಟ್ಟು ಕರಕಲಾದ ಕಟ್ಟಡಗಳು
ಲಾಗೋಸ್: ಈಕ್ವಟೋರಿಯಲ್ ಗಿನಿಯದ ಮಿಲಿಟರಿ ಕ್ಯಾಂಪ್ ಮತ್ತು ವಸತಿ ಗೃಹ ಪ್ರದೇಶಗಳಲ್ಲಿ ಆಕಸ್ಮಿಕವಾಗಿ 4 ಸ್ಫೋಟಕಗಳು ಸ್ಫೋಟಗೊಂಡಿದ್ದು, 20 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
Advertisement
ಘಟನೆ ವೇಳೆ ಬಾಟಾದ ಎನ್‍ಕೋವಾ ಎನ್ಟೋಮಾ ಶಿಬಿರದ ಸುತ್ತಲಿನ ಕಟ್ಟಡಗಳು ಸುಟ್ಟುಕರಕಲಾಗಿದೆ. ಆಕಾಶದೆತ್ತರಕ್ಕೆ ಕಪ್ಪು ಹೊಗೆ ಹಾರಿದೆ. ಅಲ್ಲದೆ ಅನೇಕ ಮನೆಗಳು ನೆಲಕ್ಕೂರುಳಿದೆ. ಕಟ್ಟಡಗಳಲ್ಲಿ ಸಿಲುಕಿದ್ದ ಮಕ್ಕಳು ಹಾಗೂ ವಯಸ್ಕರನ್ನು ರಕ್ಷಿಸಲಾಗಿದ್ದು, ಇದೀಗ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Advertisement
Advertisement
ಅಲ್ಲದೆ ಆರೋಗ್ಯ ಸಚಿವಾಲಯವು ಟ್ವಿಟ್ಟರ್ ಮೂಲಕ ಇನ್ನೂ ಅನೇಕ ಮಂದಿ ಕೆಳಗೆ ಸಿಲುಕಿಕೊಂಡಿರಬಹುದು ಎಂದು ಎಚ್ಚರಿಸಿದೆ. ಮಿಲಿಟರಿ ಕ್ಯಾಂಪ್‍ನಲ್ಲಿ ಸೈನಿಕರು ಸಂಗ್ರಹಿಸಿದ್ದ ಸ್ಫೋಟಗಳ ಪ್ರದೇಶದಲ್ಲಿ ರೈತರು ಬೆಂಕಿಯನ್ನು ಹೊತ್ತಿಸಿದ ಕಾರಣ ಘಟನೆ ಸಂಭವಿಸಿದೆ. ಅಲ್ಲದೆ ಎನ್ಕೋಮಾ ಮಿಲಿಟರಿ ಕ್ಯಾಂಪ್‍ನಲ್ಲಿ ಸ್ಫೋಟಕಗಳು, ಡೈನಮೈಟ್ ಹಾಗೂ ಸಿಡಿಮದ್ದುಗಳನ್ನು ಸಂಗ್ರಹಿಸುವ ಉಸ್ತುವಾರಿ ಘಟಕದ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಅಧ್ಯಕ್ಷ ಟಿಯೊಡೊರೊ ಒಬಿಯಾಂಗ್ ನ್ಗುಮಾ ಹೇಳಿದ್ದಾರೆ.
Advertisement
ಸದ್ಯ ಘಟನೆಯಲ್ಲಿ 20 ಮಂದಿ ಮೃತಪಟ್ಟಿದ್ದು, ಸುಮಾರು 600 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯ ಆಫ್ರಿಕಾ ದೇಶದಲ್ಲಿ ಬಾಟಾ ಅತಿದೊಡ್ಡ ನಗರವಾಗಿದ್ದು, 1.4 ದಶಲಕ್ಷಜನಸಂಖ್ಯೆಹೊಂದಿದೆ.