ಮೀನುಗಾರಿಕಾ ದೋಣಿ ಮುಳುಗಡೆ – ಓರ್ವ ನಾಪತ್ತೆ, ಮೂವರ ರಕ್ಷಣೆ

Public TV
1 Min Read
KWR 2

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ನಾಡದೋಣಿ ಮುಳುಗಡೆಯಾಗಿ ದೋಣಿಯಲ್ಲಿದ್ದ ಮೂರು ಜನ ಮೀನುಗಾರರ ರಕ್ಷಣೆ ಮಾಡಿದ್ದು, ಓರ್ವ ಮೀನುಗಾರ ನಾಪತ್ತೆಯಾಗಿದ್ದಾರೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡು ಭಾಗದಲ್ಲಿ ಇಂದು ಬೆಳಗ್ಗೆ ನಡೆದಿದೆ.

KWR 4 e1625455393764

ಉದಯ್ ದಾಮೋದರ್ ತಾಂಡೇಲ್(30) ಕಾಣೆಯಾದ ಮೀನುಗಾರನಾಗಿದ್ದು ವಿಜಯ್ ಕ್ರಿಸ್ತಾದಾಸ್ ಫರ್ನಾಂಡಿಸ್(49), ಶಂಕರ್ ತಾಂಡೇಲ್( 38), ಕಾಮೇಶ್ವರ್ ತಾಂಡೇಲ್ (39) ರಕ್ಷಣೆಗೊಳಗಾದವರಾಗಿದ್ದಾರೆ. ಇದನ್ನೂ ಓದಿ: ವೈಷ್ಣವಿ ಉಪ್ಪಿಟ್ಟು, ಶಮಂತ್ ಹಪ್ಪಳ, ಶುಭಾ ತಂಬಿಟ್ಟು: ಮಂಜು

KWR 3 e1625455379645

ಇಂದು ಬೆಳಗ್ಗೆ ಮೀನುಗಾರುಕೆಗೆ ಹೊನ್ನಾವರದ ಕಾಸರಕೋಡು ಭಾಗದಿಂದ ತೆರಳಿದ್ದ ದೋಣಿ ಹೊನ್ನಾವರದ ಇಕೋ ಬೀಚ್ ಬಳಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಯಾಗಿದೆ. ಈ ವೇಳೆ ಮೂರು ಜನ ಈಜಿ ದಡದ ಭಾಗಕ್ಕೆ ಬಂದಿದ್ದು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಅವಕಾಶ ಸಿಕ್ರೆ ನಾನು ಸಿಎಂ ಆಗ್ತೀನಿ: ಶಾಸಕ ಅಮರೇಗೌಡ ಬಯ್ಯಾಪುರ

KWR 2 e1625455435253

ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಜುರಾಗಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು ನಾಪತ್ತೆಯಾದ ಮೀನುಗಾರರ ಹುಡುಕಾಟ ನಡೆಸಲಾಗುತ್ತಿದೆ. ಘಟನೆ ಹೊನ್ನಾವರ ಠಾಣಾ ಪ್ಯಾಪ್ತಿಯಲ್ಲಿ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *