ನವದೆಹಲಿ: ಭಾರತ ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಇತರ ಕ್ರಿಕೆಟ್ ಆಟಗಾರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ಮಿಥಾಲಿ ರಾಜ್ ಕೆಲದಿನಗಳ ಹಿಂದೆ ಮಹಿಳಾ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ್ದರು. ಈ ಮೂಲಕ 10 ಸಾವಿರ ರನ್ ಪೇರಿಸಿದ ವಿಶ್ವದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
Advertisement
Magnificent Mithali! ????????#TeamIndia ODI skipper becomes the first woman cricketer to score 7⃣0⃣0⃣0⃣ ODI runs. ????????
What a performer she has been! ????????@M_Raj03 @Paytm #INDWvSAW pic.twitter.com/qDa6KZymlg
— BCCI Women (@BCCIWomen) March 14, 2021
Advertisement
ಮೋದಿ ತಮ್ಮ 75ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ 10 ಸಾವಿರ ರನ್ ಪೂರೈಸಿದ ಶ್ವದ ಮೊದಲ ಮಹಿಳಾ ಆಟಗಾರ್ತಿಯಾಗಿದ್ದಾರೆ, ಅವರಿಗೆ ಮೊದಲು ಅಭಿನಂದನೆ ತಿಳಿಸುತ್ತೇನೆ. ಮಿಥಾಲಿ 10,000 ರನ್ ಸಾಧನೆಯೊಂದಿಗೆ ಏಕದಿನ ಕ್ರಿಕೆಟ್‍ನಲ್ಲಿ 7,000 ರನ್ ಸಿಡಿಸಿದ ಮೊದಲ ಮಹಿಳಾ ಆಟಗಾರ್ತಿಯಾಗಿ ವಿಶ್ವದಾಖಲೆ ನಿರ್ಮಿಸಿದ್ದರು. ಭಾರತೀಯ ಮಹಿಳಾ ಕ್ರಿಕೆಟ್‍ಗೆ ಇವರ ಸಾಧನೆ ಮೆಚ್ಚುವಂತದ್ದು ಎಂಬುದಾಗಿ ಮೋದಿ ಶ್ಲಾಘಿಸಿದ್ದಾರೆ.
Advertisement
ಮಿಥಾಲಿಯವರ ಎರಡು ದಶಕಗಳ ಕ್ರಿಕೆಟ್ ಜೀವನ ಹಲವರಿಗೆ ಸ್ಫೂರ್ತಿದಾಯಕವಾಗಿದ್ದು, ಅವರ ಕಠಿಣ ಪರಿಶ್ರಮ ಮತ್ತು ಯಶಸ್ಸಿನ ಕಥೆ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷ ಕ್ರಿಕೆಟಿಗರಿಗು ಸ್ಫೂರ್ತಿಯಾಗಿದ್ದಾರೆ ಎಂದರು.
ಮೋದಿ ಮಿಥಾಲಿ ಸಾಧನೆಯೊಂದಿಗೆ ಭಾರತದಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ಶೂಟಿಂಗ್ ವಿಶ್ವಕಪ್‍ನಲ್ಲಿ ಪದಕ ಜಯಿಸಿರುವ ಶೂಟರ್ ಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈಗಾಗಲೇ ಶೂಟಿಂಗ್ ವಿಶ್ವಕಪ್‍ನಲ್ಲಿ ಭಾರತದ ಸ್ಪರ್ಧಿಗಳು 13 ಚಿನ್ನದ ಪದಕದೊಂದಿಗೆ ಒಟ್ಟು 28 ಪದಕವನ್ನು ಭಾರತದ ಮುಕುಟಕ್ಕೆ ತೊಡಿಸಿದ್ದಾರೆ.
ಒಂದು ತಿಂಗಳ ಹಿಂದೆ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿವಿ ಸಿಂಧು ರನ್ನರ್ ಅಪ್ ಆಗಿದ್ದರು ಅವರನ್ನು ಕೂಡ ಮೋದಿ ಸ್ಮರಿಸಿಕೊಂಡಿದ್ದಾರೆ. ಇದರೊಂದಿಗೆ ಈ ವರ್ಷ ಮಾರ್ಚ್‍ನಲ್ಲಿ ನಡೆದ ಮಹಿಳಾ ದಿನಾಚರಣೆಯನ್ನು ಈ ಎಲ್ಲಾ ಸಾಧನೆಗಳಿಂದ ಮಹಿಳಾ ಆಟಗಾರ್ತಿಯರು ಇನ್ನಷ್ಟು ಸಂಭ್ರಮಿಸುವಂತೆ ಮಾಡಿದ್ದಾರೆ ಎಂದು ಮೋದಿ ನುಡಿದರು.