ಧಾರವಾಡ: ದಿನದಿಂದ ದಿನಕ್ಕೆ ಕೊರೊನಾ ಸೊಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಡಳಿತ ಮಾಸ್ಕ್ ಹಾಕದೇ ಒಡಾಡುವರಿಗೆ ಕೊರೊನಾ ಟೆಸ್ಟ್ ಮಾಡುವುದರ ಜೊತೆಗೆ ದಂಡ ಕಟ್ಟಿಸಿಕೊಂಡಿದೆ.
ಭಾನುವಾರ ವಿಶೇಷ ಕಾರ್ಯಾಚರಣೆ ನಡೆಸಿದ ಧಾರವಾಡ ಜಿಲ್ಲಾಡಳಿತ, ನಗರದ ಮಾರುಕಟ್ಟೆ ಪ್ರದೇಶದಲ್ಲಿ ಮಾಸ್ಕ್ ಹಾಕದೇ ಒಡಾಡುತ್ತಿದ್ದ 213 ಜನರಿಂದ 42,600 ರೂ. ದಂಡ ವಸೂಲಿ ಮಾಡಿದೆ. ತಹಶೀಲ್ದಾರ್ ಸಂತೋಷ್ ಬಿರಾದರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಮಾರುಕಟ್ಟೆಗೆ ಬಂದಿದ್ದ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಆ್ಯಂಟಿಜನ್ ಟೆಸ್ಟ್ ಮಾಡಲಾಯಿತು. ಇದೇ ವೇಳೆ ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಸಾರ್ವಜನಿಕರು ಮಾಸ್ಕ್ ಹಾಕಿಕೊಳ್ಳದೇ ಓಡಾಡಬೇಡಿ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೂಚನೆ ನೀಡಿದ್ದಾರೆ.