ಗದಗ: ಜಿಲ್ಲೆಯಲ್ಲಿ ಕೊರೊನಾ ಭೀತಿ ಹೆಚ್ಚಾಗಿದ್ದರೂ ಜನ ಮಾತ್ರ ಕ್ಯಾರೇ ಅಂತಿಲ್ಲ. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಜನ ಹಣ್ಣಿಗಾಗಿ ಮುಗಿಬಿದ್ದಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತನೇ ಇದೆ. ಆದರೆ ಜನ ಮಾತ್ರ ಕೊರೊನಾಕ್ಕಿಂತ ಹಣ್ಣು ದೊಡ್ಡದು ಎಂಬಂತೆ ಖರೀದಿಯಲ್ಲಿ ತೊಡಗಿದ್ದಾರೆ. ಈ ಮೂಲಕ ಸರ್ಕಾರದ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ.
Advertisement
Advertisement
ಎಪಿಎಂಸಿ ಆವರಣದ ಹಣ್ಣು ಮಾರುಕಟ್ಟೆನಲ್ಲಿ ಜನ ಕಿಕ್ಕಿರಿದು ಸೇರಿದ್ದಾರೆ. ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಮರೆತು ಹಣ್ಣು ಕೊಳ್ಳುವಲ್ಲಿ ನಿರತಾಗಿದ್ದಾರೆ. ಕೊರೋನಾ ವೈರಸ್ ಸಂಖ್ಯೆ ಹೆಚ್ಚಾಗುತ್ತಿದ್ರೂ ಜನ ಬುದ್ಧಿ ಕಲಿಯುತ್ತಿಲ್ಲ. ಚಾಲೆಂಜ್ ನಲ್ಲಿ ಹಣ್ಣು ಖರೀದಿಸುವಂತೆ ಜನ ನೆರೆದಿದ್ದು ಆತಂಕ ಸೃಷ್ಟಿಸಿದೆ.
Advertisement