ಚಿಕ್ಕಬಳ್ಳಾಪುರ: ಹಳ್ಳಿಗಳಲ್ಲಿ ಕೊರೊನಾ ಶರವೇಗದ ಸ್ವರೂಪ ಪಡೆದುಕೊಳ್ಳುತ್ತಿದೆ. ಕೊರೊನಾ ತಡೆಗಟ್ಟುವ ಸಲುವಾಗಿ ಯುವಕರಿಗೆ ಮಾಸ್ಕ್ ಧರಿಸಿ ಅಂತ ಹೇಳಿದ್ದನ್ನೇ ನೆಪವಾಗಿಟ್ಟುಕೊಂಡು ರಾಜಕೀಯ ಜಿದ್ದಿಗೆ ಮಾರಕಾಸ್ತ್ರಗಳಿಂದ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಚೀಡಚಿಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
Advertisement
ಗ್ರಾಮ ಪಂಚಾಯತ್ ಸದಸ್ಯ ತಮ್ಮೇಗೌಡ ಹಾಗೂ ಈತನನ್ನ ರಕ್ಷಿಸಲು ಹೋದ ಮಂಜು ಶಂಕರ್ ಹಲ್ಲೆಗೊಳಗಾದವರಾಗಿದ್ದಾರೆ. ಇದೇ ಗ್ರಾಮದ ಮರಿಯಪ್ಪರ ಮಗ ಚಾಣಕ್ಯ ಗೌಡ, ಅಕ್ಷಯ್ ಗೌಡ, ಪ್ರಶಾಂತ್, ಶ್ರೇಯಸ್ ಮತ್ತಿತರರು ಹಲ್ಲೆ ಮಾಡಿದ್ದಾರೆ. ಅಂದಹಾಗೆ ಡೈರಿ ಬಳಿ ಇದ್ದ ತಮ್ಮೇಗೌಡ ಹಲ್ಲೆ ಮಾಡಿದ ಚಾಣಕ್ಯ ಹಾಗೂ ಇತರರಿಗೆ ಮಾಸ್ಕ್ ಹಾಕಿಕೊಳ್ಳುವಂತೆ ಹೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳಸಿ ಮಾರಕಾಸ್ತ್ರಗಳಿಂದ ತಮ್ಮೇಗೌಡ ಮೇಲೆ ಅಟ್ಯಾಕ್ ಮಾಡಿದ್ದಾರೆ. ಪರಿಣಾಮ ತಮ್ಮೇಗೌಡ ತಲೆಗೆ ಗಂಭೀರ ಗಾಯವಾಗಿದ್ದು, ಈತನ ರಕ್ಷಣೆಗ ಬಂದ ಈತನ ಬಾಮೈದ ಮಂಜು ಶಂಕರ್‍ಗೂ ಹಲ್ಲೆ ಮಾಡಿದ್ದಾರೆ. ಇಬ್ಬರನ್ನು ಇದೀಗ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಈ ಘಟನೆಗೆ ಮತ್ತೊಂದು ಹಳೇ ದ್ವೇಷವೂ ಕಾರಣವಾಗಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹಾಲಿನ ಡೈರಿ ಅಧ್ಯಕ್ಷರಾಗಿದ್ದ ಡಿ.ಸಿ.ಮರಿಯಪ್ಪ ವಿರುದ್ಧ ಹಾಲಿ ಡೈರಿ ಕಾರ್ಯದರ್ಶಿ ತಮ್ಮೇಗೌಡ ಗೆದ್ದಿದ್ದರು. ಇಬ್ಬರೂ ದಾಯಾದಿಗಳಾಗಿದ್ರೂ ತಮ್ಮೇಗೌಡರ ಗೆಲುವನ್ನು ಮರಿಯಪ್ಪನ ಕಡೆಯವರು ಸಹಿಸಲಾಗದೇ ಹಳೇ ದ್ವೇಷ ಸಾಧಿಸಿ ನಿನ್ನೆ ಸಂಜೆ ಮರಿಯಪ್ಪರ ಮಗ ಚಾಣಕ್ಯಗೌಡ, ಅಕ್ಷಯ್ ಗೌಡ, ಪ್ರಶಾಂತ್, ಶ್ರೇಯಸ್ ಮತ್ತಿತರರು ಮಾರಕಾಸ್ತ್ರಗಳಿಂದ ತಮ್ಮೇಗೌಡ ಮತ್ತವರ ಬಾಮೈದ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.