ಬೆಂಗಳೂರು: ಮಾಸ್ಕ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಮಹಿಳೆಗೆ ದಂಡ ವಿಧಿಸಿದ್ದ ಮಾರ್ಷಲ್ ವಿರುದ್ಧವೇ ಮಹಿಳೆಯೊಬ್ಬರು ನಿಂದಿಸಿ, ಹಣವನ್ನು ಬಿಸಾಕಿರುವ ಘಟನೆ ನಗರದಲ್ಲಿ ನಡೆದಿದೆ.
ಮಾರ್ಷಲ್‍ಗಳನ್ನ ನಿಂದಿಸಿದ ಮಹಿಳೆ ವಿಡಿಯೋವನ್ನು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಕಟ್ಟುನಿಟ್ಟಿನ ಆದೇಶದಂತೆ ಬಿಬಿಎಂಪಿ ಮಾರ್ಷಲ್ ಗಳು ಮಾಸ್ಕ್ ಧರಿಸದೆ ಓಡಾಡುವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸುತ್ತಿದ್ದಾರೆ. ಮಾರ್ಷಲ್‍ಗಳ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು, ಅವರನ್ನು ನಿಂದಿಸುವುದು ಅಪರಾಧವಾಗಿದೆ. ಇಂತಹವರ ವಿರುದ್ಧ ಬೆಂಗಳೂರು ಪೊಲೀಸರು ಕಾನೂನು ಕ್ರಮ ಜರುಗಿಸಲಿದ್ದಾರೆ ಎಂದು ರಂದೀಪ್ ಬರೆದುಕೊಂಡಿದ್ದಾರೆ.
Advertisement
BBMP Marshals are duty bound to enforce mask ???? and social distancing ↔️ norms as per Govt order. Please do not throw money, abuse or misbehave with them as it will attract additional action from @BlrCityPolice.#BBMP #Bengaluru @BBMPCOMM pic.twitter.com/G2OoVAmI57
— BBMP Solid Waste Mgmt Special Commissioner (@BBMPSWMSplComm) November 11, 2020
Advertisement
ವಿಡಿಯೋಗಳನ್ನು ನಿಂದಿಸಿರುವ ಮಹಿಳೆ, ಸುಮ್ಮನೆ ನಮ್ಮ ಪಾಡಿಗೆ ನಾವು ಹೋಗುತ್ತಿದ್ದರೆ ತೊಂದರೆ ಕೊಡುತ್ತೀರಾ? ನಿಮ್ಮಂತವರಿಗೆ ಕೊರೊನಾ ಬಂದು ಸಾಯುತ್ತಾರೆ ಎಂದು ಮಹಿಳೆ ನಿಂದಿಸಿದ್ದಾರೆ. ಇದಕ್ಕೆ ತಾಳ್ಮೆಯಾಗಿಯೆ ಉತ್ತರಿಸಿರುವ ಮಾರ್ಷಲ್, ನಿಮ್ಮ ಮಾತನ್ನೇ ಆರ್ಶೀವಾದವಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
Advertisement
ಸರ್ಕಾರದ ಕಟ್ಟುನಿಟ್ಟಿನ ಆದೇಶದಂತೆ #ಬಿಬಿಎಂಪಿ ಮಾರ್ಷಲ್ ಗಳು ಮಾಸ್ಕ್ ???? ಧರಿಸದೆ ಓಡಾಡುವ ಮತ್ತು ಸಾಮಾಜಿಕ ಅಂತರ ↔ ಕಾಯ್ದುಕೊಳ್ಳದವರಿಗೆ ದಂಡ ವಿಧಿಸುತ್ತಿದ್ದಾರೆ. ಮಾರ್ಷಲ್ ಗಳ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು, ಅವರನ್ನು ನಿಂದಿಸುವುದು/ದಂಡಿಸುವುದು ಅಪರಾಧವಾಗಿದೆ. ಇಂತಹವರ ವಿರುದ್ಧ @BlrCityPolice ಕಾನೂನು ಕ್ರಮ ಜರುಗಿಸಲಿದ್ದಾರೆ. pic.twitter.com/uzGZZAj05O
— BBMP Solid Waste Mgmt Special Commissioner (@BBMPSWMSplComm) November 11, 2020
Advertisement
ಸಾಮಾಜಿಕ ಅಂತರ ನಿಯಮ ಪಾಲಿಸದಿದ್ದರೆ, ಮಾಸ್ಕ್ ಧರಿಸದಿದ್ದರೆ ಮಾರ್ಷಲ್ಸ್ ಕೇಳುತ್ತಾರೆ. ಸರ್ಕಾರದ ಸೂಚನೆಯ ಪ್ರಕಾರ ಮಾರ್ಷಲ್‍ಗಳು ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಅತಿರೇಕದ ವರ್ತನೆ ತೋರಬಾರದು ಎಂದು ವಿಶೇಷ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.