ಜಕಾರ್ತಾ: ಮಾಸ್ಕ್ ಧರಿಸದ ವಿದೇಶಿಗರಿಗೆ ಪೊಲೀಸರು ಪುಶ್ ಅಪ್ಸ್ ಮಾಡಿಸುವ ಮೂಲಕ ಶಿಕ್ಷೆ ನೀಡಿರುವ ಘಟನೆ ಇಂಡೋನೇಷ್ಯಾದ ರೆಸಾರ್ಟ್ ದ್ವೀಪವಾದ ಬಾಲಿಯಲ್ಲಿ ನಡೆದಿದೆ.
Advertisement
ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗುತ್ತಿದ್ದು, ದೃಶ್ಯದಲ್ಲಿ ಭದ್ರತಾ ಅಧಿಕಾರಿಗಳು ಟಿ-ಶರ್ಟ್ ಧರಿಸಿರುವ ಪ್ರವಾಸಿಗರಿಗೆ ಬಿಸಿಲಿನಲ್ಲಿ ವ್ಯಾಯಾಮ ಮಾಡಿಸುತ್ತಿರುವುದು ಕಂಡು ಬಂದಿದೆ.
Advertisement
ಇಂಡೋನೇಷ್ಯಾದಲ್ಲಿ ಕಳೆದ ವರ್ಷ ಕೋವಿಡ್-19 ಹೆಚ್ಚಾಗುತ್ತಿದ್ದಂತೆ ಬಾಲಿಯ ಅಧಿಕಾರಿಗಳು ಕಡ್ಡಾಯವಾಗಿ ಸಾರ್ವಜನಿಕರು ಮಾಸ್ಕ್ ಧರಿಸಬೇಕೆಂದು ಘೋಷಿಸಿದ್ದರು.
Advertisement
Advertisement
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ವಿದೇಶಿಗರು ಮಾಸ್ಕ್ ಧರಿಸದೆ ಸಿಕ್ಕಿಬಿದ್ದಾರೆ. ಸುಮಾರು 70 ಜನ 100 ಸಾವಿರ ರೂಗಳಷ್ಟು ದಂಡ ಪಾವತಿಸಿದ್ದಾರೆ. ಇನ್ನೂ 30 ಜನರು ನಮ್ಮ ಬಲಿ ಹಣವಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಅವರಿಗೆ ಪುಶ್ ಅಪ್ಸ್ ಮಾಡಲು ಆದೇಶಿಸಲಾಗಿದೆ ಎಂದು ಬಾಲಿ ಭದ್ರತಾ ಅಧಿಕಾರಿ ಗುಸ್ಟಿ ಅಗುಂಗ್ ಕೇತುತ್ ಸೂರ್ಯನೇಗರ ತಿಳಿಸಿದ್ದಾರೆ.
ಮಾಸ್ಕ್ ಹಾಳಾಗಿದೆ, ಮಾಸ್ಕ್ ಒದ್ದೆಯಾಗಿದೆ, ಈ ವಿಚಾರವಾಗಿ ತಿಳಿದಿಲ್ಲ ಎಂದು ಹಲವು ಕಾರಣಗಳನ್ನು ನೀಡಿದರೂ ಮಾಸ್ಕ್ ತರದೇ ಇರುವವರಿಗೆ 50 ಪುಶ್ ಅಪ್ಸ್ ಮಾಡಿಸಲಾಗುತ್ತದೆ. ಮಾಸ್ಕ್ ಇದ್ದು ಸರಿಯಾಗಿ ಧರಿಸದವರಿಗೆ 15 ಪುಶ್ ಅಪ್ಸ್ ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಹೇಳಿದರು.