– ಅಜಾಗರೂಕತೆ ಮೆರೆದ ಇಬ್ಬರು ಪೊಲೀಸರ ಅಮಾನತು
ಲಕ್ನೋ: ಮಾಸ್ಕ್ ಧರಿಸದಿದ್ದಕ್ಕಾಗಿ ಇಬ್ಬರು ಯುವಕರಿಗೆ ಪೊಲೀಸರು ರೈಲ್ವೇ ಟ್ರ್ಯಾಕ್ ಪಕ್ಕದಲ್ಲೇ ಉರುಳು ಸೇವೆ ಶಿಕ್ಷೆ ವಿಧಿಸಿ ಅಜಾಗರೂಕತೆ ಮೆರೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಈ ಘಟನೆಯು ಹಾಪುರ್ ಜಿಲ್ಲೆಯಲ್ಲಿ ನಡೆದಿದ್ದು, ಅಜಾಗರೂಕತೆ ತೋರಿದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಆಘಾತಕಾರಿ ಸಂಗತಿಯೆಂದರೆ ಪೊಲೀಸರು ರೈಲು ಬರುವುದಕ್ಕೂ ಮುನ್ನ ಹಾಕಲಾಗಿದ್ದ ಗೇಟ್ ಮಧ್ಯೆ ಯುವಕರಿಗೆ ಉರುಳುವಂತೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಯುವಕರು ರಸ್ತೆಯಲ್ಲಿ ಉರುಳುವುದನ್ನು ನಿಲ್ಲಿಸಿದಾಗ ಹೊಡೆದಿದ್ದಾರೆ.
Advertisement
In UP's Hapur district, cops ask two men to roll on the road in the scorching heat near a railway crossing, dangerously close to railway tracks. This was the punishment for not wearing mask. @Uppolice pic.twitter.com/4fbGA4Q0b8
— Piyush Rai (@Benarasiyaa) May 19, 2020
Advertisement
ಪೊಲೀಸರು ಯುವಕರಿಗೆ ಶಿಕ್ಷೆ ನೀಡುತ್ತಿದ್ದ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ, ಟೀಕೆ ವ್ಯಕ್ತವಾಗಿದೆ. ಇದರಿಂದಾಗಿ ಎಚ್ಚೆತ್ತ ಹಾಪುರ್ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಅಜಾಗರೂಕತೆ ಮೆರೆದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
Advertisement
ಈ ಕುರಿತು ಟ್ವೀಟ್ ಮಾಡಿರುವ ಹಾಪುರ್ ಪೊಲೀಸರು, ವೈರಲ್ ವಿಡಿಯೋವನ್ನು ತನಿಖೆ ಮಾಡಲಾಗಿದ್ದು, ಅಜಾಗರೂಕತೆ ಮೆರೆದ ಪೊಲೀಸರನ್ನು ಪೊಲೀಸ್ ಅಧೀಕ್ಷಕರು ತಕ್ಷಣದಿಂದ ಅಮಾನತುಗೊಳಿಸಿದ್ದಾರೆ. ಅವರ ವಿರುದ್ಧ ಅಗತ್ಯ ಕ್ರಮಕ್ಕಾಗಿ ವರದಿಯನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
उक्त वायरल वीडियो की जांच की गई जिसमें दोषी पाए गए पुलिसकर्मी को श्रीमान पुलिस अधीक्षक महोदय द्वारा तत्काल प्रभाव से निलम्बित किया गया है एवं होमगार्ड के विरुद्ध आवश्यक कार्यवाही हेतु जिला कमाण्डेन्ट को रिपोर्ट प्रेषित की गई है।
— HAPUR POLICE (@hapurpolice) May 19, 2020