ಅಲ್ಬನಿ (ನ್ಯೂಯಾರ್ಕ್): ಕೊರೊನಾ ಪ್ರಕರಣಗಳು ಇಂದಿಗೂ ಕೂಡ ದೊಡ್ಡ ಮಟ್ಟದಲ್ಲಿಯೇ ಇದೆ. ಪ್ರತಿನಿತ್ಯ 1000ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಬರುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ನಮ್ಮನ್ನು ನಾವು ಕೊರೊನಾದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಬಹಳ ಮುಖ್ಯ.
Advertisement
ಎಷ್ಟೋ ಜನರು ಮಾಸ್ಕ್ ಧರಿಸುವುದರಿಂದ ಕೊರೊನಾ ಹೋಗುವುದಿಲ್ಲ ಎಂದು ಧರಿಸದೇ ಅಸಡ್ಡೆ ತೋರಿಸುತ್ತಿದ್ದಾರೆ. ಮಾಸ್ಕ್ ಧರಿಸದೇ ಇರುವ ವ್ಯಕ್ತಿಯಿಂದ ಇತರರಿಗೆ ಕೂಡ ಕಿರಿಕಿರಿಯಾಗುತ್ತದೆ. ಹೀಗಾಗಿ ಅಂತಹ ವ್ಯಕ್ತಿಗಳಿಗೆ ತಿಳಿ ಹೇಳಿವುದು ಇಲ್ಲವಾದಲ್ಲಿ ಅವರ ವಿರುದ್ಧ ದೂರು ನೀಡುವುದು ಬಹಳ ಅವಶ್ಯಕ.
Advertisement
ಆದರೆ ವ್ಯಕ್ತಿಯೊಬ್ಬ ನೂಯಾರ್ಕ್ ನ ರೈಲಿನಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ತಾನೇ ಬುದ್ಧಿ ಕಲಿಸಲು ಮುಂದಾಗಿದ್ದಾನೆ. ಸದ್ಯ ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದೆ. ನ್ಯೂಯಾರ್ಕ್ ನ ಸುರಂಗಮಾರ್ಗದ ಟ್ರೈನ್‍ನಲ್ಲಿ ವ್ಯಕ್ತಿಯೊಬ್ಬ ಚೌಕಿ ವೇಷಧರಿಸಿ ಮಾಸ್ಕ್ ಧರಿಸದೇ ಇರುವ ವ್ಯಕ್ತಿಗಳಿಗೆ ಹೆದರಿಸುವ ಮೂಲಕ ಕಿರುಕುಳ ನೀಡಿದ್ದಾನೆ.
Advertisement
View this post on Instagram
Advertisement
ಕುಳ್ಳಗಿರುವ ಈತ ಕಿತ್ತಳೆ ಬಣ್ಣದ ವಿಗ್ ಮತ್ತು ಬ್ರೈಟ್ ಕಲರ್ ಟಾಪ್ ಧರಿಸಿ ಮಾಸ್ಕ್ ಧರಿಸದೇ ಇರುವ ಮಹಿಳೆಗೆ ಹೆದರಿಸಿದ್ದಾನೆ. ವೀಡಿಯೋನಲ್ಲಿ ಆತ ಮಹಿಳೆಯ ಕಾಲಿಗೆ ಕಚ್ಚಿದಂತೆ ಕಾಣಿಸುತ್ತದೆ.
ಆತನ ವರ್ತನೆಗೆ ಬೆದರಿದ ಮಹಿಳೆ ಮತ್ತೊರ್ವ ಪ್ರಯಾಣಿಕರ ಬಳಿ ಆತನನ್ನು ದೂಡಿದ್ದಾಳೆ. ಕೊನೆಗೆ ಆತ ಮಹಿಳೆಯನ್ನು ತೆರಳಲು ಬಿಟ್ಟು ನಂತರ ಮುಂದಿನ ಬೋಗಿಗೆ ಓಡಿ ಹೋಗುತ್ತಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ 65,000 ಲೈಕ್ಸ್ ಮತ್ತು 2,100 ಕಾಮೆಂಟ್ ಗಳು ಬಂದಿದೆ.