ಹಾಸನ: ಸರ್ಕಾರ ಸಂಜೆ ಲಾಕ್‍ಡೌನ್ ತೆರವುಗೊಳಿಸುತ್ತಿದ್ದಂತೆ ಹಾಸನದಲ್ಲಿ ಜನ ಸಾಮಾಜಿಕ ಅಂತರ ಮರೆತು ಮೀನಿಗಾಗಿ ಕೆರೆಗೆ ಮುಗಿಬಿದ್ದ ಘಟನೆ ನಡೆದಿದೆ.
ಜಿಲ್ಲೆಯ ಅರಕಲಗೂಡು ತಾಲೂಕಿನ ಹನೆಮಾರನಹಳ್ಳಿಯಲ್ಲಿ ನೂರಾರು ಜನ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ಕೆರೆಯ ಮೀನಿಗಾಗಿ ಮುಗಿಬಿದ್ದಿದ್ದಾರೆ. ಕೆರೆಯಲ್ಲಿ ನೀರು ಕಡಿಮೆಯಾಗಿದ್ದರಿಂದ ಅಕ್ಕಪಕ್ಕದ ಹಳ್ಳಿಯ ಜನ ಒಮ್ಮೆಲೆ ಮೀನು ಹಿಡಿಯಲು ಕೆರೆಗೆ ಇಳಿದಿದ್ದಾರೆ.
ಒಂದು ಕಡೆ ಅಧಿಕಾರಿಗಳು ಕೊರೊನಾ ತಡೆಗೆ ನಿರಂತರವಾಗಿ ಓಡಾಡುತ್ತಿದ್ದರೆ, ಮತ್ತೊಂದು ಕಡೆ ಜನ ಮಾತ್ರ ತಮಗೂ ಕೊರೊನಾಗೂ ಸಂಬಂಧವೇ ಇಲ್ಲ ಎಂಬ ರೀತಿ ನಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರತಿನಿತ್ಯ ನೂರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿದ್ದು, ಅದರ ನಡುವೆ ಜಿಲ್ಲೆಯ ಜನ ಕೂಡ ಸಾಮಾಜಿಕ ಅಂತರ ಮರೆತು ವರ್ತಿಸುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಿದೆ.