– ಒರ್ವ ಸಾವು ಇನ್ನೋರ್ವ ಗಂಭೀರ
– ಮಾಲ್‍ನಲ್ಲಿ ನಡೆದ 2 ನೇ ದಾಳಿ ಇದು
ವಾಷಿಂಗ್ಟನ್: ಮಾಲ್‍ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಇನ್ನೋರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಉತ್ತರ ವಿಸ್ಕಾನ್‍ಸಿನ್‍ನಲ್ಲಿ ನಡೆದಿದೆ.
ಗುಂಡಿನ ದಾಳಿ ವೇಳೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಇನ್ನೋರ್ವನಿಗೆ ಗಾಯಗಳಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಗ್ರ್ಯಾಂಡ್ ಚುತೆಯಲ್ಲಿರುವ ಫಾಕ್ಸ್ ರಿವರ್ ಮಾಲ್‍ನಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ.
ಪೊಲೀಸರು ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ದಾಳಿಕೋರ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಇದು ವಿಸ್ಕಾನ್‍ಸಿನ್‍ನಲ್ಲಿ ನಡೆದ ಎರಡನೇ ಮಾಲ್ ದಾಳಿಯಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಕೂಡ ಮಾಲ್‍ವೊಂದರಲ್ಲಿ ದಾಳಿ ನಡೆಸಲಾಗಿತ್ತು. ಇದರಲ್ಲಿ 8 ಮಂದಿ ಗಾಯಗೊಂಡಿದ್ದರು ಎಂದು ಪೊಲೀಸ್ ಅಧಿಕಾರಿ ಟ್ರಾವಿಸ್ ವಾಸ್ ಅವರು ಹೇಳಿದ್ದಾರೆ.