ಬೀಜಿಂಗ್: ನಿಯಂತ್ರಣ ಕಳೆದುಕೊಂಡಿದ್ದ ಚೀನಾ ರಾಕೆಟ್ ಭಗ್ನಾವಶೇಷ ಇಂದು ಬೆಳಗ್ಗೆ ಭಾರತೀಯ ಕಾಲಮಾನ 7:54ಕ್ಕೆ ಮಾಲ್ಡೀವ್ಸ್ ಬಳಿಯ ಸಮುದ್ರಕ್ಕೆ ಬಿದ್ದಿದೆ.
22 ಟನ್ ಭಾರ ಹಾಗೂ 100 ಅಡಿ ಎತ್ತರದ ಚೀನಾದ ಲಾಂಗ್ ಮರ್ಚ್-5ಬಿ ರಾಕೆಟ್‍ನ ಭಗ್ನಾವಶೇಷ ವಾರಾಂತ್ಯದಲ್ಲಿ ಭೂಮಿಗೆ ಪತನವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದರು.
Advertisement
ಮೇಲ್ವಿಚಾರಣೆ ಮತ್ತು ವಿಶ್ಲೇಷಣೆಯ ನಂತರ, ಲಾಂಗ್ ಮಾರ್ಚ್ 5 ಬಿ ರಾಕೆಟ್‍ನ ಕೊನೆಯ ಹಂತದ ಭಗ್ನಾವಶೇಷವು ವಾತಾವರಣವನ್ನು ಪುನಃ ಪ್ರವೇಶಿಸಿ ಮಾಲ್ಡೀವ್ಸ್ ಬಳಿಯ ಹಿಂದೂ ಮಹಾಸಾಗರಕ್ಕೆ ಬಿದ್ದಿದೆ ಎಂದು ಚೀನಾ ಮ್ಯಾನ್ಡ್ ಸ್ಪೇಸ್ ಎಂಜಿನಿಯರಿಂಗ್ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
Advertisement
Advertisement
ಚೀನಾದ ಮಹತ್ವಕಾಂಕ್ಷೆಯ ಶಾಶ್ವತ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಯೋಜನೆಯ ಭಾಗವಾಗಿ ಏಪ್ರಿಲ್ 29ರಂದು 5ಬಿ ರಾಕೆಟ್ ಅನ್ನು ಕಕ್ಷೆಗೆ ಉಡಾಯಿಸಿತ್ತು.
Advertisement
ನಿಯಂತ್ರಣ ಕಳೆದುಕೊಂಡಿದ್ದ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಯುರೋಪ್ ಬಾಹ್ಯಾಕಾಶ ಸಂಸ್ಥೆಗಳ ವಿಜ್ಞಾನಿಗಳು ರಾಕೆಟ್ ಕಕ್ಷೆಯನ್ನು ಪತ್ತೆ ಹಚ್ಚಿ ಎಲ್ಲಿ ಭಗ್ನಾವಶೇಷ ಬೀಳಬಹುದು ಎಂಬುದನ್ನು ಪ್ರಯತ್ನಿಸುತ್ತಿದ್ದರು.
ಕಳೆದ ವರ್ಷ ಲಾಂಗ್ ಮಾರ್ಚ್ ರಾಕೆಟ್ ಭಗ್ನಾವಶೇಷ ಐವರಿಕೋಸ್ಟ್ ಗ್ರಾಮದಲ್ಲಿ ಬಿದ್ದಿತ್ತು. ಈ ವೇಳೆ ಯಾವುದೇ ಪ್ರಾಣಹಾನಿ ಆಗಿರಲಿಲ್ಲ.