ಮಂಡ್ಯ: ತಂದೆಯೇ ಮಗನನ್ನು ಹತ್ಯೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅಂಚೆಭುವನಹಳ್ಳಿಯಲ್ಲಿ ಕಳೆದ ರಾತ್ರಿ ನಡೆದಿದೆ.
ತಂದೆಯಿಂದ ಹಲ್ಲೆಗೊಳಗಾದವನನ್ನು ಪ್ರಸನ್ನ ಎಂದು ಗುರುತಿಸಲಾಗಿದೆ. ಕಿರಿಯ ಪತ್ನಿಯ ಮಗನೊಂದಿಗೆ ಸೇರಿ ಹಿರಿಹೆಂಡ್ತಿ ಮಗನ ಕೊಲೆಗೆ ಶಿವಲಿಂಗೇಗೌಡ ಯತ್ನಿಸಿದ್ದಾನೆ. ಶಿವಲಿಂಗೇ ಗೌಡನಿಗೆ ಪ್ರಸನ್ನ ಸಹೋದರ ರಾಮಕೃಷ್ಣ ಸಾಥ್ ನೀಡಿದ್ದಾನೆ.
ಶಿವಲಿಂಗೇಗೌಡ ಮತ್ತು ರಾಮಕೃಷ್ಣ ಕುಟುಂಬ ಬೆಂಗಳೂರಿನಲ್ಲಿ ವಾಸವಿದೆ. ನಿನ್ನೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೆ ಯತ್ನಿಸಿದ್ದಾರೆ. ತಮ್ಮ ಪ್ರಯತ್ನ ವಿಫಲವಾದಾಗ ಕೃತ್ಯ ಎಸಗಲು ತಾವು ಬಂದಿದ್ದ ಕಾರನ್ನೂ ಬಿಟ್ಟು ಪರಾರಿಯಾಗಿದ್ದಾರೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಪ್ರಸನ್ನರನ್ನ ಸ್ಥಳೀಯರು ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕೌಟುಂಬಿಕ ಕಲಹದಿಂದ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗುತ್ತಿದೆ. ಇನ್ನು ದುಷ್ಕರ್ಮಿಗಳ ಪತ್ತೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.