– ಮಂಗಳೂರು ಪೊಲೀಸರ ರಕ್ತಪಾತಕ್ಕೆ ಗ್ಯಾಂಗ್ ಪ್ಲಾನ್
ಮಂಗಳೂರು: ಕರಾವಳಿ ಪೊಲೀಸರ ರಕ್ತಪಾತಕ್ಕೆ ಹುಟ್ಟಿಕೊಂಡಿದ್ದ ‘ಮಾಯಾ ಗ್ಯಾಂಗ್’ ನ ಸ್ಕೆಚ್ ಏನಿತ್ತು ಎಂಬುದು ತಿಳಿದರೆ ನೀವು ಬೆಚ್ಚಿ ಬೀಳೋದು ಗ್ಯಾರೆಂಟಿ.
ಮಂಗಳೂರಿನಲ್ಲಿ ಸಿಎಎ, ಎನ್‍ಆರ್‍ಸಿ ಪ್ರತಿಭಟನೆ ವೇಳೆ ನಡೆದಿದ್ದ ಲಾಠಿ ಚಾರ್ಜ್, ಕಲ್ಲುತೂರಾಟ ಮತ್ತು ಗೋಲಿಬಾರ್ ಘಟನೆಗೆ ಕಳೆದ ಡಿಸೆಂಬರ್‍ಗೆ ಒಂದು ವರ್ಷ ತುಂಬಿತ್ತು. ಈ ಗಲಭೆಯಲ್ಲಿ ಆಗ ಗೋಲಿಬಾರ್‍ಗೆ ಇಬ್ಬರು ಬಲಿಯಾಗಿದ್ದರು. ಒಂದು ವರ್ಷದೊಳಗೆ ಇದರ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಒಂದು ನಟೋರಿಯಸ್ ತಂಡ ಮಂಗಳೂರಿನಲ್ಲಿ ರೆಡಿಯಾಗಿತ್ತು. ಆ ತಂಡದ ಹೆಸರೇ ‘ಮಾಯಾ ಗ್ಯಾಂಗ್’.
Advertisement
Advertisement
ಮಾಯಾಗ್ಯಾಂಗ್ ಸ್ಕೆಚ್ ಏನು?
ಈ ಮಾಯಾ ಗ್ಯಾಂಗ್ ಪೊಲೀಸ್ ಅಧಿಕಾರಿಗಳ ಟಾರ್ಗೆಟ್ ಮಾಡಿತ್ತು. ಸಿಎಎ ಮತ್ತು ಎನ್‍ಆರ್‍ಸಿ ಗಲಭೆ ನಡೆದಿದ್ದ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪೊಲೀಸರ ಲಿಸ್ಟ್ ಮಾಡಿಟ್ಟುಕೊಂಡಿದ್ದ ‘ಮಾಯಾ ಗ್ಯಾಂಗ್’, ಉತ್ತರ ಪೊಲೀಸ್ ಠಾಣೆ ಸಿಬ್ಬಂದಿ ಸೇರಿ 20 ಪೊಲೀಸರನ್ನು ಟಾರ್ಗೆಟ್ ಮಾಡಿತ್ತು. ಚಾರ್ಜ್ ಶೀಟ್ ನಲ್ಲಿ ಯಾವ ಅಧಿಕಾರಿ, ಸಿಬ್ಬಂದಿ ಏನು ಕೆಲಸ ಮಾಡಿದ್ದಾರೆ ಅಂದು ನಮೂದಾಗಿದ್ದು, ಅದನ್ನು ಆಧರಿಸಿ ಪ್ರೈಮ್ ಟಾರ್ಗೆಟ್ ಪಟ್ಟಿ ತಯಾರಿಸಲಾಗಿತ್ತು.
Advertisement
Advertisement
ಸುಪ್ರೀಂ ಕೋರ್ಟ್ ವರೆಗೂ ಹೋಗಿ ಜಾಮೀನಿಗೆ ತಡೆ ತಂದಿದ್ದ ಪೊಲೀಸ್ ಅಧಿಕಾರಿಗಳು, ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್ ನಲ್ಲಿ ವ್ಯವಹರಿಸಿದ ಅಧಿಕಾರಿಗಳನ್ನು ಸಹ ಈ ಗ್ಯಾಂಗ್ ಟಾರ್ಗೆಟ್ ಮಾಡಿತ್ತು. ಅಲ್ಲದೆ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿರುವ ಸಿಬ್ಬಂದಿ ಮೇಲೆ ಮಾಯಾ ಕಣ್ಣು ಬಿದ್ದಿತ್ತು. ಈ ದಾಳಿಗೆ ವಿದ್ಯಾವಂತರ ಒಂದು ತಂಡ ಸಹ ಭಾಗಿಯಾಗಿತ್ತು. ಚಾರ್ಜ್ ಶೀಟ್ ಸ್ಟಡಿ ಮಾಡಿ ಅದರಲ್ಲಿನ ಮಾಹಿತಿ ಆಧಾರದ ಮೇಲೆ ಡ್ರಾಫ್ಟ್ ತಯಾರಿಸಿದ್ದರು.
ಮೃತ ವ್ಯಕ್ತಿಗಳು ಗಲಭೆಯಲ್ಲಿ ಪಾಲ್ಗೊಂಡಿದ್ದ ಬಗ್ಗೆ ಸಿಸಿಟಿವಿ ದಾಖಲೆ ಸಂಗ್ರಹಿಸಿದ್ದ ಅಧಿಕಾರಿಯನ್ನೂ ಟಾರ್ಗೆಟ್ ಮಾಡಿದ್ದರು. ಯಾವ ಅಧಿಕಾರಿ? ಸಿಬ್ಬಂದಿ ಏನೇನು ಮಾಡಿದ್ದಾರೆ ಎಂದು ತಮ್ಮ ಚಾರ್ಜ್ ಶೀಟ್ ನಲ್ಲಿ ನಮೂದು ಮಾಡಿದ್ದರು. ಇದನ್ನು ಆಧರಿಸಿ ಅವರ ಮೇಲೆ ದಾಳಿ ಮಾಡಲು ‘ಮಾಯಾ ಗ್ಯಾಂಗ್’ ಪ್ಲಾನ್ ಮಾಡಿತ್ತು. ದಾಳಿ ನಡೆಸಲು ಗ್ರೌಂಡ್ ವರ್ಕ್ ಸಹ ನಡೆದಿತ್ತು. ಪೊಲೀಸ್ ಅಧಿಕಾರಿಗಳು ಎಲ್ಲೆಲ್ಲಿ ಹೋಗ್ತಾರೆ ಎಂದು ಗಮನಿಸಲು ಗೂಢಚಾರಿಗಳನ್ನು ಬಿಡಲಾಗಿತ್ತು ಹೀಗೆ ಇಂಚಿಂಚು ಮಾಹಿತಿ ಸಂಗ್ರಹಿಸಿ ದಾಳಿಗೆ ಸಂಚು ರೂಪಿಸಲಾಗಿತ್ತು.
ಮಾಯಾಗ್ಯಾಂಗ್ ಹೆಸರು ಹೇಗೆ ಬಂತು?
ಈ ಮಾಯಾ ಗ್ಯಾಂಗ್ ಗೆ ಹೆಸರು ಹೇಗೆ ಬಂತು ಎಂಬುದು ಪೊಲೀಸರ ಕುತೂಹಲವಾಗಿತ್ತು. ಇದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಮಂಗಳೂರಿನ ಕುದ್ರೋಳಿ ನಿವಾಸಿ 22 ವರ್ಷದ ಅನೀಶ್ ಬಂಧಿತರಲ್ಲಿ ಒಬ್ಬ. ಈತನೇ ಈ ಟೀಮ್ ಗೆ ಹೆಸರಿಟ್ಟಿದ್ದು. ಈತ ಗಾಂಜಾ ಪ್ರಕರಣದಲ್ಲಿದ್ದ, ಈ ಹಿಂದೆ ಈತನಿಗೆ ಪ್ರೇಯಸಿ ಇದ್ದಳು. ಆಕೆಯ ಹೆಸರು ಮಾಯಾ. ಹೀಗಾಗಿ ಈ ತಂಡಕ್ಕೆ ಮಾಯಾ ಎಂದು ಹೆಸರಿಟ್ಟಿದ್ದ.
ಈ ಮಾಯಾ ಗ್ಯಾಂಗ್ ನ ಹಿಂದೆ ಎಸ್‍ಡಿಪಿಐ ಮತ್ತು ಪಿಎಫ್‍ಐ ಇದೆ ಎಂದು ಮಂಗಳೂನಲ್ಲಿ ಹಿಂದೂಪರ ಸಂಘಟನೆಗಳು ಆರೋಪ ಮಾಡಿವೆ. ಗೋಲಿಬಾರ್ ಪ್ರತೀಕಾರಕ್ಕೆ ಪೊಲೀಸರ ಕೊಲೆಗೆ ಎಸ್‍ಡಿಪಿಐ ಮತ್ತು ಪಿಎಫ್‍ಐ ಕಾರ್ಯಕರ್ತರು ಯತ್ನಿಸಿದವರು. ವ್ಯವಸ್ಥಿತ ಸಂಚು ರೂಪಿಸಿ ಗೋಲಿಬಾರ್ ಗೆ ಪ್ರತಿಕಾರ ತೀರಿಸಿಕೊಳ್ಳಲು ಯತ್ನಿಸಲಾಗಿದೆ. ಬಂಧಿತ ಎಲ್ಲ ಆರೋಪಿಗಳು ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗೆ ಸೇರಿದವರು. ಇದಕ್ಕೆ ಸಣ್ಣ ಯುವಕರನ್ನು ಪಿಎಫ್‍ಐ ಬಳಸಿಕೊಂಡಿದೆ. ಈ ಯುವಕರಿಗೆ ಅಮಲು ಬರುವ ನೈಟ್ ರೇವಟ್ ಮಾತ್ರೆ ಕೊಡಲಾಗಿದೆ. ಮಾಯಾ ಗ್ಯಾಂಗ್ ಹೆಸರಲ್ಲಿ ಪಿಎಫ್‍ಐ ಮತ್ತು ಎಸ್‍ಡಿಪಿಐ ಈ ಕೃತ್ಯ ಎಸಗಿದೆ. ಪೊಲೀಸರನ್ನು ಕೊಲ್ಲಲು ವ್ಯವಸ್ಥಿತ ಪ್ಲಾನ್ ಮಾಡಲಾಗಿದೆ. ಹೀಗಾಗಿ ಪೊಲೀಸರು ಇದರ ಆಳಕ್ಕೆ ಇಳಿದು ತನಿಖೆ ಮಾಡಲಿ. ಇದಕ್ಕೆ ಹಣಕಾಸು ನೆರವು, ಆಶ್ರಯ ಕೊಟ್ಟವರ ಬಂಧನವಾಗಲಿ. ದಕ್ಷಿಣ ಕನ್ನಡ ಜಿಲ್ಲೆಯ ಎಸ್‍ಡಿಪಿಐ ಮತ್ತು ಪಿಎಫ್‍ಐ ಮುಖಂಡರ ಬಂಧನವಾಗಲಿ ಎಂದು ವಿಎಚ್‍ಪಿ ಮುಖಂಡ ಶರಣ್ ಪಂಪ್ ವೆಲ್ ಆರೋಪ ಮಾಡಿದ್ದಾರೆ.
ಸದ್ಯ ತನಿಖೆ ಮುಂದುವರಿದಿದೆ. ತನಿಖೆ ಪೂರ್ಣವಾದ ಬಳಿಕ ರಾಜಕೀಯ ಪಕ್ಷ, ಸಂಘಟನೆ ಯಾವುದು ಎನ್ನುವುದು ಗೊತ್ತಾಗಲಿದೆ.