ಮಳೆಗಾಲವನ್ನು ಸ್ವಲ್ಪ ಜನ ಇಷ್ಟಪಟ್ಟರೆ ಮತ್ತುಷ್ಟು ಮಂದಿ ಇಷ್ಟಪಡುವುದಿಲ್ಲ. ಮಾನ್ಸೂನ್ ವೇಳೆ ಎಷ್ಟೋ ಜನರಿಗೆ ಯಾವ ರೀತಿಯ ಬಟ್ಟೆಗಳನ್ನು ಹಾಕಿಕೊಳ್ಳಬೇಕು ಎಂದು ತಿಳಿದಿರುವುದಿಲ್ಲ. ಅಂತಹವರಿಗೆ ಮಳೆಗಾಲದಲ್ಲಿ ಯಾವ ರೀತಿಯ ಡ್ರೆಸ್ ಧರಿಸಬೇಕು ಎಂಬುವುದಕ್ಕೆ ಕೆಲವೊಂದು ಟಿಪ್ಸ್ ಈ ಕೆಳಗೆ ನೀಡಲಾಗಿದೆ.
ಕುಲೋಟ್ಸ್
ಹಳೆಯ ಶೈಲಿಯ ಡೆನಿಮ್ ಮತ್ತು ಪ್ಯಾಂಟ್‍ಗಳನ್ನು ಧರಿಸಿ ಬೇಸರಗೊಂಡಿರುವವರು ಇದನ್ನು ಚೂಸ್ ಮಾಡಬಹುದು. ಟೀ ಶರ್ಟ್, ಚಿಕ್ಕ ಕುರ್ತಾ ಅಥವಾ ಕ್ರಾಪ್ ಟಾಪ್‍ನೊಂದಿಗೆ ಇದು ಬಹಳ ಚೆನ್ನಾಗಿ ಸೂಟ್ ಆಗುತ್ತದೆ.
ಪ್ಲೇ ಸೂಟ್
ಪ್ಲೇ ಸೂಟ್ ಧರಿಸುವುದಕ್ಕೆ ಬಹಳ ಕಂಫರ್ಟ್ ಆಗಿರುತ್ತದೆ. ಮನ್ಸೂನ್ ವೆದರ್‍ಗೆ ಬ್ರೈಟ್ ಆಗಿರುವ ಬಣ್ಣದ ಪ್ಲೇಟ್ ಸೂಟ್‍ನನ್ನು ಆಯ್ಕೆ ಮಾಡಿಕೊಳ್ಳಿ. ಅದರಲ್ಲಿಯೂ ನೈಲಾನ್ ಮತ್ತು ಕಾಟನ್ ನಿಂದ ತಯಾರಿಸಲ್ಪಟ್ಟ ಬಟ್ಟೆಗಳನ್ನು ಆರಿಸಿಕೊಳ್ಳುವುದು ಉತ್ತಮ.
ಪ್ರಿಂಟೆಡ್ ಡ್ರೆಸ್
ದಿನನಿತ್ಯ ಒಂದೇ ತರಹದ ಡ್ರೆಸ್‍ಗಳನ್ನು ಧರಿಸಲು ಬೋರಿಂಗ್ ಅನಿಸಬಹುದು. ಹಾಗಾಗಿ ಅದರ ಮೇಲೆ ಪ್ರಿಂಟೆಡ್ ಇರುವ ಡ್ರೆಸ್‍ಗಳನ್ನು ಧರಿಸಿ ಇದು ನಿಮಗೆ ಫ್ಯಾಷನ್ ಲುಕ್ ನೀಡುತ್ತದೆ. ಅದರಲ್ಲೂ ಲೇಯರ್ ಇರುವಂತಹ ಡ್ರೆಸ್‍ಗಳನ್ನು ಹೆಚ್ಚಾಗಿ ಬಳಸಿ, ಇದು ಸಿಂಪಲ್ ಲುಕ್ ನೀಡುವುದರ ಜೊತೆಗೆ ನಿಮ್ಮನ್ನು ಬೆಚ್ಚಗೆ ಇರಿಸುತ್ತದೆ.
ಸ್ಕರ್ಟ್‍ಗಳು
ಸ್ಕಟ್ ಹಾಗೂ ಟಾಪ್‍ಗಳು ಕ್ಲಾಸಿಕ್ ಕಾಂಬಿನೇಷನ್ ಡ್ರೆಸ್ ಎಂದೇ ಹೆಳಬಹುದು. ಉದ್ಯೋಗದ ಸ್ಥಳದಲ್ಲಿ ನೀವು ಫಾರ್ಮಲ್ ಸ್ಕರ್ಟ್‍ಗಳನ್ನು ಧರಿಸಿ ಇದು ನಿಮಗೆ ಫ್ಯಾಶನ್ ಲುಕ್ ನೀಡುತ್ತದೆ. ಶರ್ಟ್‍ಗಳ ಜೊತೆಗೆ ಸ್ಕರ್ಟ್‍ಗಳನ್ನು ಧರಿಸಬಹುದು. ಆರಾಮವಾಗಿ ಓಡಾಡಲು ಪೆನ್ಸಿಲ್ ಸ್ಕರ್ಟ್ ಗಳಿಗಿಂತ ಎ-ಲೈನ್ ಅಥವಾ ಮಿಡಿ ಸ್ಕರ್ಟ್ ಬಹಳ ಸುಂದರವಾಗಿ ಕಾಣಿಸುತ್ತದೆ.
ಜೀನ್ಸ್
ನೀವು ಜೀನ್ಸ್ ಪ್ರಿಯರಾಗಿದ್ದರೆ, ಸ್ಲಿಮ್ ಫಿಟ್ ಜೀನ್ಸ್‍ಗಿಂತ ಬಾಯ್‍ಫ್ರೆಂಡ್ ಜೀನ್ಸ್‍ನನ್ನು ಹೆಚ್ಚಾಗಿ ಆಯ್ಕೆ ಮಾಡಿ. ಇದು ಮಳೆಗಾಲದಲ್ಲಿ ಧರಿಸಲು ಸುಲಭಕರವಾಗಿರುತ್ತದೆ.