ಚಾಮರಾಜನಗರ: ಉತ್ಸವಮೂರ್ತಿ ಮೇಲಿದ್ದ ಮಲೈ ಮಹದೇಶ್ವರನ ಚಿನ್ನದ ಕರಡಿಗೆ ನಾಪತ್ತೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೈ ಮಹದೇಶ್ವರಬೆಟ್ಟದಲ್ಲಿ ಘಟನೆ ನಡೆದಿದೆ. ಕರಡಿಗೆ ಸರದಿ ಅರ್ಚಕರ ಸುಪರ್ದಿನಲ್ಲಿದ್ದಲ್ಲಿತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಒಡವೆಯಾಗಿದೆ. ನಾಪತ್ತೆ ಪ್ರಕರಣ ಬೆಳಕಿಗೆ ಬಂದರೂ ಕೂಡ ಅಧಿಕಾರಿಗಳು ಮೌನ ವಹಿಸಿದ್ದಾರೆ. ಚಿನ್ನದ ಕರಡಿಗೆ ಕಾಣೆಯಾಗಿ ಐದಾರು ದಿನ ಕಳೆದರೂ ದೂರು ದಾಖಲಾಗಿಲ್ಲ.
Advertisement
Advertisement
ಅರ್ಚಕರ ಗುಂಪುಗಳ ನಡುವಿನ ಮುಸುಕಿನ ಗುದ್ದಾಟದ ಫಲ ಚಿನ್ನದ ಕರಡಿಗೆಯೇ ನಾಪತ್ತೆಯಾಗಿದೆ. ಅರ್ಚಕರಲ್ಲೇ ಮೂರು ಗುಂಪುಗಳಿದ್ದು, ಅರ್ಚಕರ ಗುಂಪುಗಳ ನಡುವೆ ಒಳಗೊಳಗೆ ವೈಮನಸ್ಯ ಏರ್ಪಟ್ಟಿದೆ. ಒಂದು ಗುಂಪಿಗೆ ಕೆಟ್ಟ ಹೆಸರು ತರಲು ಮತ್ತೊಂದು ಗುಂಪು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಚಿನ್ನದ ಕರಡಿಗೆಯನ್ನು ಹುಂಡಿಗೆ ಹಾಕಿರಬಹುದೆಂಬ ಶಂಕೆ ಕೂಡ ವ್ಯಕ್ತವಾಗಿದೆ.
Advertisement
Advertisement
ಇಂದು ನಡೆಯಲಿರುವ ಹುಂಡಿ ಎಣಿಕೆ ವೇಳೆ ಚಿನ್ನದ ಕರಡಿಗೆ ಸಿಕ್ಕರೆ ಪ್ರಕರಣ ಮುಚ್ಚಿಹಾಕಲು ಯತ್ನ ನಡೆದಿದೆ. ಇಲ್ಲವೇ ಸರದಿ ಅರ್ಚಕರಿಂದ ಹೊಸ ಚಿನ್ನದ ಕರಡಿಗೆ ಮಾಡಿಸಿ ಪ್ರಕರಣಕ್ಕೆ ಇತಿ ಶ್ರೀ ಹಾಡಲೂ ಸಹ ನಿರ್ಧರಿಸಲಾಗಿದೆ ಎನ್ನಲಾಗ್ತಿದೆ. ಇಂದು ಚಿನ್ನದ ಕರಡಿಗೆ ನಾಪತ್ತೆಯಾಗಿದೆ. ನಾಳೆ ಇತರೆ ಚಿನ್ನದ ಒಡವೆ ನಾಪತ್ತೆಯಾದರೆ ಯಾರು ಜವಾಬ್ದಾರರೆಂದು ಸಾರ್ವಜನಿಕರ ಪ್ರಶ್ನಿಸುತ್ತಿದ್ದಾರೆ. ಹುಂಡಿ ಎಣಿಕೆ ವೇಳೆ ಕರಡಿಗೆ ಸಿಗುತ್ತಾ? ಇಲ್ಲವೇ ಯಾರಾದರೂ ಕದ್ದಿದ್ದಾರಾ? ಅವರ ವಿರುದ್ಧ ಕ್ರಮವಾಗುತ್ತಾ ಅನ್ನೋದ್ನ ಕಾದುನೋಡಬೇಕಾಗಿದೆ.