ಚಾಮರಾಜನಗರ: ಜಿಲ್ಲೆಯ ಮಾದಪ್ಪನ ಬೆಟ್ಟದ ದಾಸೋಹ, ಲಾಡುಗೆ ಈಗ ಅಧಿಕೃತ ಮುದ್ರೆ ದೊರೆತಿದ್ದು, ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‍ಎಸ್‍ಎಸ್‍ಎಐ) ಗುಣಮಟ್ಟದ ಸರ್ಟಿಫಿಕೇಟ್ ನೀಡಿದೆ.
ಲೈಸೆನ್ಸ್ ಗಾಗಿ ದೇಗುಲದ ಪ್ರಾಧಿಕಾರ ಕಳೆದ 6 ತಿಂಗಳ ಹಿಂದೆ ಅರ್ಜಿ ಸಲ್ಲಿಸಿ, ಆಹಾರದ ವಿಚಾರದಲ್ಲಿ ತೆಗೆದುಕೊಂಡ ಸುರಕ್ಷತಾ ಕ್ರಮಗಳ ಬಗ್ಗೆ ಲಿಖಿತ ರೂಪದಲ್ಲಿ ತಿಳಿಸಿತ್ತು. ಇದನ್ನು ಆಧರಿಸಿ ಎಫ್‍ಎಸ್‍ಎಸ್‍ಎಐ ಲೈಸೆನ್ಸ್ ನೀಡಿದೆ. ತಿರುಪತಿ ಲಾಡು ಪ್ರಸಾದ, ಧರ್ಮಸ್ಥಳದ ಅನ್ನ ದಾಸೋಹದಷ್ಟೇ ಪ್ರಸಿದ್ಧಿಯಾಗಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ದೇಗುಲಕ್ಕೆ ಎಫ್‍ಎಸ್‍ಎಸ್‍ಎಐ ಪರವಾನಗಿ ದೊರೆತಿದೆ.
ಆಹಾರದ ಗುಣಮಟ್ಟದ ಖಾತ್ರಿಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧೀನಕ್ಕೊಳಪಟ್ಟ ಸಂಸ್ಥೆಯಾಗಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮಾನದಂಡಗಳಿಗೆ ಅನುಗುಣವಾಗಿ ಕ್ಷೇತ್ರದಲ್ಲಿ ದಾಸೋಹ ಮತ್ತು ಲಾಡು ಪ್ರಸಾದ ತಯಾರಿಕೆ, ಹಂಚಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಲೈಸೆನ್ಸ್ ದೊರೆತಿದ್ದು, ಪ್ರತಿ ವರ್ಷವೂ ನವೀಕರಿಸಿಕೊಳ್ಳಬೇಕಿದೆ.
ಲೈಸೆನ್ಸ್ ಗಾಗಿ ದೇಗುಲದ ಪ್ರಾಧಿಕಾರ ಕಳೆದ 6 ತಿಂಗಳ ಹಿಂದೆ ಅರ್ಜಿ ಸಲ್ಲಿಸಿ ಸುರಕ್ಷತಾ ಕ್ರಮಗಳ ಬಗ್ಗೆ ಲಿಖಿತ ರೂಪದಲ್ಲಿ ವಿವರಿಸಿತ್ತು. ಅದಾದ ಬಳಿಕ ಎಫ್‍ಎಸ್‍ಎಸ್‍ಎಐ ಅಧಿಕಾರಿಯೊಬ್ಬರು ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸುರಕ್ಷತೆ, ಶುದ್ಧತೆಯನ್ನು ಪರೀಕ್ಷಿಸಿದ ಬಳಿಕ ಈ ಪರವಾನಗಿ ನೀಡಲಾಗಿದೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸಹ ಗುಣಮಟ್ಟದ ಸರ್ಟಿಫಿಕೇಟ್ ನೀಡಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಪುಣ್ಯ ಕ್ಷೇತ್ರ ಮಲೆ ಮಹದೇಶ್ವರಸ್ವಾಮಿ ಬೆಟ್ಟದ ಕುರಿತು ಈ ಹರುಷದ…
Posted by Suresh Kumar S on Sunday, November 8, 2020