ನೆಲಮಂಗಲ: ಚಿತ್ರರಂಗದ ಚಂದನವನದಲ್ಲಿ ಡ್ರಗ್ಸ್ ಪ್ರಕರಣದ ಸದ್ದು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ತುಮಕೂರಿನ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಯವಕರಿಗೆ ಮಾದಕ ವ್ಯಸನದಿಂದ ದೂರವಿರಿ ಎಂದು ಕರೆ ನೀಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಳೆನಿಜಗಲ್ಲಿನ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ, ಕೆರೆಗೆ ಬಾಗಿನ ಸಮರ್ಪಿಸಿದ ಹಿರೇಮಠದ ಶ್ರೀಗಳು, ನಂತರ ಮಾಧ್ಯಮಗಳೊಂದಿಗೆ ಪ್ರಸ್ತುತ ಸನ್ನಿವೇಶದ ಬಗ್ಗೆ ಮಾತನಾಡಿದರು. ಮಾದಕ ವ್ಯಸನಿಗಳಿಗೆ ಯುವಕರು ದಾಸರಾಗಬಾರದು ಎಂದರು.
Advertisement
Advertisement
ಆಧುನಿಕ ಸಮಾಜದಲ್ಲಿ ತಂತ್ರಜ್ಞಾನ ಬೆಳೆದಿದೆ. ಎಲ್ಲವೂ ಅನ್‍ಲೈನ್ ಕಾಲ ಎಂಬಾಂತಾಗಿದೆ. ಯುವಕರು ತಮ್ಮ ವ್ಯಕ್ತಿತ್ವ ಕಟ್ಟಿಕೊಳ್ಳಬೇಕು. ಅಂದಿನ ಯುವಕರು ಸುಶಿಕ್ಷತರಿರುತ್ತಿರಲಿಲ್ಲ. ಇಂದು ಯವಕರು ಸುಶಿಕ್ಷತರಾಗಿದ್ದಾರೆ. ಆದರೆ ಯುವಕರು ಸಾಮಾಜಿಕ ಜಾಲತಾಣದಿಂದ ಕೆಟ್ಟಿಲ್ಲ. ಪ್ರಕೃತಿಯನ್ನು ನೋಡಿ ಯುವಕರು ಕಲಿಯಬೇಕು. ವಿವೇಚನೆ ಬಳಸಬೇಕು. ಯುವಕರು ವಿವೇಚನೆ ಗಳಿಸಬೇಕು ಎಂದು ತಿಳಿಸಿದರು.
Advertisement
ವ್ಯಸನಗಳಿಂದ ಯುವ ಪೀಳಿಗೆ ದೂರವಾಗಬೇಕು. ವ್ಯಸನಗಳಿಂದಲೇ ಯುವಕರು ಯೌವ್ವನ ಕಳೆದುಕೊಳ್ಳತ್ತಿರುವುದು ವಿಷಾದನೀಯ ಎಂದರು. ಈ ವೇಳೆಯಲ್ಲಿ ಹೊನ್ನಮ್ಮಗವಿ ಶ್ರೀ ಮತ್ತು ವನಕಲ್ಲು ಶ್ರೀ ಹಾಜರಿದ್ದರು, ಗ್ರಾಮದ ಯುವಕರು ಮತ್ತು ಮಕ್ಕಳು ಕೆರೆ ಬಾಗಿನ ಮತ್ತು ಬಲಿಹರಣ ನೀಡಿ, ಗ್ರಾಮಕ್ಕೆ ಯಾವುದೇ ತೊಂದರೆಯಾಗಬಾರದೆಂದು ದೇವರಲ್ಲಿ ಪ್ರಾರ್ಥಿಸಿದರು.