ಬಿಗ್‍ಬಾಸ್ ಮನೆಯಲ್ಲಿ ಕುಚುಕು ಗೆಳೆಯರಾಗಿದ್ದ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಮಧ್ಯೆ ಈ ವಾರ ಬೆಂಕಿಯಂತೆ ಕಾದಾಟ ನಡೆದಿದ್ದು, ಈ ಕುರಿತಂತೆ ಸುದೀಪ್‍ರವರು ಚಕ್ರವರ್ತಿ ಹಾಗೂ ಪ್ರಶಾಂತ್‍ರವರಿಗೆ ವಾರ್ನ್ ಮಾಡಿದ್ದಾರೆ.
Advertisement
ಶನಿವಾರದ ಪಂಚಾಯತಿಕಟ್ಟೆಯಲ್ಲಿ ವೇದಿಕೆ ಮೇಲೆ ಮನೆಯ ಸ್ಪರ್ಧಿಗಳ ತಪ್ಪುಗಳನ್ನು ತಿಳಿಸಿ ಬುದ್ಧಿ ಹೇಳಿದ ಸುದೀಪ್, ಪ್ರಶಾಂತ್ ಹಾಗೂ ಚಕ್ರವರ್ತಿ ಇಬ್ಬರು ಕೋವಿಡ್ ಸಮಯದಲ್ಲಿ ಮಾತುಗಳಿಗೂ ಸ್ಯಾನಿಟೈಸರ್ ಬಳಸುವುದು ನನ್ನ ಅನಿಸಿಕೆ. ಮಾತನಾಡುವುದು, ಜಗಳ ಮಾಡುವುದು, ಧ್ವನಿ ಎತ್ತುವುದು ತಪ್ಪಲ್ಲ. ಅಭಿಪ್ರಾಯವನ್ನು ಯಾವ ರೀತಿ ವ್ಯಕ್ತಪಡಿಸುತ್ತೇವೆ ಅದು ಎಲ್ಲರ ವ್ಯಕ್ತಿತ್ವವನ್ನು ತಿಳಿಸುತ್ತದೆ. ನೀವು ಬಳಸುವ ಪದಗಳನ್ನು ಕಟ್ ಮಾಡಿ ಹಾಕಲು ಆಗುವುದಿಲ್ಲ. ಏನು ಬರುತ್ತದೆ ಅದನ್ನು ತೋರಿಸಬೇಕಾಗುತ್ತದೆ. ಆದರೆ ಬೀಪ್, ಬೀಪ್ ಎಂದು ಹಾಕಿದರೆ ಟಿವಿಯಲ್ಲಿ ಹೇಗೆ ಕಾಣಿಸಬಹುದು. ನಾವು ಬೀಪ್ ಯಾಕೆ ಹಾಕಿರಬಹುದು ಎಂದು ಯೋಚಿಸಿ ಎಂದು ತಿಳಿ ಹೇಳಿದ್ದಾರೆ.
Advertisement
Advertisement
ಪ್ರಶಾಂತ್ ಹಾಗೂ ಕೆ.ಪಿ ಅರವಿಂದ್‍ರವರ ನಡುವೆ ಅಡುಗೆ ಮನೆಯಲ್ಲಿ ನಡೆದ ವಾದ-ವಿವಾದ ಬಗ್ಗೆ ಮಾತನಾಡಿದ ಸುದೀಪ್‍ರವರು, ನಿಮ್ಮಿಬ್ಬರ ನಡುವೆ ಕೋಪ-ತಾಪ ಇತ್ತು, ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ನನ್ನ ಪ್ರಕಾರ ನಿಮ್ಮಿಬ್ಬರ ನಡುವೆ ಜಗಳ ನಡೆಯುವ ಅವಶ್ಯಕತೆ ಇರಲಿಲ್ಲ. ಬಿಗ್‍ಬಾಸ್ ಮನೆಯಲ್ಲಿ ವೈಯಕ್ತಿಕ ವಿಚಾರಗಳು ಬೇಡ. ಪ್ರಶಾಂತ್ ಈ ವೇಳೆ ಕಿರುಚಾಡುವ ಅವಶ್ಯಕತೆ ಇತ್ತ? ನೀವು ನಡೆದುಕೊಂಡಿದ್ದು ನೋಡಿ ನಿಮಗೆ ಏನಾದರೂ ಹೆಚ್ಚು-ಕಡಿಮೆಯಾಗುತ್ತದೆಯೋ ಎಂದು ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳು ನೋಡಿ ಭಯಪಟ್ಟಿದ್ದರು. ನಿಮ್ಮನ್ನು ಈ ಮನೆಯಲ್ಲಿ ಹೀಗೆ ನೋಡುತ್ತಿರಲು ಕಾರಣವನ್ನು ಬಹಳ ಸರಳವಾಗಿ ಹೇಳುತ್ತೇನೆ. ಉದಾಹರಣೆ ತೋಳ ಬಂತು ತೋಳ ಎಂಬ ಕಥೆಯನ್ನು ನೆನಪಿಸಿದ್ದಾರೆ. ಇದನ್ನೂ ಓದಿ: ಎಷ್ಟು ಸಲ ಬೀಪ್ ಮಾಡುವುದು?- ಚಕ್ರವರ್ತಿಗೆ ಕಿಚ್ಚ ಸುದೀಪ್ ಕ್ಲಾಸ್
Advertisement