– ಮಾಜಿ ಶಾಸಕ ಸುರೇಶ್ ಬಾಬುಗೆ ಸೇರಿದ ಕಾರು
– 8 ಜನ ನಟಿಯರ ಜೊತೆ ನಂಟು
ಬೆಂಗಳೂರು: ಆಡಿಯೋ ಸುದ್ದಿ ಬಳಿಕ ಇದೀಗ ಕಾರು ಖರೀದಿ ಬಗ್ಗೆ ಅನುಮಾನ ಹುಟ್ಟಿಕೊಂಡಿದ್ದು, ಒಂದೂವರೆ ಕೋಟಿ ರೂಪಾಯಿ ಬೆಲೆ ಬಾಳುವ ಕಾರನ್ನು ಕೇವಲ 75 ಲಕ್ಷ ರೂ.ಗೆ ಯುವರಾಜ್ ಸ್ವಾಮಿ ಖರೀದಿಸಿದ್ದನಾ ಎಂಬ ಪ್ರಶ್ನೆ ಇದೀಗ ಎದ್ದಿದೆ. ಈ ಕಾರು ತುಮಕೂರಿನ ಮಾಜಿ ಶಾಸಕ ಸುರೇಶ್‍ಬಾಬ್‍ಗೆ ಸೇರಿದ್ದು, ಯಾಮಾರಿಸಿ ದುಬಾರಿ ಕಾರು ಖರೀದಿಸಿದ್ದನಾ ಎಂಬ ಅನುಮಾನ ಇದೀಗ ಮೂಡಿದೆ.
Advertisement
ಸಿಸಿಬಿ ಜಪ್ತಿ ಮಾಡಿರುವ 2 ಕಾರಲ್ಲಿ ಒಂದು ರಾಜಕಾರಣಿಯದ್ದಾಗಿದೆ. ತುಮಕೂರಿನ ಮಾಜಿ ಶಾಸಕ ಸುರೇಶ್‍ಬಾಬ್‍ಗೆ ಸೇರಿದ ಕಾರು ಇದಾಗಿದ್ದು, ಸುರೇಶ್‍ಬಾಬುಗೆ ಯಾಮಾರಿಸಿ ಯುವರಾಜ್ ಸ್ವಾಮಿ ಈ ದುಬಾರಿ ಕಾರು ಖರೀದಿಸಿದ್ನಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿಯ ರೇಂಜ್ ರೋವರ್ ಕಾರನ್ನು 75 ಲಕ್ಷಕ್ಕೆ ಕೊಡಲಾಗಿದೆಯೇ ಎಂಬ ಅನುಮಾನ ಇದೀಗ ಎದ್ದಿದೆ.
Advertisement
Advertisement
ಇತ್ತ 60+15 ಲಕ್ಷ ರೂಪಾಯಿ ಪಡೆದ ನಟಿ ರಾಧಿಕಾ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದ್ದು, ನಟಿ ರಾಧಿಕಾಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಸಿಸಿಬಿ ಪೊಲೀಸರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಸಾಕ್ಷ್ಯಾಧಾರವಿದ್ದರೂ ಒತ್ತಡದಿಂದ ಸಿಸಿಬಿ ಪೊಲೀಸರು ಸುಮ್ಮನಿದ್ದರು. ಇದೀಗ ಹಣದ ಬಗ್ಗೆ ಸ್ವತಃ ರಾಧಿಕಾ ಬಾಯ್ಬಿಟ್ಟಿರುವುದರಿಂದ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಹಣದ ಮೂಲ, ಯುವರಾಜ್ ಜೊತೆಗಿನ ನಂಟಿನ ಬಗ್ಗೆ ವಿಚಾರಣೆ ನಡೆಸಬಹುದು ಎನ್ನಲಾಗಿದೆ. ಅಲ್ಲದೆ ಹಿರಿಯ ಅಧಿಕಾರಿಗಳ ಜೊತೆ ಸಿಸಿಬಿ ಅಧಿಕಾರಿಗಳು ಈಗಾಗಲೇ ಮಾತುಕತೆಯನ್ನು ಸಹ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ನಟಿ ರಾಧಿಕಾ ಮಾತ್ರವಲ್ಲದೆ 8 ನಟಿಯರಿಗೆ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಯಾವುದೇ ಕ್ಷಣದಲ್ಲಿ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ. ಯುವರಾಜ್ ಸ್ವಾಮಿ ಬಳಿ ಹಣ ಪಡೆದ ನಟಿಯರಿಗೆ ಈಗ ಢವಢವ ಶುರುವಾಗಿದೆ. ಸ್ಟಾರ್ ನಟಿಯರನ್ನು ಸಹ ವಿಚಾರಣೆ ನಡೆಸುವ ಸಾಧ್ಯತೆ ಇದೆ.