ಮುಂಬೈ: ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ತನ್ನ ಹಳೇ ಪ್ರೇಯಸಿ ಬಾಲಿವುಡ್ ನಟಿ ಕಿಮ್ ಶರ್ಮಾ ಅವರ ಫೋಟೋಗೆ ಕಮೆಂಟ್ ಹಾಕಿ ಸುದ್ದಿಯಾಗಿದ್ದಾರೆ.
ಯುವರಾಜ್ ಸಿಂಗ್ ಅವರ ಒಂದು ಕಾಲದ ಗಾಸಿಪ್ ಪ್ರೇಯಸಿ ಎಂದು ಫೇಮಸ್ ಆಗಿದ್ದ ಕಿಮ್ ಶರ್ಮಾ ಅವರು ಇತ್ತೀಚೆಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬಿಕಿನಿ ಧರಿಸಿರುವ ಫೋಟೋ ಹಾಕಿದ್ದರು. ಈ ಫೋಟೋಗೆ ಕಮೆಂಟ್ ಹಾಕಿರುವ ಯುವರಾಜ್ ಹಳೇ ಪ್ರೇಯಸಿಯ ಕಾಲೆಳೆಯಲು ಪ್ರಯತ್ನ ಪಟ್ಟಿದ್ದಾರೆ.
ಕಿಮ್ ಶರ್ಮಾ ಅವರು ಇತ್ತೀಚೆಗೆ ಗೋವಾಗೆ ಹೋಗಿದ್ದು, ಅಲ್ಲಿನ ಬೀಚಿನಲ್ಲಿ ಕಲರ್ ಕಲರ್ ಬಿಕಿನಿ ತೊಟ್ಟು ಸೀಬೋರ್ಡ್ ಹಿಡಿದುಕೊಂಡಿರುವ ಹಾಟ್ ಫೋಟೋವನ್ನು ಹಾಕಿದ್ದಾರೆ. ಈ ಫೋಟೋಗೆ ಕಮೆಂಟ್ ಮಾಡಿದ್ದಾರೆ. ಆದರೆ ಯುವರಾಜ್ ಸಿಂಗ್ ಅವರ ಕಮೆಂಟ್‍ಗೆ ಕಿಮ್ ಶರ್ಮಾ, ದಯವಿಟ್ಟು ಇಂಗ್ಲಿಷ್ ನಲ್ಲಿ ಹೇಳಿ ಅಂತ ರಿಪ್ಲೈ ನೀಡಿದ್ದಾರೆ.
ಕೊರೊನಾ ನಂತರ ಗೋವಾಗೆ ಪ್ರವಾಸ ಹೋಗಿರುವ ಕಿಮ್ ಶರ್ಮಾ ಅವರು ಇತ್ತೀಚೆಗೆ ಅವರ ಹಾಟ್ ಫೋಟೋಗಳು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಕೂಡ ಅರೆಂಜ್ ಬಣ್ಣದ ಸ್ವಿಮ್ ಸೂಟ್ ತೊಟ್ಟು ಪೂಲಿನಲ್ಲಿ ನಿಂತಿರುವ ಫೋಟೋ ಹಾಕಿ ಅಭಿಮಾನಿಗಳನ್ನು ಸೆಳೆದಿದ್ದರು. ಈಗ ಇಂದು ಕೂಡ ಬಣ್ಣ ಬಣ್ಣದ ಬಿಕಿನಿ ಫೋಟೋ ಹಾಕಿದ್ದಾರೆ. ಇದಕ್ಕೆ ಯುವರಾಜ್ ಕಮೆಂಟ್ ಮಾಡಿದ್ದಾರೆ.
ಕಿಮ್ ಅವರನ್ನು ಒಂದು ಕಾಲದ ಯುವರಾಜ್ ಸಿಂಗ್ ಪ್ರೇಯಸಿ ಎಂದು ಕರೆಯಲಾಗುತ್ತದೆ. ಕಿಮ್ ಮೊಹಬ್ಬಾತೆಯನ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಜೊತೆಗೆ ನೆಹಲ್ಲೆ ಪೆ ಡೆಹಲ್ಲಾ, ಟಾಮ್, ಡಿಕ್ ಮತ್ತು ಹ್ಯಾರಿ, ಕೆಹ್ತಾ ಹೈ ದಿಲ್ ಬಾರ್ ಬಾರ್ ಮತ್ತು ಪದ್ಮಶ್ರೀ ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಹಲವಾರು ಸಿನಿಮಾದಲ್ಲಿ ಕಿಮ್ ನಟಿಸಿದ್ದಾರೆ. 2000 ರಲ್ಲಿ ಬಿಡುಗಡೆಯಾದ ಸುಷ್ಮಿತಾ ಸೇನ್ ಅವರ ಜಿಂದಗಿ ರಾಕ್ಸ್ ಎಂಬ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಇದಾದ ನಂತರ ಎಸ್.ಎಸ್.ರಾಜಮೌಳಿ ಅವರ ಮಗಧೀರ ಚಿತ್ರದಲ್ಲಿ ಕಿಮ್ ಶರ್ಮಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು.