ನವದೆಹಲಿ: ಮಾಜಿ ಪತ್ನಿ ಬಗ್ಗೆ ಮಾತನಾಡಿದ್ದಕ್ಕೆ ಸಿಟ್ಟಿಗೆದ್ದ 22 ವರ್ಷದ ವ್ಯಕ್ತಿ ತನ್ನ ಸ್ನೇಹಿತನನ್ನು ಕೊಲೆ ಮಾಡಿದ್ದಾನೆ.
ದಕ್ಷಿಣ ದೆಹಲಿಯ ಫತೇಹಪುರ ಬೇರಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ಸಂತ್ರಸ್ತನನ್ನು ಶೇಖರ್ ಖರ್ಕಾ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನೇಪಾಳ ನಿವಾಸಿ ತಿಲಕ್ ಬಹದ್ದೂರ್ ಎಂದು ಗುರುತಿಸಲಾಗಿದೆ. ವ್ಯಕ್ತಿ ಆರೋಪಿಯ ಮಾಜಿ ಪತ್ನಿ ವಿರುದ್ಧ ಮಾತನಾಡಿದ್ದು, ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆಗ ಸಿಟ್ಟಿಗೆದ್ದು ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ. ಆದರೆ ಆರೋಪಿ ಈಗಾಗಲೇ ಬೇರೆ ಯುವತಿ ಜೊತೆ ಸಂಬಂಧ ಹೊಂದಿದ್ದಾನೆ.
ಕೊಲೆ ಮಾಡಿದ ಬಳಿಕ ಆರೋಪಿ ನೇಪಾಳಕ್ಕೆ ತೆರಳಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಬಂಧಿಸಿದ್ದಾರೆ. ನೇಪಾಳದ ಆಂಚಲ್ ಸಾಗರ್‍ಮಾಥ್ ನಿವಾಸಿ ಖಾರ್ಖಾನನ್ನು ಆಯಾ ನಗರದ ಆತನ ರೂಮಿನಲ್ಲೇ ಕೊಲೆ ಮಾಡಲಾಗಿದೆ.
ಸಂತ್ರಸ್ತ ಖಾರ್ಖಾ ಆರೋಪಿ ತಿಲಕ್ ಬಹದ್ದೂರ್ ರೂಮ್ ಮೇಟ್ ಆಗಿದ್ದ ಎಂಬುದು ತನಿಖೆ ವೇಳೆ ಬಯಲಾಗಿದೆ. ಘಟನೆ ಬಳಿಕ ಬಹದ್ದೂರ್ ತಪ್ಪಿಸಿಕೊಂಡು ನೇಪಾಳಕ್ಕೆ ತೆರಳಲು ಯತ್ನಿಸಿದ್ದಾನೆ. ಬಳಿಕ ಪೊಲೀಸರು ಭಾರತ-ನೇಪಾಳ ಗಡಿಯಲ್ಲಿ ಪೊಲೀಸ್ ತಂಡದಿಂದ ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ಸುಮಾರು 4ಗಂಟೆ ಹೊತ್ತಿಗೆ ಉತ್ತರಾಖಂಡ್‍ನ ಸರ್ದಾ ಬಾಯರಾಜ್ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ.