ಲಕ್ನೋ: ಮಾಂತ್ರಿಕನ ಮಾತು ಕೇಳಿ ತಾನೂ ಗರ್ಭಿಣಿಯಾಗುವುದಕ್ಕೆ ಮೂರು ವರ್ಷದ ಮಗುವನ್ನು ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ಹಾರ್ದೋಯಿ ನಗರದಲ್ಲಿ ನಡೆದಿದೆ.
Advertisement
25 ವರ್ಷದ ಮಹಿಳೆಯನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ಮೃತ ಮಗು ಆಕಾಶ್(3) ಎಂದು ಗುರುತಿಸಲಾಗಿದೆ. ಮಗುವನ್ನು ಮಾಟ ಮಾಡಿ ಕೊಂದರೆ ತಾನು ಗರ್ಭಿಣಿಯಾಗುತ್ತೇನೆ ಎಂದು ಮಾಂತ್ರಿಕನೊಬ್ಬ ಹೇಳಿದ್ದರಿಂದ ಮಗುವನ್ನು ಕೊಂದೆ ಎಂದು ಪೊಲೀಸರಿಗೆ ಮಹಿಳೆ ಹೇಳಿದ್ದಾಳೆ.
Advertisement
Advertisement
ಮಾಂತ್ರಿಕನ ಮಾತು ಕೇಳಿ ಮಗುವನ್ನು ಟೆರೇಸ್ ಮೇಲೆ ಕರೆದುಕೊಂಡು ಹೋಗಿ ವಾಮಾಚಾರ ಮಾಡಿ ಮಗುವನ್ನು ಕೊಂದು ಬ್ಯಾಗ್‍ನಲ್ಲಿ ತುಂಬಿಟ್ಟಿದ್ದಳು. ಪೊಲೀಸರು ಮಗುವನ್ನು ಹುಡುಕುವ ವೇಳೆ ಮೃತದೇಹ ಸಿಕ್ಕಿದೆ. ಈ ವೇಳೆ ಮಹಿಳೆಯನ್ನು ವಿಚಾರಣೆ ನಡೆಸಿದಾಗ ಮಹಿಳೆ ಸಿಕ್ಕಿ ಬಿದ್ದಿದ್ದಾಳೆ. ಈ ಸಂಬಂಧ ಹಾರ್ದೋಯಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement