ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರಿಂದ ಒತ್ತಾಯ

Public TV
1 Min Read
protest 2

ಚಿಕ್ಕೋಡಿ: ಬಿಜೆಪಿ ಸರ್ಕಾರ ರಚನೆಗೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರ ಪಾತ್ರ ಅತೀ ದೊಡ್ಡದು. ಅವರಿಗೆ ಈ ಬಾರಿ ಸಂಪುಟ ಸಂಪುಟದಲ್ಲಿ ಸ್ಥಾನ, ಮಾನ ನೀಡುವಂತೆ ಅಥಣಿ ಪಂಚಮಸಾಲಿ ಸಮಾಜದ ಮುಖಂಡರು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

mahesh kumathalli

ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ರಮೇಶಗೌಡ ಪಾಟೀಲ್ ಮಾತನಾಡಿ, ಕಳೆದ ಉಪ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಾತು ನಂಬಿ ನಾವು ಮಹೇಶ್ ಕುಮಟಳ್ಳಿ ಅವರನ್ನು 40 ಸಾವಿರ ಅಧಿಕ ಮತಗಳಿಂದ ಆಯ್ಕೆ ಮಾಡಿ ಬಿಜೆಪಿ ಸರ್ಕಾರ ರಚನೆಗೆ ಒಟ್ಟಾಗಿ ಶ್ರಮಿಸಿದ್ದೇವೆ. ಚುನಾವಣೆ ಸಂದರ್ಭದಲ್ಲಿ, ಬಿ.ಎಸ್ ಯಡಿಯೂರಪ್ಪನವರು ಅಥಣಿ ಶಿವಯೋಗಿ ಮೇಲೆ ಪ್ರಮಾಣ ಮಾಡಿ, ಉಪ ಚುನಾವಣೆಯಲ್ಲಿ ಕುಮಟಳ್ಳಿ ಆಯ್ಕೆ ಮಾಡಿದರೆ, ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು.

BSY 7 medium

ಅವರು ಸದ್ಯ ಮಾತು ತಪ್ಪಿ ಶಿವಯೋಗಿಗಳ ಪಾಪದಿಂದ ಅಧಿಕಾರಿ ಕಳೆದು ಕೊಂಡಿದ್ದಾರೆ. ಈ ಬಾರಿ ಸಚಿವ ಸಂಪುಟದಲ್ಲಿ ಅಥಣಿ ಶಾಸಕರಿಗೆ ಅವಕಾಶ ನೀಡಿ, ಒಳ್ಳೆಯ ಶಿಕ್ಷಣ ಹೊಂದಿರುವ ಕುಮಟಳ್ಳಿ ಉತ್ತಮ ಕೆಲಸವನ್ನು ಮಾಡುತ್ತಾರೆ. ಅದರಿಂದ ಅಥಣಿ ಜನತೆಗೆ ಮಾತು ಕೊಟ್ಟಂತೆ ಬಿಜೆಪಿ ಹೈಕಮಾಂಡ್ ನಡೆದುಕೊಳ್ಳಲಿ ಇಲ್ಲವಾದರೆ ಮುಂಬರುವ ದಿನದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಮೇಶ್ ಗೌಡ ಪಾಟೀಲ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

BOMMAI 5

ಕಳೆದ ಎರಡು ದಿನದಲ್ಲಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ಮಾದ್ಯಮದಲ್ಲಿ ತಪ್ಪು ಸಂದೇಶ ಸುದ್ದಿ ಪ್ರಸಾರ ಆಗುತ್ತಿದೆ. ತಾಲೂಕಿನ ಹಾಗೂ ನೆರೆ ಸಂತ್ರಸ್ತರ ಬಗ್ಗೆ ಅಪಾರ ಗೌರವ ಹೊಂದಿರುವ ಶಾಸಕರು ಆಗಿರುವುದರಿಂದ ನಮ್ಮ ಕ್ಷೇತ್ರದ ಜನರಿಗೆ ಅವರ ಮೇಲೆ ಯಾವುದೇ ಅಸಮಾಧಾನ ಇಲ್ಲ. ಇನ್ನು ಕೆಲವು ದುರುದ್ದೇಶವಾಗಿ, ರಾಜಕೀಯವಾಗಿ ಹಳೆ ವೀಡಿಯೋ ತುಣುಕುಗಳು ಇಟ್ಟುಕೊಂಡು ಮಾಧ್ಯಮಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.  ಇದನ್ನೂ ಓದಿ:ಪ್ರವಾಹ ಸಂದರ್ಭದಲ್ಲೂ ಬಹುತೇಕ ಶಾಸಕರು ಬೆಂಗಳೂರಲ್ಲಿ ಬೀಡು

Share This Article
Leave a Comment

Leave a Reply

Your email address will not be published. Required fields are marked *