ಹಾಸನ: ಅಂಗಡಿಯ ಕ್ಯಾಶ್ ಕೌಂಟರ್ ನಲಿ ಕುಳಿತಿದ್ದ ಮಹಿಳೆ ಮುಂದೆ ಯುವಕನೊಬ್ಬ ಪ್ಯಾಂಟ್ ಬಿಚ್ಚಿ ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.
ನಗರದ ಉತ್ತರ ಬಡಾವಣೆಯಲ್ಲಿರುವ ಅಂಗಡಿಯೊಂದರಲ್ಲಿ ಘಟನೆ ನಡೆದಿದೆ. ಮಾಲೀಕ ಸ್ಟೋರ್ ಗೆ ಬೇಕಾದ ವಸ್ತುಗಳನ್ನು ತರಲು ಹೋಗಿದ್ದರಿಂದ ಅವರ ಪತ್ನಿ ಅಂಗಡಿ ನೋಡಿಕೊಳ್ಳುತ್ತಿದ್ದರು. ಕಾಮುಕ ಯುವಕ ಅಂಗಡಿಯೊಳಗೆ ಮಹಿಳೆ ಒಬ್ಬರೇ ಇರೋದನ್ನು ಗಮನಿಸಿ ಒಳಗೆ ಬಂದಿದ್ದಾನೆ. ಬಂದವನೇ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಹಸ್ತಮೈಥುನ ಮಾಡಿಕೊಂಡು ಪರಾರಿಯಾಗಿದ್ದಾನೆ. ಇದನ್ನೂ ಓದಿ: ವೈವಾಹಿಕ ಜೀವನದಲ್ಲಿ ಜಿಗುಪ್ಸೆ-ಗೆಳೆಯನ ಜೊತೆ ಜೂಟ್‍ಗೆ ಪ್ಲಾನ್- ಸಹಾಯಕ್ಕೆ ಬಂದ ಇನಿಯನ ಗೆಳೆಯನಿಂದ್ಲೇ ರೇಪ್
ಭಯಗೊಂಡ ಮಹಿಳೆ ಮೊಬೈಲಿನಲ್ಲಿ ಯುವಕನ ಫೋಟೋ ತೆಗದಯಕೊಂಡು ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಂಗಡಿಗೆ ಬಂದ ಪತಿ ಹಾಸನ ಸಿಟಿ ಪೊಲೀಸ್ ಠಾಣೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ. ಕಾಮುಕ ಯುವಕನಿಗೆ ತಕ್ಕ ಪಾಠ ಕಲಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸರಸದ ವೇಳೆ ಸಿಕ್ಕಿಬಿದ್ದ ಜೋಡಿ- ಬೆತ್ತಲೆಗೊಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ