ಮಹಿಳೆ ಜೊತೆ ಪತಿ ಪ್ರತ್ಯಕ್ಷ- ಮಾರುಕಟ್ಟೆಯಲ್ಲೇ ಮನಬಂದಂತೆ ಥಳಿಸಿದ ಪತ್ನಿ

Public TV
2 Min Read
woman

– ಮಾರುಕಟ್ಟೆ ಜನಸಂದಣಿ ನಡುವೆಯೇ ಕಪಾಳಮೋಕ್ಷ

ಲಕ್ನೋ: ಬೇರೊಬ್ಬ ಮಹಿಳೆಯ ಜೊತೆ ಪತಿ ಪ್ರತ್ಯಕ್ಷವಾಗಿರುವುದನ್ನು ಕಂಡ ಮಹಿಳೆ, ನೆರೆದಿದ್ದ ಜನರನ್ನೂ ಲೆಕ್ಕಿಸದೆ ಮನಬಂದಂತೆ ಥಳಿಸಿದ್ದು ವೀಡಿಯೋ ವೈರಲ್ ಆಗಿದೆ.

woman 2 e1615902473609

ಉತ್ತರ ಪ್ರದೇಶದ ಮೀರತ್‍ನ ಸೆಂಟ್ರಲ್ ಮಾರ್ಕೆಟ್‍ನಲ್ಲಿ ಈ ಘಟನೆ ನಡೆದಿದ್ದು, ತನ್ನ ಪತಿ ಮತ್ತೊಬ್ಬ ಮಹಿಳೆ ಜೊತೆ ಶಾಪಿಂಗ್ ಕಾಂಪ್ಲೆಕ್ಸ್‍ನಲ್ಲಿ ಕಾಣಿಸಿಕೊಂಡಿದ್ದೇ ತಡ, ಸುತ್ತ ಜನರಿದ್ದಾರೆ ಎಂಬುದನ್ನೂ ಲೆಕ್ಕಿಸದ ಮಹಿಳೆ ಪತಿಗೆ ಕಪಾಳಮೋಕ್ಷ ಮಾಡಿದ್ದಾರೆ.

ವ್ಯಕ್ತಿಯನ್ನು ಅದ್ನಾನ್ ಎಂದು ಗುರುತಿಸಲಾಗಿದ್ದು, ಬೇರೊಬ್ಬ ಮಹಿಳೆ ಜೊತೆ ಶಾಪಿಂಗ್ ಮಾಡುವಾಗ ವ್ಯಕ್ತಿ ತನ್ನ ಪತ್ನಿ ಆಯೇಶಾಗೆ ಕೈಗೆ ಸಿಕ್ಕಿಬಿದ್ದಿದ್ದಾನೆ. ತಕ್ಷಣವೇ ಸಿಟ್ಟಿಗೆದ್ದ ಆಯೇಶಾ ಜನನಿಬಿಡ ಪ್ರದೇಶವನ್ನೂ ಲೆಕ್ಕಿಸದೆ ಪತಿಯನ್ನು ಮನಬಂದಂತೆ ಥಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆಗೆ ಗಲಾಟೆ ಕಂಡು ಹೆಚ್ಚು ಜನ ಸೇರಿದ್ದರು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ, ದಂಪತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದರು.

Screenshot001

ಪೊಲೀಸ್ ಠಾಣೆಗೆ ತೆರಳಿದ ಮೇಲೆ ಸಹ ಅದ್ನಾನ್ ಹಾಗೂ ಆಯೇಶಾ ಜಗಳ ಮಾಡಿದ್ದಾರೆ. ಫೆಬ್ರವರಿ 2020 ರಂದು ದಂಪತಿಯ ವಿವಾಹವಾಗಿತ್ತು. ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು. ಅದ್ನಾನ್ ನನ್ನನ್ನು ತವರು ಮನೆಯಲ್ಲಿ ಬಿಟ್ಟಿದ್ದ. ಆದರೆ ಇಂದು ಮಾರುಕಟ್ಟೆಯಲ್ಲಿ ಅದ್ನಾನ್ ಬೇರೊಬ್ಬ ಮಹಿಳೆಯೊಂದಿಗೆ ಇದ್ದಿದ್ದನ್ನು ಆಯೇಶಾ ಗಮನಿಸಿದ್ದಾರೆ.

ಬಳಿಕ ಆಯೇಶಾ ಇಬ್ಬರನ್ನೂ ಫಾಲೋ ಮಾಡಿದ್ದಾರೆ. ಮಹಿಳೆ ಜೊತೆ ಅದ್ನಾನ್ ಶೋರೂಂಗೆ ತೆರಳುವುದನ್ನು ಸಹ ಕಂಡಿದ್ದು, ಅದ್ನಾನ್ ಹೆಚ್ಚು ಹೊತ್ತು ಶೋರೂಂನಲ್ಲೇ ಇದ್ದಿದ್ದನ್ನು ಗಮನಿಸಿದ ಆಯೇಶಾ, ಹೊರಗೆ ಬರುವಂತೆ ತಿಳಿಸಿದ್ದಾರೆ. ಇದಾದ ಬಳಿಕ ಹೊಡೆದಾಟ ಶುರುವಾಗಿದೆ. ಒಬ್ಬರಿಗೊಬ್ಬರು ಹೊಡೆದುಕೊಂಡು ರಸ್ತೆ ಮಧ್ಯೆಯೇ ಜಗಳವಾಡಿದ್ದಾರೆ.

Police Jeep 1

ಈ ಹಿಂದೆ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆಯೇಶಾ ಆರೋಪಿಸಿದ್ದಾರೆ. ನಾನು ಆಯೇಶಾಗೆ ವಿಚ್ಛೇದನ ನೀಡಿದ್ದೇನೆ ಎಂದು ಅದ್ನಾನ್ ತಿಳಿಸಿದ್ದಾನೆ. ಆಗ ವಿಚ್ಛೇದನದ ಪೇಪರ್ ತೋರಿಸುವಂತೆ ಆಯೇಶಾ ಕೇಳಿದ್ದಾರೆ. ಅಲ್ಲದೆ ಈತನನ್ನು ಜೈಲಿಗೆ ಹಾಕಬೇಕೆಂದು ಆಯೇಶಾ ಒತ್ತಾಯಿಸಿದ್ದಾರೆ. ಅದ್ನಾನ್ ಕಾನೂನಾತ್ಮಕವಾಗಿ ವಿಚ್ಛೇದನ ನೀಡಿಲ್ಲ, ನಾನು ಪೇಪರ್‍ಗೆ ಸಹಿ ಹಾಕಿಲ್ಲ ಎಂದು ಆಯೇಶಾ ತಿಳಿಸಿದ್ದಾರೆ.

ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದ್ದು, ಆಯೇಶಾ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ನನ್ನ ಮಹಿಳಾ ಸ್ನೇಹಿತೆಯೊಂದಿಗೆ ಮಾರುಕಟ್ಟೆಯಲ್ಲಿ ಇದ್ದಾಗ ಕೆಲ ಜನರೊಂದಿಗೆ ಆಗಮಿಸಿದ ಆಯೇಶಾ ನನ್ನನ್ನು ಬೈಯುತ್ತ, ಹೊಡೆದಿದ್ದಾಳೆ ಎಂದು ಅದ್ನಾನ್ ಆರೋಪಿಸಿದ್ದಾನೆ.

Police Jeep

ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಆಯೇಶಾ ಹಾಗೂ ಅದ್ನಾನ್ ನಡುವೆ ಜಗಳವಿದೆ. ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ. ಕೋರ್ಟ್‍ನಲ್ಲಿ ಇದು ಇತ್ಯರ್ಥವಾಗಬೇಕಿದೆ. ಅದ್ನಾನ್ ತನ್ನ ಸ್ನೇಹಿತೆಯೊಂದಿಗೆ ಹೋಗುತ್ತಿರುವುದನ್ನು ಸಹಿಸದೆ ಆಯೇಶಾ ಈ ರೀತಿ ವರ್ತಿಸಿದ್ದಾರೆ. ಮಾರ್ಕೆಟ್ ಪ್ರದೇಶದಲ್ಲೇ ಇಬ್ಬರೂ ಜಗಳವಾಡಿಕೊಂಡಿದ್ದಾರೆ. ಈ ಕುರಿತು ವಿಚಾರಣೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *