ಫ್ಯಾಂಟಸಿ ಲೋಕದಲ್ಲಿ ಹಲವಾರು ಅಂಡರ್‌ಕಟ್ ಹೇರ್ ಸ್ಟೈಲ್ ಎಲ್ಲರ ಕಣ್ಮನ ಸೆಳೆಯುತ್ತಿದೆ. ಕೆತ್ತಿದ ಡಿಸೈನ್ ಮತ್ತು ದಪ್ಪವಾದ ಕಲರ್ ಕಲರ್ ಬನ್ ಮೂಲಕ ಕೂದಲನ್ನು ಕಟ್ಟುವುದು, ಬೋಲ್ಡ್ ಲುಕ್ ನೀಡುತ್ತದೆ. ಈ ಶೈಲಿಯ ಹೇರ್ ಸ್ಟೈಲ್ ನೋಡಲು ಕಾಮಿಕ್ ಆಗಿದ್ದು, ಕ್ಯೂಟ್ ಲುಕ್ ನೀಡುತ್ತದೆ. ಜೊತೆಗೆ ಇದನ್ನು ಬಹಳ ಸುಲಭವಾಗಿ ನಿರ್ವಹಣೆ ಮಾಡಬಹುದು. ಸದ್ಯ ಕೆಲವೊಂದು ಸ್ಟೈಲಿಶ್ ಹೇರ್ ಕಟ್ ಈ ಕೆಳಗಿನಂತಿವೆ.
ಸ್ಮೋಕಿ ಲ್ಯಾವೆಂಡರ್ ಅಂಡರ್‌ಕಟ್
ಅಂಡರ್ ಕಟ್ ಯಾವಾಗಲು ನಿಮ್ಮ ತಲೆಯ ಹಿಂಭಾಗದಲ್ಲಿಯೇ ಇರಬೇಕೆಂದಿಲ್ಲ. ಬದಲಾಗಿ ನಿಮ್ಮ ಮುಖದ ಸೈಡ್‍ಗಳಲ್ಲಿ ಕೂಡ ಮಾಡಬಹುದಾಗಿದೆ. ನೀವು ಉದ್ದನೆಯ ಕೂದಲಿನಿಂದ ಬೇಸತ್ತಿದ್ದರೆ ಈ ಹೇರ್ ಕಟ್‍ನನ್ನು ಮಾಡಿಸಿಕೊಳ್ಳಬಹುದು. ಈ ಹೇರ್ ಸ್ಟೈಲ್ ನಿಮ್ಮ ಗಲ್ಲದಷ್ಟು ಉದ್ದಬರುತ್ತದೆ.
ಲಾಂಗ್ ಹೇರ್ ರೆಬೆಲ್ಲಿಯನ್
ಶಾಟ್ ಹೇರ್ ಕಟ್ ಮಾಡಿಸಿಕೊಳ್ಳಲು ಇಷ್ಟಪಡದವರು, ನ್ಯಾಚುರಲ್ ಆಗಿ ಲಾಂಗ್ ಹೇರ್‍ನಂತೆ ಕಾಣಿಸುವ ಅಂಡರ್ ಕಟ್ ಹೇರ್ ಸ್ಟೈಲ್‍ನನ್ನು ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಕೂದಲಿನ ತುದಿ ಕೆತ್ತಿರುವ ಡಿಸೈನ್ ನೋಡಬೇಕಾದಲ್ಲಿ ಕೂದಲನ್ನು ರಿಬ್ಬನ್ ಮೂಲಕ ಮೇಲಕ್ಕೆ ಎತ್ತಿ ಕಟ್ಟಬೇಕಾಗುತ್ತದೆ.
ಪ್ಲ್ಯಾಟಿನಮ್ ಅಂಡರ್ ಶೇವ್ಡ್ ಪಿಕ್ಸಿ
ಕೂದಲ ಹಿಂಭಾಗ ಮತ್ತು ಕೂದಲ ಬದಿಯ ಸುತ್ತಲೂ ಹಲವಾರು ಶೈಲಿಯಲ್ಲಿ ಅಂಡರ್ ಕಟ್ ಹೇರ್ ಸ್ಟೈಲ್ ಮಾಡುವ ಮೂಲಕ ನಿಮ್ಮ ಕೂದಲು ಸಖತ್ ರಾಕ್ ಆಗಿ ಕಾಣಿಸಿಸುತ್ತದೆ. ಎಲ್ಲ ಹೇರ್ ಸ್ಟೈಲ್‍ಗಿಂತ ನೀವು ವಿಭಿನ್ನವಾಗಿ ಕಾಣಸಿಕೊಳ್ಳಲು ಬಯಸಿದರೆ ಮೊಹ್ವಾಕ್ ಹೇರ್ ಸ್ಟೈಲ್‍ನನ್ನು ಆರಿಸಿಕೊಳ್ಳಿ.
ಹೇರ್ ಸ್ಟೈಲ್ ವಿತ್ ಟೂ ಡೈರೆಕ್ಷನ್
ಜೀವನಲ್ಲಿ ಒಂದು ಮಾರ್ಗವನ್ನು ಆರಿಸಿಕೊಳ್ಳವುದು ಕಷ್ಟವಾಗಿರಬಹುದು. ಆದ್ರೆ ಹೇರ್ ಸ್ಟೈಲ್‍ನನ್ನು ಎರಡು ರೀತಿಗಳಲ್ಲಿ ವಿನ್ಯಾಸಗೊಳಿಸಬಹುದು. ನೀವು ಕೂಡ ಎರಡು ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿರಬಹುದು. ಹಾಗೆಯೇ ಕೂದಲನ್ನು ಒಂದು ಕಡೆ ಉದ್ದ ಹಾಗೂ ಮತ್ತೊಂದು ಕಡೆ ಕತ್ತರಿಸಬಹುದಾಗಿದೆ.
ಸ್ಪಿಕಿ ಶೇವ್ಡ್ ಮೊಹ್ವಾಕ್ ಹೇರ್ ಸ್ಟೈಲ್
ಮೊಹ್ವಾಕ್ ಹೇರ್ ಸ್ಟೈಲ್ ಮಹಿಳೆಯರ ಹೇರ್ ಸ್ಟೈಲ್‍ಗಳಲ್ಲಿ ಬಹಳ ಫೇಮಸ್. ಇದು ಬಹಳ ಕಾಮನ್ ಹಾಗೂ ಹೆಚ್ಚಾಗಿ ಮಹಿಳೆಯರು ಇಷ್ಟಪಡುವಂತಹ ಹೇರ್ ಸ್ಟೈಲ್ ಆಗಿದೆ. ಇದನ್ನು ಹೊಂಬಣ್ಣ ಮತ್ತು ಕಪ್ಪು ಬಣ್ಣದಿಂದ ವಿನ್ಯಾಸಗೊಳಿಸಲಾಗಿದ್ದು. ಇದೊಂದು ಮಾಡ್ರೆನ್ ಹಾಗೂ ಕೂಲ್ ಹೇರ್ ಕಟ್ ಆಗಿದೆ.