ಮಹಿಳೆಗೆ ಅಶ್ಲೀಲ ಸಂದೇಶ ರವಾನಿಸಿದ ಯುವಕನಿಗೆ ಬಿತ್ತು ಗೂಸಾ

Public TV
1 Min Read
KPL

– ಲವ್ ಮಾಡ್ತೀನಿ ಅಂತ ಹೇಳ್ಕೊಂಡು ತಿರುಗಾಡ್ತಿದ್ದ ಯುವಕ

ಕೊಪ್ಪಳ: ಇಲ್ಲಿನ ಜಿಲ್ಲಾ ಆಸ್ಪತ್ರೆ ಮುಂಭಾಗ ಮಹಿಳೆಯೊಬ್ಬಳು ಯುವಕನೊಬ್ಬನನ್ನು ಹಿಗ್ಗಾಮುಗ್ಗ ಥಳಿಸಿದ್ದಾಳೆ.

ವೀರಯ್ಯ, ಚಪ್ಪಲಿ ಏಟು ತಿಂದ ಯವಕ. ಮೂಲತಃ ಕೊಪ್ಪಳ ತಾಲೂಕಿನ ನರೇಗಲ್ ನಿವಾಸಿ. ಇದೀಗ ವೀರಯ್ಯ ಮಾಡಬಾರದ ಕೆಲಸ ಮಾಡಿ ಧರ್ಮದೇಟು ತಿಂದಿದ್ದಾನೆ.

KPL 1

ಅವನಿಗಿಂತ ದೊಡ್ಡವಳು, ಅದರಲ್ಲೂ ಮದುವೆಯಾಗಿರೋ ಮಹಿಳೆಗೆ ಅಶ್ಲೀಲ ಸಂದೇಶ ಕಳಿಸಿ ತಗ್ಲಾಕ್ಕೊಂಡಿದ್ದಾನೆ. ಪದೇ ಪದೇ ಮೊಬೈಲ್ ಗೆ ಅಶ್ಲೀಲ ಸಂದೇಶದ ಜೊತೆಗೆ ನಾನು ಅವಳನ್ನ ಲವ್ ಮಾಡ್ತೀನಿ ಎಂದೂ ಊರವರ ಮುಂದೆ ಹೇಳಿಕೊಂಡಿದ್ದನು. ಹೀಗಾಗಿ ರೊಚ್ಚಿಗೆದ್ದ ಮಹಿಳೆ ವೀರಯ್ಯನನ್ನು ಮನಬಂದಂತೆ ಥಳಿಸಿದ್ದಾಳೆ.

KPL 2

ವೀರಯ್ಯ ನನ್ನ ತಮ್ಮ ತಮ್ಮ ಎಂದು ಮಹಿಳೆ ಸಲುಗೆ ಕೊಟ್ಟಿದ್ದಳು. ಆದರೆ ಅದೇ ಸಲುಗೆಯನ್ನ ದುರಪಯೋಗ ಮಾಡಿಕೊಂಡ ವೀರಯ್ಯ ಯುವತಿ ಮೊಬೈಲ್ ಗೆ ಅಶ್ಲೀಲ ಸಂದೇಶ ಕಳಿಸಿದ್ದನಂತೆ. ಇದರಿಂದ ಮಹಿಳೆಯ ಮನೆಯವರು ಅವನಿರೋ ಜಾಗಕ್ಕೆ ಬಂದು ಚಪ್ಪಲಿ ಏಟು ನೀಡಿದ್ದಾರೆ.

KPL 3

ಮಹಿಳೆ ಕೊಪ್ಪಳ ತಾಲೂಕಿನ ಹುಣಸಿಹಾಳ ತಾಂಡಾ ನಿವಾಸಿಯಾಗಿದ್ದು, ಜಾಗ ಕೊಡಿಸೋ ವಿಚಾರಕ್ಕೆ ಇವರಿಬ್ಬರ ಮಧ್ಯೆ ಪರಿಚಯವಾಗಿದೆ. ಪರಿಚಯದಿಂದ ಕಳೆದ ಒಂದು ವರ್ಷದಿಂದ ಫೋನ್ ಅಲ್ಲಿ ಮಾತಾಡಿದ್ದಾರೆ. ಮಹಿಳೆಯ ಮನೆಗೆ ವೀರಯ್ಯ ಬಂದು ಹೋಗೋದು ಮಾಡಿದ್ದಾನೆ. ಮಹಿಳೆ ಕೂಡ ತಮ್ಮ ತಮ್ಮ ಎಂದೇ ಮಾತಾನಾಡಿದ್ದಾಳೆ. ಆದರೆ ವೀರಯ್ಯ ಮಾತ್ರ ನಾನ ಅವಳನ್ನ ಲವ್ ಮಾಡ್ತೀನಿ ಎಂದು ಬಿಲ್ಡಪ್ ಕೊಟ್ಟಿದ್ದಾನೆ. ಮಹಿಳೆಯ ಊರಲ್ಲೂ ಅದನ್ನೇ ಹೇಳಿ ತಿರುಗಾಡಿದ್ದಾನೆ.

KPL 4

ವೀರಯ್ಯ ಜಿಲ್ಲಾ ಆಸ್ಪತ್ರೆ ಮುಂಬಾಗ ಎಳನೀರು ಮಾರಾಟ ಮಾಡ್ತಾನೆ. ಈ ಹಿಂದೆನೇ ಹಲವಾರು ಬಾರಿ ಮಹಿಳೆ ಎಚ್ಚರಿಕೆ ಕೊಟ್ಟಿದ್ದಳು. ಆದರೂ ವೀರಯ್ಯ ಪದೇ ಪದೇ ಫೋನ್ ಮಾಡೋದು, ಮೆಸೇಜ್ ಮಾಡೋದು ಮಾಡಿದ್ದಾನೆ. ಹೀಗಾಗಿ ಮಹಿಳೆ ಇಂದು ನಡು ರಸ್ತೆಯಲ್ಲಿ ಚಪ್ಪಲಿ ಏಟು ನೀಡಿ, ಜಾಡಿಸಿ ಒದ್ದಿದ್ದಾಳೆ.

KPL 5

ಇತ್ತ ಧರ್ಮದೇಟು ತಿಂದ ಯುವಕ ಪೊಲೀಸರನ್ನ ಕರೆಸಿ ಎಂದು ಬೇಡಿಕೊಳ್ಳುತ್ತಿದ್ದನು. ಕೊನೆಗೆ ಪೊಲೀಸರು ಬಂದು ವೀರಯ್ಯನನ್ನ ಕರೆದುಕೊಂಡು ಹೋದ್ರು. ಸದ್ಯ ವೀರಯ್ಯ ಕೊಪ್ಪಳ ಮಹಿಳಾ ಪೊಲೀಸರ ವಶದಲ್ಲಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *