ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅಕ್ಕ ಕೊರೊನಾಗೆ ಬಲಿ

Public TV
Public TV - Digital Head
1 Min Read

ಚಿಕ್ಕಮಗಳೂರು: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಹಿರಿಯ ಸಹೋದರಿ ವತ್ಸಲಾ ಇಂದು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಮೃತ ವತ್ಸಲಾ (40) ಅವರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಬೆಳಗ್ಗಿನ ಜಾವ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಏಪ್ರಿಲ್ 24ರಂದು ವೇಧಾ ಕೃಷ್ಣಮೂರ್ತಿ ತಾಯಿ ಚೆಲುವಾಂಭ(67) ಕೊರೊನಾ ಸೋಂಕಿಗೆ ಬಲಿಯಾಗಿದ್ದರು. 15 ದಿನಗಳ ಅಂತರದಲ್ಲಿ ವೇದಾ ಕೃಷ್ಣಮೂರ್ತಿ ಕೊರೊನಾದಿಂದ ಅಮ್ಮ ಹಾಗೂ ಅಕ್ಕನನ್ನ ಕಳೆದುಕೊಂಡಿದ್ದಾರೆ. ಮೃತ ವತ್ಸಲಾ ಅವರ ಪತಿ ಕೆಲ ವರ್ಷಗಳ ಹಿಂದೆಯೇ ಅಪಘಾತದಲ್ಲಿ ಸಾವನ್ನಪ್ಪಿದ್ದರು. ವತ್ಸಲಾ ಅವರಿಗೆ ಓರ್ವ ಪುತ್ರನಿದ್ದಾನೆ. ಇಂದು ತಾಲೂಕು ಆಡಳಿತದ ವತಿಯಿಂದ ಕೊರೊನಾ ನಿಯಾಮವಳಿಯಂತೆ ವತ್ಸಲಾ ಅವರ ಅಂತ್ಯಸಂಸ್ಕಾರ ನಡೆಸಲಾಗಿದೆ.

ಕಡೂರು ತಾಲೂಕಿನ ಬೀರೂರು ರಸ್ತೆಯಲ್ಲಿ ವೇಧಾ ಅವರ ಜಮೀನಿನಲ್ಲೇ ಅವರ ತಾಯಿಯ ಅಂತ್ಯಸಂಸ್ಕಾರ ನಡೆಸಿದ ಜಾಗದ ಪಕ್ಕದಲ್ಲೇ ತಾಲೂಕು ಆಡಳಿತದ ವತಿಯಿಂದ ವತ್ಸಲಾ ಅವರ ಅಂತ್ಯ ಸಂಸ್ಕಾರ ನಡೆಸಲಾಗಿದೆ.

Share This Article