ಬೆಂಗಳೂರು: ಸಿಎಂ ಗೃಹಕಚೇರಿ ಮಹಿಳಾ ಕಾನ್‍ಸ್ಟೇಬಲ್ ಕೊರೊನಾ ಟೆಸ್ಟ್ ವರದಿಯಲ್ಲಿ ಕೊರೊನಾ ವೈರಸ್ ನೆಗೆಟಿವ್ ಬಂದಿದ್ದು, ಈ ಮೂಲಕ ಆತಂಕ ದೂರವಾಗಿದೆ.
ಹೌದು. ಮಹಿಳಾ ಪೇದೆಯ ಪತಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಗೃಹ ಕಚೇರಿಯಲ್ಲಿ ನಆತಂಕ ಸೃಷ್ಟಿಯಾಗಿತ್ತು. ಅಲ್ಲದೆ ಸಿಎಂ ಅವರ ಎಲ್ಲಾ ಕಾರ್ಯಕ್ರಮಗಳನ್ನು ವಿಧಾನಸೌಧಕ್ಕೆ ಶಿಫ್ಟ್ ಮಾಡಲಾಗಿತ್ತು. ಈ ಮಧ್ಯೆ ಮಹಿಳಾ ಪೇದೆಗೂ ಕೊರೊನಾ ಟೆಸ್ಟ್ ಮಾಡಲಾಯಿತು. ಆದರೆ ಮಹಿಳೆಯ ವರದಿಯಲ್ಲಿ ನೆಗೆಟಿವ್ ಬಂದಿದ್ದು, ಸಿಬ್ಬಂದಿ ನಿಟ್ಟುಸಿರು ಬಿಡುವಂತಾಗಿದೆ.
ಆದರೂ ಸೋಮವಾರ ಸಿಎಂ ಗೃಹ ಕಚೇರಿ ಮತ್ತು ಸಿಎಂ ನಿವಾಸದಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಲು ನಿರ್ಧಾರ ಮಾಡಲಾಗಿದೆ. ಪ್ರತಿ 15 ದಿವಸಕ್ಕೊಮ್ಮೆ ಕೃಷ್ಣಾ ಮತ್ತು ಕಾವೇರಿಯಲ್ಲಿ ಕೆಲಸ ನಿರ್ವಹಿಸೋರಿಗೆ ಟೆಸ್ಟ್ ಮಾಡಲಾಗಿತ್ತು. ಇದೀಗ ಮಹಿಳಾ ಕಾನ್‍ಸ್ಟೇಬಲ್ ಪ್ರಕರಣ ಬಂದ ಬಳಿಕ ನಾಳೆ ಮತ್ತೆ ಕೊರೊನಾ ಟೆಸ್ಟ್ ಮಾಡಲಾಗುವುದು.