ಬೆಂಗಳೂರು: ಇಂದು ನಾಡಿನಾದ್ಯಂತ ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ. ಅಂತೆಯೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು. ಸಂಕಷ್ಟ, ನೋವು, ರೋಗಗಳಿಂದ ಜಗತ್ತನ್ನು ಪಾರುಮಾಡಿ, ಆ ಪರಮೇಶ್ವರನು ಸರ್ವರಿಗೂ ಮಂಗಳವನ್ನು, ಆರೋಗ್ಯವನ್ನು ಮತ್ತು ಸುಖವನ್ನು ಕರುಣಿಸಲಿ ಎಂದು ವಿಶೇಷವಾಗಿ ಪ್ರಾರ್ಥಿಸೋಣ. pic.twitter.com/8tynlbvGlh
— B.S.Yediyurappa (@BSYBJP) March 11, 2021
ಇದೇ ವೇಳೆ ಯಡಿಯೂರಪ್ಪ ಅವರು ರಾಜ್ಯದ ಜನತೆಗೆ ಶುಭಾಶಯ ಕೋರಿದರು. ಪ್ರತಿವರ್ಷದಂತೆ ಈ ವರ್ಷವೂ ದೇವರ ದರ್ಶನಕ್ಕೆ ಬಂದಿದ್ದೇನೆ. ಈ ಮೂಲಕ ರಾಜ್ಯದ ಜನತೆ ಶಿವರಾತ್ರಿ ಹಬ್ಬದ ಶುಭಾಶಯಗಳು ತಿಳಿಸ್ತೀನಿ. ಮಳೆ, ಬೆಳೆ ಚೆನ್ನಾಗಿ ಆಗಲಿ, ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಒಳ್ಳೆಯ ದಿನಗಳು ಬರಲಿವೆ. ಕೊರೊನಾ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಎಲ್ಲರೂ ಮಾಸ್ಕ್ ಸೇರಿದಂತೆ ನಿಯಮಗಳನ್ನು ಪಾಲನೆ ಮಾಡಿ ಎಂದು ಅವರು ಮನವಿ ಮಾಡಿಕೊಂಡರು.
ಜಾಗರಣೆ ವಿಶೇಷ:
ಮೂರು ಯಾಮಗಳಲ್ಲಿ ನಿದ್ರಿಸದೇ ಜಾಗರಣೆ ಮಾಡಿ ಲಿಂಗಸ್ಪರ್ಶವನ್ನು ಯಾರು ಮಾಡುತ್ತಾರೋ ಅಂತಹವರಿಗೆ ತ್ರಿಜನ್ಮದಲ್ಲಿ ಮಾಡಿರುವಂತಹ ಪಾಪಗಳು ಪರಿಹಾರ ಆಗುತ್ತೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ. ಮನುಷ್ಯ ಜೀವಿ ತನ್ನ ಜೀವಿತಾವಧಿಯಲ್ಲಿ ಅಥವಾ ಹಿಂದಿನ ಜನ್ಮದಲ್ಲಿ ಆತ ಮಾಡಿದ ಕರ್ಮಗಳಿರುತ್ತವೆ. ಆ ಎಲ್ಲ ಕರ್ಮ(ಪಾಪ)ಗಳ ನಿವಾರಣೆಗೆ ಶಿವರಾತ್ರಿಯಂದು ಜಾಗರಣೆ ಮಾಡಿ ಲಿಂಗಸ್ಪರ್ಶ ಮಾಡುವುದರಿಂದ ಕರ್ಮಾದಿಗಳೆಲ್ಲ ಪರಿಹಾರ ಆಗುತ್ತದೆ. ಶಿವರಾತ್ರಿಯಲ್ಲಿ ಲಿಂಗಸ್ಪರ್ಶ ಮಾಡಿದ್ರೆ ಗ್ರಹದೋಷಗಳು ಪರಿಹಾರ ಆಗುತ್ತದೆ. ಎಲ್ಲೆಲ್ಲಿ ಲಿಂಗ ದರ್ಶನ ಮತ್ತು ಸ್ಪರ್ಶದ ಅವಕಾಶ ನೀಡುತ್ತಾರೆ ಅಲ್ಲಿಗೆ ತೆರಳಿ ಜಾಗರಣೆ ಮಾಡಿ ಲಿಂಗವನ್ನು ಸ್ಪರ್ಶ ಮಾಡಬೇಕು ಎಂಬ ಪ್ರತೀತಿ ಇದೆ.