-ಮಳೆಯಿಂದಾಗಿ ರಿಯಾ ಜಾಮೀನು ಅರ್ಜಿ ಮುಂದೂಡಿಕೆ
ಮುಂಬೈ: ಮಂಗಳವಾರ ರಾತ್ರಿ ಸುರಿದ ಮಳೆದ ವಾಣಿಜ್ಯ ನಗರಿ ಮುಂಬೈನ ರಸ್ತೆಗಳೇ ಮಾಯವಾಗಿದ್ದು, ತಗ್ಗು ಪ್ರದೇಶಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿದೆ. ನಗರದ ಬಹುತೇಕ ರಸ್ತೆಗಳಲ್ಲಿ ಮೂರರಿಂದ ನಾಲ್ಕು ಅಡಿಯವರೆಗೆ ನೀರು ನಿಂತಿದೆ.
ಮಂಗಳವಾರ ರಾತ್ರಿ ಆರಂಭವಾದ ಮಳೆ ಬುಧವಾರ ಬೆಳಗ್ಗೆಯವರೆಗೆ ಸುರಿದಿದೆ. ಮುಂದಿನ 24 ಗಂಟೆಯೂ ಸಹ ಭಾರೀ ಮಳೆಯಾಗಲಿದೆ. ಈ ವಾರ ನಗರದಲ್ಲಿ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಬುಧವಾರದ ನಂತರ ತುಂತುರು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ರಾತ್ರಿಯ ಮಳೆ ಮುಂಬೈ ನಿವಾಸಿಗಳ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ರೈಲು ಹಳಿಗಳ ಮೇಳೆ ಮಳೆ ನೀರು ನಿಂತಿದ್ದು, ಟ್ರೈನ್ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಮಳೆ ಪರಿಣಾಮ ಭುವನೇಶ್ವರ ವಿಶೇಷ ರೈಲು ಇಂದು ರಾತ್ರಿ 10 ಗಂಟೆಗೆ ಹೊರಡಲಿದೆ. ಹಾಗೆ ಗದಗ-ಮುಂಬೈ-ಗದಗ, ಹೈದರಾಬಾದ್- ಮುಂಬೈ ರೈಲುಗಳನ್ನು ತಾತ್ಕಲಿಕವಾಗಿ ರದ್ದುಗೊಳಿಸಲಾಗಿದೆ.
ಇನ್ನು ಮಹಾನಗರದಲ್ಲಿ ರಸ್ತೆಗಳಲ್ಲಿ ನೀರು ಹರಿಯುತ್ತಿರುವ ಪರಿಣಾಮ ಟ್ರಾಫಿಕ್ ಉಂಟಾಗಿದ್ದು, ತಗ್ಗು ಪ್ರದೇಶದ ಜನರು ಮನೆಯಿಂದ ನೀರು ಹೊರ ಹಾಕುವಲ್ಲಿ ನಿರತರಾಗಿದ್ದಾರೆ. ದಕ್ಷಿಣ ಮುಂಬೈನ ನಾಯರ್ ಆಸ್ಪತ್ರೆಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ಇತ್ತ ಮಳೆಯಿಂದಾಗಿ ಹೈಕೋರ್ಟಿಗೆ ರಜೆ ಘೋಷಿಸಿದ ಪರಿಣಾಮ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆಯಾಗಿದೆ.