– ಮಹಾರಾಷ್ಟ್ರದಿಂದ್ಲೇ 547 ಮಂದಿಗೆ ಪಾಸಿಟಿವ್
ನವದೆಹಲಿ: ರಾಜ್ಯದಲ್ಲಿ ಕಳೆದೊಂದು ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆ ಪ್ರತಿದಿನ ಶತಕದ ಗಡಿ ದಾಟುತ್ತಿದೆ. ಈ ಶತಕದ ಸೀಕ್ರೆಟ್ ಬೆನ್ನು ಹತ್ತಿ ನೋಡಿದರೆ ಅಲ್ಲಿ ‘ಮಹಾ’ ಎಡವಟ್ಟು ಆಗಿರುವುದು ಗೊತ್ತಾಗ್ತಿದೆ. ಮಹಾರಾಷ್ಟ್ರದಿಂದ ಬರುತ್ತಿರುವ ಜನರಿಂದ ರಾಜ್ಯದಲ್ಲಿ ಸೋಂಕು ಗಣನೀಯ ಏರಿಕೆ ಕಾಣುತ್ತಿದ್ದು, ಇಲ್ಲೇ ಹೀಗಾದರೆ ಮಹಾರಾಷ್ಟ್ರದಲ್ಲಿ ಏನಾಗ್ತಿದೆ. ಕೊರೊನಾ ರಣಕೇಕೆಗೆ ಮಹಾರಾಷ್ಟ್ರ ಸರ್ಕಾರ ಥಂಡಾ ಹೊಡೆದಿದ್ದು ಯಾಕೆ ಎಂಬ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಲಾಕ್ ಡೌನ್ ವಿನಾಯ್ತಿ ಬೆನ್ನಲ್ಲೇ ಸೋಂಕಿತರ ಸಂಖ್ಯೆ ಪ್ರತಿದಿನ ಶತಕ ಬಾರಿಸಲು ಆರಂಭಿಸಿದೆ. ರಾಜ್ಯದಲ್ಲಿ ಹೀಗೆ ಕೊರೊನಾ ಆರ್ಭಟಿಸಲು ಕಾರಣ ಮಹಾರಾಷ್ಟ್ರ. ಹೌದು ಮಹಾರಾಷ್ಟ್ರ ಅದ್ರಲ್ಲೂ ಮುಂಬೈನಿಂದ ರಾಜ್ಯಕ್ಕೆ ಬರುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಬಂದವರ ಪೈಕಿ ಬಹುತೇಕ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ತಿದ್ದು ಇಡೀ ರಾಜ್ಯ ಆತಂಕಕ್ಕೀಡಾಗಿದೆ.
ಮಹಾರಾಷ್ಟ್ರದಲ್ಲಿದ್ದ ಜನರು ಹೀಗೆ ದಿಕ್ಕಪಾಲಾಗಿ ರಾಜ್ಯಕ್ಕೆ ಓಡಿ ಬರೋದಕ್ಕೆ ಕಾರಣ ಮಹಾರಾಷ್ಟ್ರದಲ್ಲಿ ಕೊರೊನಾ ರೌದ್ರ ನರ್ತನ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಸಾವಿರ ಲೆಕ್ಕದಲ್ಲಿ ದುಪ್ಪಟ್ಟಾಗುತ್ತಿದೆ. ನಿನ್ನೆ ಒಂದೇ ದಿನ ಮಹಾರಾಷ್ಟ್ರದಲ್ಲಿ 2,345 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ ಮುಂಬೈನಲ್ಲೇ 1,342 ಪ್ರಕರಣಗಳು ಪತ್ತೆಯಾಗಿದ್ದು ಮಹಾರಾಷ್ಟ್ರ ಪ್ರತಿದಿನ ಬೆಸ್ತು ಬಿಳ್ತಿದೆ. ನಾವಿಲ್ಲಿ ನೂರರ ಸಂಖ್ಯೆ ನೋಡಿ ಆಘಾತಗೊಳ್ತಿತ್ತಿದ್ದೇವೆ ಆದರೆ ಮಹಾರಾಷ್ಟ್ರದಲ್ಲಿ ಸಾವಿರ ಅನ್ನೊದು ಕಾಮನ್ ಆಗಿ ಹೋಗಿದೆ.
ಮಹಾರಾಷ್ಟ್ರದಲ್ಲಿ ಈವರೆಗೂ 41,642 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಈ ಪೈಕಿ 2,5000ಕ್ಕೂ ಹೆಚ್ಚು ಪ್ರಕರಣ ಮುಂಬೈನದು ಎನ್ನುವುದು ಗಮನಾರ್ಹ. ಇಡೀ ದೇಶದಲ್ಲಿ ಶೇ.38 ಸೋಂಕಿತರು ಮಹಾರಾಷ್ಟ್ರವೊಂದರಲ್ಲೇ ಇದ್ದಾರೆ. ಹೀಗಾಗಿ ಮಹಾರಾಷ್ಟ್ರದಿಂದ ಜನರು ಎದ್ನೊ ಬಿದ್ನೋ ಅಂತ ಮೂಲ ರಾಜ್ಯಗಳಿಗೆ ವಾಪಸ್ ಬರಲು ಆರಂಭಿಸಿದ್ದಾರೆ.
ಹೀಗೆ ಮಹರಾಷ್ಟ್ರದಲ್ಲಿ ಕೊರೊನಾ ಅಬ್ಬರಿಸುತ್ತಿದ್ದರೇ ಸರ್ಕಾರ ಪರಿಸ್ಥಿತಿ ನಿಭಾಯಿಸಲಾಗದೇ ಸುಸ್ತು ಹೊಡೆದು ಹೋಗಿದೆ. ಕೊರೊನಾ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದ್ದು ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಸೃಷ್ಟಿಯಾಗಿದೆ. ಇದಕ್ಕಾಗಿ ಮಹಾರಾಷ್ಟ್ರದಲ್ಲಿರುವ ಎಲ್ಲ ಖಾಸಗಿ ಆಸ್ಪತ್ರೆಗಳು ಶೇ.80 ಬೆಡ್ ಗಳನ್ನು ಕೊರೊನಾ ರೋಗಿಗಳಿಗೆ ಮೀಸಲಿಡುವಂಯೆ ಕಟ್ಟಾಜ್ಞೆ ಹೊರಡಿಸಿದೆ. ಮುಂಬೈವೊಂದರಲ್ಲೇ 4.400 ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ಕೊರೊನಾಗೆ ಮಿಸಲಿಟ್ಟು ದರ ಪಟ್ಟಿ ನಿಗದಿಸಿ ಹೊಸ ಅಧಿಸೂಚನೆ ಹೊರಡಿಸಲಾಗಿದೆ.
ಖಾಸಗಿ ಕ್ಲಿನಿಕ್ ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಇತರೆ ಅರೇ ವೈದ್ಯಕೀಯ ಸಿಬ್ಬಂದಿ ಕೂಡ ಸರ್ಕಾರ ನಿಯೋಜಿಸಿದ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಕೆಲಸ ಮಾಡದಿದ್ದರೇ ಪರವಾನಿಗೆ ರದ್ದು ಮಾಡುವ ಎಚ್ಚರಿಕೆ ನೀಡಲಾಗಿದೆ. ಒಟ್ಟಿನಲ್ಲಿ ಮುಂಬೈ ಮತ್ತು ಮಹಾರಾಷ್ಟ್ರ ದಲ್ಲಿ ಸಾಗರದ ಅಲೆಗಳಂತೆ ಸೋಂಕು ಅಪ್ಪಳಿಸುತ್ತಿದ್ದು ಅಲ್ಲಿಂದ ಜನರು ಕರ್ನಾಟಕ ಸೇರಿ ಇತರೆ ಮೂಲ ಪ್ರದೇಶಗಳಿಗೆ ವಾಪಸ್ ಆಗುತ್ತಿದ್ದಾರೆ. ಈಗ ಮಹಾ ಸೋಂಕಿನಿಂದ ನೆರೆ ರಾಜ್ಯಗಳಲ್ಲಿ ಕೊರೊನಾ ಪ್ರಮಾಣ ಏರಿಕೆ ಆಗ್ತಿರುವುದು ದೊಡ್ಡ ಆತಂಕ ಸೃಷ್ಟಿಸಿದೆ.