-ಗ್ರಾಮೀಣ ಭಾಗದಲ್ಲಿ ಕೊರೊನಾ ಎರಡನೇ ಅಲೆ ಹಬ್ಬುವ ಆತಂಕ
ಯಾದಗಿರಿ: ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ ಡೌನ್ ಭೀತಿ ಹಿನ್ನೆಲೆ ಮಹಾರಾಷ್ಟ್ರ ತೊರೆದು ಯಾದಗಿರಿ ಜಿಲ್ಲೆಗೆ ಬರುತ್ತಿರುವ ಕಾರ್ಮಿಕರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಮತ್ತೆ ಉದ್ಧಟತನ ತೋರುತ್ತಿದ್ದಾರೆ.
Advertisement
ಅಂತರ್ ರಾಜ್ಯ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಹಿನ್ನೆಲೆ ರೈಲ್ವೆ ನಿಲ್ದಾಣದ ಮುಖ್ಯ ಗೇಟ್‍ನಲ್ಲಿ ಕೋವಿಡ್ ಟೆಸ್ಟ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಪ್ರಯಾಣಿಕರು ಕೋವಿಡ್ ಟೆಸ್ಟ್ ಮಾಡಿಸಿದರೆ ಮಾತ್ರ, ರೈಲ್ವೆ ನಿಲ್ದಾಣದಿಂದ ಹೊರಗಡೆ ತೆರಳಬಹುದು. ಆದರೆ ಕೋವಿಡ್ ಟೆಸ್ಟ್ ಮಾಡಿಸಲು ಮತ್ತು ಒಂದು ವೇಳೆ ಪಾಸಿಟಿವ್ ಬಂದರೆ ಆಸ್ಪತ್ರೆ ಸೇರುವ ಭಯದಿಂದ, ಕಾರ್ಮಿಕರು, ಹಿರಿಯರ ನಾಗರಿಕರು ಮತ್ತು ಮಹಿಳೆಯರು ಸಹ ಪ್ರಾಣಾಪಾಯವನ್ನು ಲೆಕ್ಕಿಸದೆ ರೈಲ್ವೆ ನಿಲ್ದಾಣದಲ್ಲಿ ಗೋಡೆ, ಬೇಲಿಯನ್ನು ಹಾರುತ್ತಿದ್ದಾರೆ. ಆರೋಗ್ಯ ಸಿಬ್ಬಂದಿ ಎಷ್ಟೇ ಮನವಿ ಮಾಡಿಕೊಂಡರು, ತಲೆ ಕೆಡಿಸಿಕೊಳ್ಳದ ಮಹಾರಾಷ್ಟ್ರ ಪ್ರಯಾಣಿಕರು ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿ ಊರು ಸೇರುತ್ತಿದ್ದಾರೆ.
Advertisement
Advertisement
ಯಾವುದೇ ಟೆಸ್ಟ್ ಮಾಡಿಸದೇ ಊರಿಗೆ ಸೇರುವ ಕಾರ್ಮಿಕರಿಂದ ಯಾದಗಿರಿ ಜಿಲ್ಲೆಗೆ ಕೊರೊನಾ ಎರಡನೇ ಅಲೆ ಆತಂಕ ಶುರುವಾಗಿದೆ. ಕಳ್ಳದಾರಿ ಹಿಡಿದು ಹಳ್ಳಿಗಳತ್ತ ಓಡುತ್ತಿರುವ ಕಾರ್ಮಿಕರಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ.