ಮುಂಬೈ: ಕೊರೊನಾದಿಂದಾಗಿ ಮುಚ್ಚಿದ್ದ ಶಾಲಾ ಕಾಲೇಜುಗಳು ಮತ್ತೆ ಪುನರಾರಂಭವಾಗುತ್ತಿದೆ. ಈ ನಡುವೆ ಮಹಾರಾಷ್ಟ್ರ ಸರ್ಕಾರ ಶಾಲಾ, ಕಾಲೇಜುಗಳಲ್ಲಿ ಕಲಿಯುತ್ತಿರುವ ಮಕ್ಕಳ ಶುಲ್ಕದಲ್ಲಿ ಶೇ.15 ಕಡಿತಗೊಳಿಸುವಂತೆ ಆದೇಶ ಹೊರಡಿಸಿದೆ.
ಈಗಾಗಲೇ ಶಾಲಾ, ಕಾಲೇಜುಗಳು ವಿದ್ಯಾರ್ಥಿಗಳಿಂದ ಶುಲ್ಕವನ್ನು ಪಾವತಿ ಮಾಡಿಸಿಕೊಂಡಿದ್ದರೆ, ಅದರಲ್ಲಿ ಶೇ.15 ಶುಲ್ಕವನ್ನು ಮರುಪಾವತಿ ಮಾಡುವಂತೆ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದನ್ನೂ ಓದಿ: ಗುಜರಾತ ರಾಜಕಾರಣದಲ್ಲಿ ಸೆಕ್ಸ್ ಸಿಡಿ ಸದ್ದು – ಬಿಜೆಪಿ ಸಂಸದನ ಪುತ್ರರಿಂದ ದೂರು ದಾಖಲು
ಶಾಲೆಗಳಲ್ಲಿ ಕಟ್ಟಿಸಿಕೊಂಡಿರುವ ಶುಲ್ಕವನ್ನು ಶೇ.15 ಕಡಿತಗೊಳಿಸಿದ್ದು, ಖಾಸಗಿ ಶಾಲೆಗಳು ಮತ್ತು ಸರ್ಕಾರದ ಅನುದಾನ ರಹಿತ ಶಾಲೆಗಳು ಕೂಡ ಸರ್ಕಾರದ ಆದೇಶವನ್ನು ಪಾಲಿಸಬೇಕಾಗಿ ತಿಳಿಸಿದ್ದು, ಈ ಆದೇಶದಿಂದಾಗಿ ಹಲವಾರು ಮಕ್ಕಳ ಪೋಷಕರಿಗೆ ವರದಾನವಾಗಿದೆ. ಕೊರೊನಾ ಕಷ್ಟಕಾಲದಲ್ಲಿ ಶಾಲಾ ಶುಲ್ಕ ಕಟ್ಟಲು ಪರದಾಡುತ್ತಿದ್ದ ಮಕ್ಕಳ ಪೋಷಕರು ಈ ಆದೇಶವನ್ನು ಸ್ವಾಗತಿಸಿದ್ದಾರೆ.