ಮುಂಬೈ: ನಾಸಿಕ್ ಆಸ್ಪತ್ರೆಯ ದುರಂತ ಮಾಸುವ ಮುನ್ನವೇ ಮುಂಬೈನ ವಿಜಯ್ ವಲ್ಲಭ್ ಆಸ್ಪತ್ರೆಯ ಅಗ್ನಿ ಅವಘಡದಲ್ಲಿ 12 ರೋಗಿಗಳು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದ ವಿರಾರ್ ನಲಿಯ ವಿಜಯ್ ವಲ್ಲಭ್ ಆಸ್ಪತ್ರೆಯ ಐಸಿಯು ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬೆಡ್ ಮೇಲಿದ್ದ ರೋಗಿಗಳು ಹೊರ ಬರಲಾರದೇ ವಾರ್ಡ್ ನಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಐಸಿಯುನಲ್ಲಿ ಒಟ್ಟು 17 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
Advertisement
12 patients have died in the fire at Vasai Covid hospital: Corona Control Room, Vasai Virar Municipal Corporation
— ANI (@ANI) April 23, 2021
Advertisement
ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಳಗಿನ ಜಾವ ಮೂರು ಗಂಟೆಗೆ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ. ಮೃತ 12 ಜನರೆಲ್ಲರೂ ಕೊರೊನಾ ಸೋಂಕಿತರು ಆಗಿದ್ದಾರೆ. ಇನ್ನುಳಿದ ರೋಗಿಗಳ ಹತ್ತಿರ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
Advertisement
ಏಪ್ರಿಲ್ 21ರಂದು ನಾಸಿಕ್ ನಗರದ ಜಾಕೀರ್ ಹುಸೇನ್ ಆಸ್ಪತ್ರೆ ಮುಂದೆ ಟ್ಯಾಂಕರ್ ನಿಂದ ಆಕ್ಸಿಜನ್ ಸೋರಿಕೆಯಾದ ಪರಿಣಾಮ, ರೋಗಿಗಳಿಗೆ ಪ್ರಾಣವಾಯು ಸರಬರಾಜು ನಿಂತುಹೋಗಿ ಮೃತ್ಯು ರಣಕೇಕೆ ಹಾಕಿತ್ತು. 22 ಮಂದಿ ರೋಗಿಗಳು ಆಕ್ಸಿಜನ್ ಸಿಗದೇ ಉಸಿರು ಚೆಲ್ಲಿದ್ದರು. ಆಸ್ಪತ್ರೆಯಲ್ಲಿ 700 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. 170 ಮಂದಿಗೆ ವೆಂಟಿಲೇಟರ್ ಬೆಡ್, ಆಕ್ಸಿಜನ್ ಪೂರೈಕೆ ಇದ್ದ ಬೆಡ್‍ಗಳಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು.
Advertisement
ಆದರೆ ಇದ್ದಕ್ಕಿದ್ದಂತೆ ಟ್ಯಾಂಕರ್‍ನಿಂದ ಆಕ್ಸಿಜನ್ ಲೀಕ್ ಆಗಿ, ಸುಮಾರು ಅರ್ಧಗಂಟೆ ಪ್ರಾಣವಾಯು ಪೂರೈಕೆ ಸ್ಥಗಿತಗೊಂಡಿತ್ತು. ಈ ವೇಳೆ ವೆಂಟಿಲೇಟರ್‍ನಲ್ಲಿದ್ದ 22 ಮಂದಿ ಪ್ರಾಣ ಕಳೆದುಕೊಂಡಿದ್ದರು. ಉಳಿದ ರೋಗಿಗಳನ್ನು ತುರ್ತಾಗಿ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿರತ್ತು.