ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಲಾಕ್‍ಡೌನ್‍ನನ್ನು ಜೂನ್ 15 ರವರೆಗೆ ವಿಸ್ತರಿಸಲಾಗಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
Advertisement
ಕೊರೊನಾ ಪಾಸಿಟಿವ್ ಶೇಕಡಾ ಪ್ರಮಾಣ 10 ಕ್ಕಿಂತ ಕಡಿಮೆ ಮತ್ತು ಆಕ್ಸಿಜನ್, ಬೆಡ್‍ಗಳು ಶೇಕಡಾ 40ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಕೋವಿಡ್ ನಿರ್ಬಂಧಗಳನ್ನು ಹಂತ ಹಂತವಾಗಿ ತೆಗೆಯಲಾಗುತ್ತದೆ. ಮತ್ತೊಂದೆಡೆ ಪ್ರಕರಣಗಳು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಇದನ್ನು ಓದಿ: ಕೊರೊನಾದಿಂದ ಮೃತಪಟ್ಟ ಪತ್ರಕರ್ತರಿಗೆ 10 ಲಕ್ಷ ಪರಿಹಾರ: ಸಿಎಂ ಯೋಗಿ ಆದಿತ್ಯನಾಥ್
Advertisement
ಹಲವಾರು ಮಂದಿ ಲಾಕ್‍ಡೌನ್ ತೆರವುಗೊಳಿಸದಿದ್ದರೆ, ಆಂದೋಲನ ನಡೆಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅವರಿಗೆ ತಾಳ್ಮೆಯಿಂದ ಇರಬೇಕೆಂದು ನಾನು ವಿನಂತಿಸುತ್ತೇನೆ. ಅಲ್ಲದೆ ನಾವು ತುಂಬಾ ಕಟ್ಟುನಿಟ್ಟಾದ ಲಾಕ್‍ಡೌನ್ ವಿಧಿಸಿಲ್ಲ. ನಿರ್ಬಂಧಗಳನ್ನು ನಿಮ್ಮ ಮೇಲೆ ಹೇರಿ ನಾನು ಆನಂದಿಸುತ್ತಿಲ್ಲ. ಆದರೆ ಈ ಸಮಯದಲ್ಲಿ ನಿರ್ಬಂಧದ ಅವಶ್ಯಕತೆ ಇದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
Advertisement
CM Uddhav Balasaheb Thackeray addressing the state https://t.co/W0FQgkntug
— CMO Maharashtra (@CMOMaharashtra) May 30, 2021